Breaking Posts

6/trending/recent
Type Here to Get Search Results !

8:10:45

ಚುಟುಕು ಸಾಹಿತ್ಯೋತ್ಸವ: ಚುಟುಕು ಕವಿಗಳನ್ನು ಬೆಳೆಸುವಲ್ಲಿ ಪರಿಷತ್ತಿನ ಮಹತ್ವದ ಪಾತ್ರ

ಚುಟುಕು ಸಾಹಿತ್ಯೋತ್ಸವ: ಚುಟುಕು ಕವಿಗಳನ್ನು ಬೆಳೆಸುವಲ್ಲಿ ಪರಿಷತ್ತಿನ ಮಹತ್ವದ ಪಾತ್ರ

ಕಾಸರಗೋಡು: ಇತ್ತೀಚಿನ ದಿನಗಳಲ್ಲಿ ಓದುಗರಿಂದ ಹೆಚ್ಚಿನ ಮೆಚ್ಚುಗೆ ಪಡೆಯುತ್ತಿರುವ ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಅಥವಾ ಹನಿಗವನ ಪ್ರಮುಖವಾಗಿದ್ದು, ಕಳೆದ ನಾಲ್ವತ್ತು ವರ್ಷಗಳಿಂದ ಚುಟುಕು ಸಾಹಿತ್ಯ ಪರಿಷತ್ತು ಚುಟುಕು ಕವಿಗಳನ್ನು ಬೆಳೆಸುವಲ್ಲಿ ಮಹತ್ತರವಾದ ಶ್ರಮವಹಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರೀಶ್ ಸುಲಾಯ ಒಡ್ಡಂಬೆಟ್ಟು ತಿಳಿಸಿದ್ದಾರೆ.
ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ, ಅಧ್ಯಕ್ಷರಾದ ಶ್ರೀ ಶಿವರ ಕಾಸರಗೋಡು ಅವರ ನೇತೃತ್ವದಲ್ಲಿ ಕನ್ನಡ ಗ್ರಾಮದಲ್ಲಿ ಆಯೋಜಿಸಲಾದ ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಚುಟುಕುಗಳ ಸಾಮರ್ಥ್ಯವನ್ನು ವಿವರಿಸಿದ ಅವರು, ಚುಟುಕುಗಳು ನಮ್ಮ ಚಿಂತನೆಗೆ ಹೊಸ ದಾರಿಯನ್ನು ತೋರಿಸುವುದರೊಂದಿಗೆ, ಕೆಲವೊಮ್ಮೆ ಹಾಸ್ಯಮಯವಾಗಿ ಮತ್ತು ಕೆಲವೊಮ್ಮೆ ಗಂಭೀರವಾಗಿ ಜೀವನ ಪಾಠಗಳನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಡಾ. ವೆಂಕಟರಮಣ ಹೊಳ್ಳ ದೀಪ ಬೆಳಗಿಸಿ ಚಾಲನೆ ನೀಡಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಶ್ರೀ ರಾಧಾಕೃಷ್ಣ ಉಳಿಯತಡ್ಕ ಅವರು ದಿಕ್ಸೂಚಿ ಭಾಷಣ ಮಾಡಿದರು. ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟ ಭಟ್ ಎಡನೀರು ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಗಡಿನಾಡು ಸಾಹಿತ್ಯ ಪರಿಷತ್ತು ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀ ವಿಶಾಲಕ್ಷ ಪುತ್ರಕಲ, ಸಂಕೀರ್ತನೆಕಾರ ಶ್ರೀ ಜಯನಾಂದ ಹೊಸದುರ್ಗ, ಧಾರವಾಡದ ಸಂಜೀವ ತುಮಕನಾಳ, ದಿವ್ಯಾ ಗಟ್ಟಿ, ಡಾ. ವಾಣೀಶ್ರೀ ಕಾಸರಗೋಡು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿರಾಜ್ ಅಡೂರು ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.