Breaking Posts

6/trending/recent
Type Here to Get Search Results !

8:10:45

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 5 ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ –2026 ಮೇ 16 ರಂದು ಕುಡಾಲುಮೆರ್ಕಳ ಶಾಲೆಯಲ್ಲಿ.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 5 ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ –2026 ಮೇ 16 ರಂದು ಕುಡಾಲುಮೆರ್ಕಳ ಶಾಲೆಯಲ್ಲಿ.


ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ 5 ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ–2026 ಇದೇ ಮೇ 16 ರಂದು ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನೆ ಸಭೆ ಏಪ್ರಿಲ್ 19, 2026 ರಂದು ಸದ್ರಿ ಶಾಲೆಯಲ್ಲಿ ನಡೆಯಿತು. ಸಭೆಯನ್ನು ಜಿಪಂ ಸದಸ್ಯ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಬಶೀರ್ ಕೊಟ್ಟೂಡಲ್, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ರೈ ಹಾಗೂ ಅಜೀಜ್ ಚೇವಾರ್, ಲಕ್ಷ್ಮಣ ಪ್ರಭು, ನ್ಯಾಯವಾದಿ ಥೋಮಸ್ ಡಿ ಸೋಜಾ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿದರು. ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಭೆಯಲ್ಲಿ ಉತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ಎ. ಖಾದರ್ ಹಾಜಿ , ಅಧ್ಯಕ್ಷರಾಗಿ ಸೋಮಶೇಖರ ಜೆ.ಎಸ್., ಉಪಾಧ್ಯಕ್ಷರಾಗಿ ಬಿ.ಎ. ಬಶೀರ್, ಪ್ರಧಾನ ಸಂಚಾಲಕರಾಗಿ ಅಶೋಕ ಭಂಡಾರಿ ಆಯ್ಕೆಯಾದರು. ಸಂಚಾಲಕರಾಗಿ ಮುಹಮ್ಮದಲಿ ಬಿ. ಕೆ ಹಾಗೂ ಬಿ.ಎ. ಅಬ್ದುಲ್ ಲತೀಫ್, ಕೋಶಾಧಿಕಾರಿಯಾಗಿ ಶ್ರೀಕಾಂತ್ ನೆಟ್ಟಣಿಗೆ ನೇಮಕಗೊಂಡರು.
                               (Advt)
ವಿವಿಧ ಉಪಸಮಿತಿಗಳು:

         ಹಣಕಾಸು : ರಾಘವ ಚೇರಾಲ್ (ಅಧ್ಯಕ್ಷ), ಎ.ಆರ್. ಸುಬ್ಬಯ್ಯಕಟ್ಟೆ(ಸಂಚಾಲಕ), ಆಹಾರ: ಶಶಿಕಲಾ ರೈ (ಅಧ್ಯಕ್ಷೆ), ಮುಹಮ್ಮದ್ ಕುಞ, ನಳಿನಾಕ್ಷಿ, ಪುಷ್ಪಾ (ಸಂಚಾಲಕಿಯರು), ಸಾಂಸ್ಕೃತಿಕ: ಸುಭಾಶ್ ಪೆರ್ಲ (ಅಧ್ಯಕ್ಷ ), ಎಸ್.ಕೆ. ಬಾಲಕೃಷ್ಣ (ಸಂಚಾಲಕ), ವೇದಿಕೆ ರವಿ ನಾಯ್ಕಾಪು (ಅಧ್ಯಕ್ಷ), ರಾಧಾಕೃಷ್ಣ ಉಳಿಯತ್ತಡ್ಕ (ಸಂಚಾಲಕ), ಮೆರವಣಿಗೆ : ಖಲೀಲ್ ಕೆ.ಕೆ.ಎಸ್ (ಅಧ್ಯಕ್ಷ), ಅಬ್ಬಾಸ್, ಅಶ್ರಫ್ ಸುಬ್ಬಯ್ಯಕಟ್ಟೆ, ಬಾಪಕುಞ ಕುಡಾಲ್ (ಸಂಚಾಲಕರು), ಅಲಂಕಾರ: ಮನಾಫ್ ಸುಬ್ಬಯ್ಯಕಟ್ಟೆ (ಅಧ್ಯಕ್ಷ), ಆನಂದ ಲಂಕಿನಡ್ಕ, ಎಸ್.ಕೆ. ಚಂದ್ರಶೇಖರ (ಸಂಚಾಲಕರು).
      ಇಡೀ ದಿನ ನಡೆಯುವ ಈ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಿರಿಯ ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಚಿವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಂಘ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.