ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಶ್ರೀ.ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ.ಡಿ ವೇದವ್ಯಾಸ್ ಕಾಮತ್ ಅವರು ಮಂಜೇಶ್ವರದ ಶ್ರೀ ಮತ್ ಅನಂತೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ನಂತರ ಮನೆ ಮನೆ ಸಂಪರ್ಕಕ್ಕೆ ತೆರಳಿ, ಮತದಾರರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಹಾಗೂ ಮಂಜೇಶ್ವರದ ಇನ್ಫೆನ್ಟ್ ಜೀಸಸ್ ಚರ್ಚ್ ಗೆ ಭೇಟಿ ನೀಡಿ ಮಾತಯಾಚಿಸಿದರು.
8:10:45