Breaking Posts

6/trending/recent
Type Here to Get Search Results !

8:10:45

ಗಂಭೀರವಾದ ಪರಿಸರ ಸಮಸ್ಯೆ ಸೃಷ್ಟಿಸಿ ಕಾರ್ಯಾಚರಿಸುತ್ತಿರುವ ಕಣ್ವತೀರ್ಥ ಮೀನು ಸಂಸ್ಕರಣಾ ಘಟಕದ ವಿರುದ್ಧ ಮಂಜೇಶ್ವರ ಗ್ರಾಮ ಪಂಚಾಯತ್ ಗೆ ಸ್ಥಳೀಯ ನಾಗರಿಕರಿಂದ ಮುತ್ತಿಗೆ.

ಕೆಲವು ವರ್ಷಗಳಿಂದ ಗಂಭೀರವಾದ ಪರಿಸರ ಸಮಸ್ಯೆ ಸೃಷ್ಟಿಸಿ ಕಾರ್ಯಾಚರಿಸುತ್ತಿರುವ ಕಣ್ವತೀರ್ಥ ಮೀನು ಸಂಸ್ಕರಣಾ ಘಟಕದ ವಿರುದ್ಧ ಮಂಜೇಶ್ವರ ಗ್ರಾಮ ಪಂಚಾಯತ್ ಗೆ ಸ್ಥಳೀಯ ನಾಗರಿಕರಿಂದ ಮುತ್ತಿಗೆ.
ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಕೆಲವು ವರ್ಷಗಳಿಂದ ಗಂಭೀರವಾದ ಪರಿಸರ ಸಮಸ್ಯೆ ಸೃಷ್ಟಿಸಿ ಕಾರ್ಯಾಚರಿಸುತ್ತಿರುವ ಮೀನು ಸಂಸ್ಕರಣಾ ಘಟಕದ ಮಾಲಿನ್ಯದಿಂದ ಸ್ಥಳೀಯ ನಾಗರಿಕರು ಕಂಗೆಟ್ಟು, ರೋಷಾವೇಷದ ಪ್ರತಿಭಟನೆಯೊಂದಿಗೆ ನಿನ್ನೆ ಮಂಜೇಶ್ವರ ಗ್ರಾ. ಪಂ. ಕಚೇರಿಗೆ ಮಾರ್ಚ್ ನಡೆಸಿದರು. ಮೀನು ಸಂಸ್ಕರಣಾ ಘಟಕದ ಮಲಿನ ನೀರು ಹರಿದು ಪರಿಸರದ ಅಂತರ್ಜಲ ಮತ್ತು ವಾಯು ಮಲಿನಗೊಂಡರೂ ಸ್ಥಳೀಯ ಗ್ರಾ. ಪಂ. ಈ ಸಂಬಂಧ ಕ್ರಮ ಕೈಗೊಳ್ಳದೇ ಇರುವುದನ್ನು ನಾಗರಿಕರು ಒಗ್ಗಟ್ಟಾಗಿ ಪ್ರಶ್ನಿಸಿ ಸಮಸ್ಯೆಗೆ ಪರಿಹಾರ ಬಯಸಿದರು.
ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಧರಣಿಗೆ ಮುನ್ನ ಕಣ್ವತೀರ್ಥ ರೈಲ್ವೇ ಗೇಟಿನಿಂದ ನಾಗರಿಕರ ಮಾರ್ಚ್ ನಡೆಯಿತು. ಕಮಾಂಡರ್ ವಿಜಯಕುಮಾರ್ ಉದ್ಘಾಟಿಸಿದರು. ಮಧುಸೂಧನ ಆಚಾರ್ಯ, ಸುಭಾಶ್ಚಂದ್ರ ಕಣ್ವತೀರ್ಥ, ಸುನಿಲ್ ಡಿ' ಸೋಜ, ಉರ್ಬನ್ ಡಿ ಸೋಜ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ: ಶ್ರೀಮತಿ ವಿನಯಾ ಭಾಸ್ಕರ್, ಲಕ್ಷ್ಮಣ ಕುಚ್ಚಿಕ್ಕಾಡ್, ಧಾರ್ಮಿಕ, ಸಾಮಾಜಿಕ ಮುಂದಾಳು: ಹರೀಶ್ ಶೆಟ್ಟಿ ಮಾಡ, ಮೊಹ್ಮದ್ ಇಬ್ರಾಹಿಂ, ಮೊಯ್ದೀನ್, ಅಶ್ರಫ್ ಬಡಾಜೆ, ಜಯಂತ ಕುಮಾರ್, ಸುಕುಮಾರ್, ಪಾವನ, ಡೆನಿಸ್ಟ್ ಮೊಂತೇರೋ, ಹರೀಶ ಮಜಲು, ಬಾಲಕೃಷ್ಣ ಮೊದಲಾದವರು ಪಂಚಾಯತ್ ಮಾರ್ಚ್ ಗೆ ನೇತೃತ್ವ ನೀಡಿದರು.
ಪರಿಸರ ಮಾಲಿನ್ಯದಿಂದ ನೂರಾರು ನಾಗರೀಕರ ಬದುಕು ಅಸಹನೀಯವಾಗಿದ್ದರೂ ಗ್ರಾ. ಪಂ. ಗಮನಿಸದೇ ಜಾಣ ಕುರುಡು ನಟಿಸುವುದನ್ನು ನಾಗರಿಕರು ಜಾಥದಲ್ಲಿ ಪ್ರತಿಭಟಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಪಂ. ಮುಂಭಾಗದ ನಾಗರಿಕ ಧರಣಿಯನ್ನುದ್ದೇಶಿಸಿ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ ನಾಗರೀಕರು ಪಡುತ್ತಿರುವ ಅಸಹನೀಯ ಬವಣೆ ಇಂದು ನಿನ್ನೆಯದಲ್ಲ. ಆದರೆ ಪಂಚಾಯತ್ ಸಹಿತ ಅಧಿಕೃತರು ಈ ಸಂಬಂಧ ಮೌನ ಇರುವುದೇಕೆಂದು ಪ್ರಶ್ನಿಸಿದರು. ಗ್ರಾ. ಪಂ. ಆಡಳಿತಕ್ಕೆ ಇದು ಸೂಚನಾ ಸತ್ಯಾಗ್ರಹವಾಗಿದ್ದು ಕಣ್ವತೀರ್ಥ ನಾಗರಿಕ ಹೋರಾಟ ನೀರಂತರ ನಡೆದು, ಮುಂದೆ ಪ್ರಬಲ ಹೋರಾಟ ನಡೆದು ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದರು. ಚಂದ್ರಹಾಸ ಕಣ್ವತೀರ್ಥ ಸಭೆಯನ್ನು ನಿಯಂತ್ರಿಸಿದರು. ಪ್ರವೀಣ್ ಕಣ್ವತೀರ್ಥ ಸ್ವಾಗತಿಸಿ, ಪ್ರದೀಪ್ ಕುಮಾರ್ ವಂದಿಸಿದರು.’

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.