ಉಡುಪಿ ಆನೆಗುಂದಿ ಪ್ರತಿಷ್ಠಾನದಿಂದ ಧರ್ಮ ರಕ್ಷಾ ಯಾತ್ರೆ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ.
ಸೆಪ್ಟೆಂಬರ್ 19, 2025
0
ಉಡುಪಿ ಆನೆಗುಂದಿ ಪ್ರತಿಷ್ಠಾನದಿಂದ ಧರ್ಮ ರಕ್ಷಾ ಯಾತ್ರೆ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ.
ಉಡುಪಿ: ಆನೆಗುಂದಿ ಪ್ರತಿಷ್ಠಾನ, ಸಹ ಟ್ರಸ್ಟ್ ಸಮಿತಿಗಳು ಹಾಗೂ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂದು ಧರ್ಮ ರಕ್ಷಾ ಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂದರ್ಶನವಿತ್ತರು. ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಹಾಗೂ ಸೇವೆಗಳನ್ನು ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದರು. ಸಭೆಯನ್ನು ಉದ್ದೇಶಿಸಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯರಹೋಬಳಿ ಅವರು ಮಾತನಾಡಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಸಂಸ್ಕಾರ ಸಂಸ್ಕೃತಿ ಉಳಿದಿದೆ ಎಂದರೆ ಶ್ರೀ ಕ್ಷೇತ್ರ ಧರ್ಮಸ್ಥಳದಂತಹ ಧಾರ್ಮಿಕ ಶ್ರದ್ಧಾ ಕೇಂದ್ರ ಇರುವುದರಿಂದ ಸಾಧ್ಯವಾಗಿದೆ.
ಇಂಥ ಪವಿತ್ರ ಕ್ಷೇತ್ರಕ್ಕೆ ವಿವಿಧ ಕಡೆಗಳಿಂದ ತುಂಬಾ ಅಪಪ್ರಚಾರ ಮಾಡುತ್ತಾ ಇದ್ದಾರೆ.ದೇವಸ್ಥಾನದ ರಕ್ಷಣೆಗೆ ನಮ್ಮ ಸಮಾಜ ಎಂದೂ ಮುಂದಿನ ಪಂಕ್ತಿಯಲ್ಲಿದೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ವಿವಿಧ ದಾನಗಳಲ್ಲಿಎಷ್ಟೋ ಲಕ್ಷ ಜನರು ವಿದ್ಯದಾನದ ಸದುಪಯೋಗ ಪಡೆದಿದ್ದಾರೆ ಹಾಗೂ ಅನ್ನದಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಸಿದ್ಧಿಯನ್ನು ಪಡೆದಿದೆ. ಶ್ರೀ ಕ್ಷೇತ್ರದಿಂದ ನಮ್ಮ ಸಮಾಜದ ದೇವಸ್ಥಾನ ಮತ್ತು ಸಂಘ ಸಂಸ್ಥೆಗಳು ಒಂದಲ್ಲ ಒಂದು ರೀತಿ ಧನ ಸಹಾಯದ ಸಹಕಾರವನ್ನು ಪಡೆದಿದ್ದಾರೆ. ಆನೆಗುಂದಿ ಮಠ, ಎಲ್ಲಾ 23 ದೇವಸ್ಥಾನ ಹಾಗೂ ನಮ್ಮ ಸಂಘ ಸಂಸ್ಥೆಗಳು ಜೊತೆಯಾಗಿ ಶ್ರೀ ಕ್ಷೇತ್ರದ ವಿರುದ್ದ ನಡೆಯುವ, ದುಷ್ಪ್ರಚಾರ ವಿರೋಧಿಸಿ ವಿಶ್ವಬ್ರಾಹ್ಮಣ ಸಮಾಜ ಶ್ರೀ ಕ್ಷೇತ್ರದೊಂದಿಗೆ ಎಂದೂ ಇದ್ದೇವೆ ಎಂದು ಈ ಮೂಲಕ ಭರವಸೆಯನ್ನು ಕೊಡುತ್ತೇವೆ ಎಂದು ಅವರು ಸಭೆಯಲ್ಲಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಲೊಕೇಶ್ ಎಂ.ಬಿ ಆಚಾರ್ ಕಂಬಾರು ಮಾತನಾಡಿ ಜಗದ್ಗುರುಗಳ ಅಪ್ಪಣೆಯಂತೆ ಶ್ರೀ ಕ್ಷೇತ್ರಕ್ಕೆ ಸಮಾಜದ ಬೆಂಬಲವನ್ನು ಸೂಚಿಸುವ ಸಲುವಾಗಿ ಧರ್ಮ ರಕ್ಷಾ ಯಾತ್ರೆಯ ಮೂಲಕ ಆನೆಗುಂದಿ ಮಹಾಸಂಸ್ಥಾನದ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂದು ಆಗಮಿಸಿದ್ದಾರೆ. ಅವರೆಲ್ಲರನ್ನು ಸ್ವಾಗತಿಸಿ, ಧರ್ಮಾಧಿಕಾರಿಗಳಿಗೆ ಪರಿಚಯಯಿಸಿದರು. ಧರ್ಮಸ್ಥಳದ ಬಗ್ಗೆ ಇರುವ ಎಲ್ಲಾ ರೀತಿಯ ಅಪಪ್ರಚಾರವನ್ನು ಕೊನೆಗೊಳಿಸಲು ಸರಕಾರ ಎಲ್ಲಾ ತನಿಖೆಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ತಿಗೊಳಿಸಬೇಕು. ನವ ಮಾಧ್ಯಮಗಳ ಅಪಪ್ರಚಾರಗಳಿಂದ ಭಕ್ತಾದಿಗಳ ಮನ ಇದೀಗ ಸಾಕಷ್ಟು ನೊಂದಿದೆ. ಸರಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡು ಭಕ್ತಾದಿಗಳ ಸಂಶಯ ನಿವಾರಣೆ ಮಾಡಬೇಕು. ಈ ನಿಟ್ಟಿನಲ್ಲಿ ಮಹಾ ಸಂಸ್ಥಾನದ ವತಿಯಿಂದ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ವಿಶ್ವ ಬ್ರಾಹ್ಮಣ ವಿಶ್ವಕರ್ಮ ಸಮಾಜದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ , ಇಂದು ಕೂಡ ತಮ್ಮ ಪಾರಂಪರಿಕ ಪಂಚ ಶಿಲ್ಪವೃತ್ತಿಯನ್ನು ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಸಮಾಜ ಬಂಧುಗಳಿಗೆ ಅವಿನಾಭಾವ ಸಂಬಂಧವಿದೆ, ಎಂದು ನುಡಿದರು. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು
ಸಮಾಜದ ಗುರುಗಳ ಸೂಚನೆಯಂತೆ ಆನೆಗುಂದಿ ಪ್ರತಿಷ್ಠಾನ ಹಾಗೂ ಎಲ್ಲ ದೇವಸ್ಥಾನಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರತಿನಿಧಿಗಳು ಎಂದು ಆಗಮಿಸಿ
ಶ್ರೀ ಕ್ಷೇತ್ರಕ್ಕೆ ಸಮಾಜದ ಬೆಂಬಲವನ್ನು ವ್ಯಕ್ತಪಡಿಸಿರುವುದು ನಮಗೆ ಅತೀವ ಸಂತೋಷ ತಂದಿದೆ. ತಮ್ಮ ಕ್ಷೇತ್ರಗಳ ಮತ್ತು ಸಂಘ ಸಂಸ್ಥೆಗಳ ಮೂಲಕ ಒಟ್ಟು ಸಮಾಜದ ಕ್ಷೇತ್ರಕ್ಕೆ ಬೆಂಬಲ ದೊರೆತಿರುವುದು ಧರ್ಮ ಕಾರ್ಯವನ್ನು ಮುನ್ನಡೆಸಲು ನಮಗೆ ಬಲ ದೊರೆತಂತಾಗಿದೆ.
ಎಂದು ಅವರು ಸಂತಸ ವ್ಯಕ್ತಪಡಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಜಲಕದ ಕಟ್ಟೆ,
ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ,
ಮತ್ತು ಸಹ ಸಮಿತಿಯ ಪದಾಧಿಕಾರಿಗಳಾದ ಅಸೆಟ್
ಅಧ್ಯಕ್ಷ ಬಿ ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ,
ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಿ ಸುಂದರ ಆಚಾರ್ಯ ಬೆಳುವಾಯಿ,ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ರಮಾ ನವೀನ್ ಕಾರ್ಕಳ,
ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು,
ಸರಸ್ವತಿ ಪೂರ್ವ ಚಾತ್ರ ಸಂಘದ ಸಂಚಾಲಕ ಮನೋಜ್ ಶರ್ಮ,ಮಂಜುನಾಥ ಶರ್ಮ, ಉದ್ಯಮಿ ಕಮಲಾಕ್ಷ ನಾಯಕ್ ಕಾರ್ಕಳ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ,ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ,ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಹಾಗೂ ಪ್ರತಿಷ್ಠಾನದ ವಿಶ್ವಸ್ಥರಾದ ಹರೀಶ್ ಆಚಾರ್ಯ ಕಾರ್ಕಳ,ಕೆ ಎಂ ಗಂಗಾಧರ ಆಚಾರ್ಯ ಕೊಂಡೆವೂರು, ಸುರೇಶ್ ಆಚಾರ್ಯ ಇರಂದಾಡಿ, ವಿಶ್ವನಾಥ ಆಚಾರ್ಯ ಉಚ್ಚಿಲ ಪ್ರತಿಷ್ಠಾನದ ವ್ಯಾಪ್ತಿಯ ಶ್ರೀ ಕಾಳಿಕಾಂಬಾ ದೇವಸ್ಥಾನಗಳ ಧರ್ಮದರ್ಶಿಗಳು ಹಾಗೂ ಪದಾಧಿಕಾರಿಗಳಾದ ಮಧೂರಿನಿಂದ ನ್ಯಾಯವಾದಿ ಪ್ರಭಾಕರ ಆಚಾರ್ಯ ಕೋಟೆಕಾರು, ಜಗದೀಶ್ ಆಚಾರ್ಯ ಕಂಬಾರು ,ತಾರನಾಥ ಆಚಾರ್ಯ ಮಧೂರು, ಯೋಗೇಂದ್ರ ಆಚಾರ್ಯ ಪರಕ್ಕಿಲ,ವೆಂಕಟರಮಣ ಆಚಾರ್ಯ ಮೀಪುಗುರಿ,ಭರತ್ ಆರ್. ಆಚಾರ್ಯ ಕಾಸರಗೋಡು, ಕುಂಬಳೆ ಆರಿಕ್ಕಾಡಿಯ ಕೆ. ಜನಾರ್ದನ ಆಚಾರ್ಯ, ಬಂಗ್ರಮಂಜೇಶ್ವರದ* ಬಿ ಎಂ ಯದುನಂದನ ಆಚಾರ್ಯ, ಬಿ ಎಂ ಅನಂತ ಆಚಾರ್ಯ, ಗುರುರಾಜ್ ಆಚಾರ್ಯ ಜೀವನ್ ಆಚಾರ್ಯ ಮೇಘರಾಜ್ ಆಚಾರ್ಯ, ಚಿದಾನಂದ ಆಚಾರ್ಯ ಹೊಸಮನೆ, ಕಾರ್ಕಳದಿಂದ ರವಿ ಆಚಾರ್ಯ, ನಿತ್ಯಾನಂದ ಆಚಾರ್ಯ, ಜ್ಯೋತಿ ರವಿ ಆಚಾರ್ಯ,ಕವಿತಾ ಹರೀಶ್ ಕಾರ್ಕಳ, ಸುಜಾತಾ ಸತೀಶ್ ಆಚಾರ್ಯ ಕಾರ್ಕಳ, ಮೂಡುಬಿದಿರೆಯಿಂದ ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ,ಯೋಗೀಶ್ ಆಚಾರ್ಯ, ಶುಭಕರ ಆಚಾರ್ಯ, ರವೀಂದ್ರ ಆಚಾರ್ಯ, ಸಂತೋಷ್ ಆಚಾರ್ಯ, ಜಯಶ್ರೀ ಜಗನ್ನಾಥ ಆಚಾರ್ಯ, ಸುಜಾತ ಬಾಲಕೃಷ್ಣ ಆಚಾರ್ಯ, ಭಟ್ಕಳದಿಂದ ಗಜಾನನ ಆಚಾರ್ಯ, ಜಗದೀಶ್ ಆಚಾರ್ಯ, ಗೋಪಾಲ್ ಆಚಾರ್ಯ, ಗಣೇಶ್ ಆಚಾರ್ಯ, ಶಿವರಾಮ ಆಚಾರ್ಯ, ಬಾರಕೂರಿನಿಂದ ಸುಬ್ರಾಯ ಆಚಾರ್ಯ ಮಾಣೂರು, ರಮಾನಂದ ಆಚಾರ್ಯ, ಜನಾರ್ದನ ಆಚಾರ್ಯ, ಜಗದೀಶ್ ಆಚಾರ್ಯ, ರವೀಂದ್ರ ಆಚಾರ್ಯ, ಮಂಗಳೂರಿನಿಂದ ದಿನೇಶ್ ಆಚಾರ್ಯ ಶಕ್ತಿನಗರ, ಜಗದೀಶ್ ಆಚಾರ್ಯ ಸಿದ್ದಕಟ್ಟೆ, ಕಟಪಾಡಿಯಿಂದ ರಾಘವೇಂದ್ರ ಆಚಾರ್ಯ ಕಟಪಾಡಿ, ವಿಶಾಲ್ ಆಚಾರ್ಯ, ಜ್ಯೋತಿ ರಾಘವೇಂದ್ರ ಆಚಾರ್ಯ ಹಳೆಯಂಗಡಿಯಿಂದ ಬಿ ದಿವಾಕರ ಆಚಾರ್ಯ ಬೊಳ್ಳೂರು, ಅರುಣ್ ಕುಮಾರ್ ಬೊಳ್ಳೂರು, ಪಡುಪಣಂಬೂರಿನಿಂದ ಜಗದೀಶ್ ಆಚಾರ್ಯ ಪಡುಬಣಂಬೂರು, ಕೋಟೆಕಾರಿನಿಂದ ಸುಂದರ ಆಚಾರ್ಯ, ನವೀನ್ ಚಂದ್ರ ಆಚಾರ್ಯ, ಆನೆಗುಂದಿಗುರು ಸೇವಾ ಪರಿಷತ್ ಉಡುಪಿಯ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ತೆಂಕನಿಡಿಯೂರಿನ ದಯಾನಂದ ಆಚಾರ್ಯ ಕೆಳಾರ್ಕಬೆಟ್ಟು, ರವೀಂದ್ರ ಆಚಾರ್ಯ,ಅಣ್ಣಪ್ಪ ಆಚಾರ್ಯ ಪ್ರಕಾಶ್ ಆಚಾರ್ಯ ನಾಗರಾಜ್ ಆಚಾರ್ಯ, ಬಂಟ್ವಾಳದಿಂದ ಹರೀಶ್ ಆಚಾರ್ಯ,ನೂರಾಲ್ ಬೆಟ್ಟು ನಿಂದ ಸದಾನಂದ ಆಚಾರ್ಯ, ಮಂಜೇಶ್ವರದಿಂದ ಅಶೋಕ್ ಆಚಾರ್ಯ ಉದ್ಯಾವರ , ಕೋಟದಿಂದ ರಾಘವೇಂದ್ರ ಆಚಾರ್ಯ, ಮಂಗಳೂರಿನಿಂದ ಶೇಖರ ಆಚಾರ್ಯ, *ಪುತ್ತೂರಿನಿಂದ* ಪುರುಷೋತ್ತಮ ಆಚಾರ್ಯ, ಶುಭಾ.ಪಿ ಆಚಾರ್ಯ ಸೇರಿದಂತೆ ಸಮಾಜ ಪ್ರತಿನಿಧಿಗಳು ಭಾಗವಹಿಸಿದ್ದರು. ಮೂಲ್ಕಿ ಸೀಮೆಯ ಅರಮನೆಯ ಗೌತಮ್ ಜೈನ್ ಅವರು ಸಹಕಾರ ನೀಡಿದರು.



