ಚಿಪ್ಪಾರು ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ.
ಪೈವಳಿಕೆ: ಚಿಪ್ಪಾರಿನಲ್ಲಿರುವ ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ –2026 ರ ಪೂರ್ವಭಾವಿಯಾಗಿ ಇಂದು ಗೊನೆ ಮುಹೂರ್ತವನ್ನು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು. ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ, ಹೋಮ–ಹವನಗಳು ಜರುಗಿದ ಬಳಿಕ ದೇವರ ಅನುಗ್ರಹದಿಂದ ಗೊನೆ ಮುಹೂರ್ತ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ವೆಂಕಪ್ಪ ಪೂಜಾರಿ ಅಮ್ಮೇರಿ ರವೀಂದ್ರ ಪೂಜಾರಿ ಅಮ್ಮೇರಿ ಅಶೋಕ ಎಂ.ಸಿ. ಲಾಲ್‌ಬಾಗ್ ಅಧ್ಯಕ್ಷರಾದ ಸುದನಂದ ಎ. ಬಾಯರು ಪ್ರಧಾನ ಕಾರ್ಯದರ್ಶಿ ಅಜಿತ್ ಎಂ.ಸಿ. ಲಾಲ್ ಬಾಗ್, ಕಿಶೋರ್ ಅಮ್ಮೇರಿ,
ಸುರೇಶ್ ಅಮ್ಮೇರಿ, ಸುರೇಂದ್ರ ಎ. ಉಪಸ್ಥಿತರಿದ್ದರು. 2026 ಜನವರಿ 31 (ಶನಿವಾರ) ರಂದು ಜರಗಲಿರುವ ಜಾತ್ರಾ ಮಹೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹುವಿಜೃಂಭಣೆಯಿಂದ ನಡೆಯಲಿದ್ದು, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಗೊನೆ ಮುಹೂರ್ತದೊಂದಿಗೆ ಜಾತ್ರಾ ಸಿದ್ಧತೆಗಳು ಆರಂಭಗೊಂಡಿದ್ದು, ಭಕ್ತರಲ್ಲಿ ಅಪಾರ ಸಂಭ್ರಮ ಹಾಗೂ ಉತ್ಸಾಹ ಕಂಡುಬಂದಿತು.