Breaking Posts

6/trending/recent
Type Here to Get Search Results !

8:10:45

ಮಿತ್ರವೃಂದ ಲೈಬ್ರರಿ ಮತ್ತು ಕನಚೂರ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಮಿತ್ರವೃಂದ ಲೈಬ್ರರಿ ಮತ್ತು ಕನಚೂರ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಮಿತ್ರವೃಂದ ಲೈಬ್ರರಿ ಮತ್ತು ವಾಚನಾಲಯ ಹಾಗೂ ಕನಚೂರ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಾಟೆಕಲ್ ಇದರ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ತಾರೀಕು 15-3-26 ನೇ ಆದಿತ್ಯವಾರ ಬೆಳಗ್ಗೆ 9 ರಿಂದ ಸಂಜೆ ಯ ತನಕ ಶ್ರೀ ವಾಣಿವಿಜಯ ಎ. ಯು. ಪಿ. ಶಾಲೆ ಅಡೇಕಳಕಟ್ಟೆ ಯಲ್ಲಿ ನಡೆಯಿತು. 
ಶಿಬಿರವನ್ನು ಉದ್ಘಾಟಿಸಿದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ರಾದ ಶ್ರೀ ಕೆ ಆರ್ ಜಯಾನಂದ ರವರು ಆಧುನಿಕ ಯುಗದಲ್ಲಿ ಆಯುರ್ವೇದ ಚಿಕಿತ್ಸೆಯು ಜಗತ್ತಿನ ಅನಿವಾರ್ಯವಾಗಿದೆ, ಪರಂಪರಾಗತವಾಗಿ ಬಂದ ಹಳ್ಳಿಯ ಚಿಕಿತ್ಸಾ ಕ್ರಮವನ್ನು ಒಳಗಿರುವ ಅಡ್ಡ ಪರಿಣಾಮವಿಲ್ಲದ ಈ ಚಿಕಿತ್ಸೆಯು ಜನರ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ ಎಂದರು. ತುಳು ನಾಡಿನ ಹಳ್ಳಿಮದ್ದುಗಳನ್ನು, ಚಿಕಿತ್ಸಾ ವಿಧಾನ ಗಳನ್ನು ಜೀವಂತ ವಾಗಿಡಲು ನಾವೆಲ್ಲರೂ ಶ್ರಮಿಸಬೇಕು ಎಂದರು. ಲೈಬ್ರರಿ ಅಧ್ಯಕ್ಷರೂ ವರ್ಕಾ ಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಪಜ್ವ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮ ದಲ್ಲಿ ಶ್ರೀ ಸತ್ಯಸಾಯಿ ಆಶ್ರಮ ಸಸಿಗೋಳಿ ಇದರ ನಿರ್ದೇಶಕರಾದ ಡಾ. ಉದಯ ಕುಮಾರ್, ಪಂಚಾಯತ್ ಸದಸ್ಯೆ ಶ್ರೀಮತಿ ಶ್ರೀಮತಿ ಗೀತಾ ಸಾಮಾನಿ, ಮಂಜೇಶ್ವರ ತಾಲೂಕ್ ಲೈಬ್ರರಿ ಸಮಿತಿ ಕಾರ್ಯದರ್ಶಿ ಶ್ರೀ ಡಿ. ಕಮಲಾಕ್ಷ, ಕೇರಳ ತುಳು ಅಕಾಡೆಮಿ ಸದಸ್ಯೆ ಯರಾದ ಶ್ರೀಮತಿ ಭಾರತಿ ಎಸ್ , ಶ್ರಿಮತಿ ಕೃಷ್ಣ ವೇಣಿ ನಿವೃತ ಮುಖ್ಯಉಪಾಧ್ಯಾಯರಾದ ಶ್ರೀ ಭಾಸ್ಕರ ಶೆಟ್ಟಿಗಾರ್, ಕೊಡ್ಲಾಮೊಗರ್ ಸರ್ವಿಸ್ ಕೋ - ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮೋಹನ ಬಿ, ಸಮಾಜ ಸೇವಕ ಶ್ರೀ ಮೊಹಮ್ಮದ್ ಕಾಂತಮಜಲ್ ಹಾಗೂ ಕನಚೂರ್ ಆಸ್ಪತ್ರೆ ಯ ವೈದ್ಯರು ಉಪಸ್ಥಿತರಿದ್ದರು. ಲೈಬ್ರರಿ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಬಿ ಸ್ವಾಗತಿಸಿದರೆ ಸದಸ್ಯರಾದ ಜಮಾಲುದ್ದಿನ್ ಯೆನ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.