ಮಂಜೇಶ್ವರ ಅಳಿವೆ ಬಾಗಿಲಿನಲ್ಲಿ
ಉದ್ಯಾವರ ಶ್ರೀ ದೈವಗಳ ಹಾಗೂ ಶ್ರೀ ಭಗವತಿ ಮಾತೆಯ ಭೇಟಿ, ಪೂಮುಡಿ ಉತ್ಸವ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ.
ಮಂಜೇಶ್ವರ: ಮಂಜೇಶ್ವರ ಅಳಿವೆ ಬಾಗಿಲಿನಲ್ಲಿ ವರ್ಷಂಪ್ರತಿ ಜರುಗುತ್ತಿರುವ
ಉದ್ಯಾವರ ಶ್ರೀ ದೈವಗಳ ಹಾಗೂ ಶ್ರೀ ಭಗವತಿ ಮಾತೆಯ ಭೇಟಿ, ಪೂಮುಡಿ ಉತ್ಸವ ಮತ್ತು ಶ್ರೀ ಬೊಬ್ಬರ್ಯ ದೈವದ ಉತ್ಸವವು ಇಂದು ರಾತ್ರಿ ನಡೆಯಿತು. ನೂರಾರು ಮಂದಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಭಗವತೀ ಮಾತೆಯ, ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಅನುಗ್ರಹಕ್ಕೆ ಪಾತ್ರರಾದರು.