ಮಂಜೇಶ್ವರ: ವರ್ಕಾಡಿ ಪರಿಸರದ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ಪತ್ರಿಕಾ ವರದಿಗಾರರಿಗೆ ನೀಡುತ್ತಿದ್ದ ವರ್ಕಾಡಿ ಬಳಿಯ ಬೋರ್ಕಳ ನಿವಾಸಿ ವಾಮನ್ ಬೋರ್ಕಳ (56) ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಅಪರಾಹ್ನ 12.45 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ 1 ವರ್ಷದಿಂದ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ದಿವಂಗತರಾದ ಪುಟ್ಟ ಶೆಟ್ಟಿಗಾರ್ - ಗಿರಿಜಾ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಮೀನಾಕ್ಷಿ, ಮಕ್ಕಳಾದ: ಪ್ರೀತಿಕಾ, ಕೃತಿಕಾ, ಸಹೋದರ - ಸಹೋದರಿಯರಾದ: ಮಹಾಬಲ ಶೆಟ್ಟಿಗಾರ್ ಬೋರ್ಕಳ, ವಸಂತ್ ಶೆಟ್ಟಿಗಾರ್ ಬೋರ್ಕಳ, ಸರೋಜಿನಿ, ಗೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಮಧ್ಯಾಹ್ನ 3 ರ ಒಳಗೆ ಮನೆಗೆ ತರಲಾಗುವುದು, ಬಳಿಕ ಸಂಜೆ 6 ರ ಒಳಗೆ ಅಂತ್ಯಕ್ರಿಯೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ವಾಮನ್ ಬೋರ್ಕಳ ರವರು 1997 ರಿಂದ ಸುಂಕದಕಟ್ಟೆಯ ಬೇಕರಿ ಪಿ.ಸಿ ರಸ್ತೆ ಬಳಿ "ಬೋರ್ಕಳ ಟ್ರೇಡರ್ಸ್" ಎಂಬ ಜೀನಸಿ ಸಾಮಗ್ರಿ ಸಂಸ್ಥೆಯನ್ನು ಹೊಂದಿದ್ದು, ವಿವಿಧ ಪತ್ರಿಕೆಗಳ ವಿತರಕರು ಆಗಿದ್ದರು. ಅಲ್ಲದೇ ಹವ್ಯಾಸಿ ಪತ್ರಕರ್ತರಾಗಿದ್ದು, ಯಕ್ಷಗಾನ ಪ್ರೇಮಿ, ಗೀತಾ ಸಾಹಿತ್ಯ ಸಂಭ್ರಮದ ಪ್ರೋತ್ಸಾಹಕರೂ ಆಗಿದ್ದು, ಯಕ್ಷಗಾನ ಹಾಗೂ ಗೀತಾ ಸಾಹಿತ್ಯ ಸಂಭ್ರಮದ ಹಲವು ಕಾಯಕ್ರಮಗಳ ಪ್ರಾಯೋಜಕತ್ವವನ್ನು ಕೂಡಾ ತಾವೇ ವಹಿಸಿದ್ದರು. ಊರಿನ ಧಾರ್ಮಿಕ, ಸಾಮಾಜಿಕ, ಸಂಸ್ಕೃತಿಕ ಕಾರ್ಯಕ್ರಮಗಳ ವರದಿಗಳನ್ನು ಸ್ವತಃ ತಾವೇ ಬರೆದು ಪತ್ರಕರ್ತ ಮಿತ್ರರಿಗೆ ಹಾಗೂ ವಿವಿಧ ಪತ್ರಿಕೆಗಳಿಗೆ ಕಳುಹಿಸಿ ಕೊಡುತ್ತಿದ್ದರು. ಎಲ್ಲರೊಂದಿಗೆ ಒಡನಾಟ ಹೊಂದಿದ್ದ ವಾಮನ್ ರ ಅಗಲುವಿಕೆ ಸುಂಕದಕಟ್ಟೆ ಹಾಗೂ ಮಜೀರಪಲ್ಲ ಭಾಗದಲ್ಲಿ ಸೂತಕದ ಕರಿ ಛಾಯೆಯನ್ನು ಮೂಡಿಸಿದೆ. ವಾಮನ್ ಬೋರ್ಕಳ ರ ಅಕಾಲ ನಿಧನಕ್ಕೆ "ನಮ್ಮ ಮಂಜೇಶ್ವರ ನ್ಯೂಸ್" ವೆಬ್ಸೈಟ್ ಹಾಗೂ ಪತ್ರಕರ್ತರಾದ: ಹರ್ಷಾದ್ ವರ್ಕಾಡಿ, ಪ್ರದೀಪ್ ಬೇಕಲ್, ಸಾ.ಸಾ. ನೆಲ್ಲಿಕುಂಜೆ, ಜಯ ಮಣಿಯಂಪಾರೆ, ರತನ್ ಕುಮಾರ್ ಹೊಸಂಗಡಿ, ಶ್ರೀಕಾಂತ್ ಕಾಸರಗೋಡು, ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ, ಜಗನ್ನಾಥ ಶೆಟ್ಟಿ ಪಾವಳ ಗುತ್ತು ಗಾಢವಾದ ಸಂತಾಪ ಸೂಚಿಸಿದ್ದಾರೆ.
(ಜಾಹೀರಾತು)