ಹೊಸಂಗಡಿಯ ಟೈಲರ್ ಹೃದಯಘಾತದಿಂದ ನಿಧನ.
ಮಂಜೇಶ್ವರ: ಹೊಸಂಗಡಿಯ ಕೊಪ್ಪಳ ಬಾದೆಮಾರ್ ನಿವಾಸಿ ಟೈಲರ್ ಉದ್ಯೋಗಿ ಉದಯ ಕುಮಾರ್ [59] ನಿಧನ ಹೊಂದಿದರು. ಮಂಗಳವಾರ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಎದೆನೋವು ಉಂಟಾಗಿದ್ದು, ಉಪ್ಪಳ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ನಿಧನ ಹೊಂದಿದರು. ಹೊಸಂಗಡಿಯ ಮೇಲಂಗಡಿಯಲ್ಲಿ ಇವರು ಕಳೆದ 20 ವರ್ಷಗಳಿಂದ "ಮಂಗೇಶ್ ಟೈಲರ್" ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಇವರ ಮನೆ ಬಳಿಯ ಬಬ್ಬು ಸ್ವಾಮಿ ದೈವಸ್ಥಾನ ಹಾಗೂ ಶ್ರೀ ಭಗವತೀ ಸೇವಾ ಸಂಘ ವಾಮಂಜೂರು ಇದರ ಸಕ್ರೀಯ ಕಾರ್ಯಕರ್ತರಾಗಿದ್ದರು. ಮೃತರು ದಿವಂಗತರಾದ ನಾರಾಯಣ - ಗಿರಿಜ ದಂಪತಿಗಳ ಪುತ್ರರಾಗಿದ್ದು, ಪತ್ನಿ: ರಮಣಿ, ಮಕ್ಕಳಾದ: ಶಿಥಿಲ, ಶ್ರಾವಣ್, ಸಹೋದರ: ಕಣ್ಣಪ್ಪ ಬಾದೆಮಾರ್, ಸಹೋದರಿಯರಾದ: ವಿದ್ಯಾವತಿ, ಶೈಲಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಭಗವತೀ ಸೇವಾ ಸಂಘ ವಾಮಂಜೂರು ಸಂತಾಪ ಸೂಚಿಸಿದ್ದಾರೆ.