ಡಿ.ವೈ.ಎಫ್.ಐ ಮುಖಂಡೆ, ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಆತ್ಮಹತ್ಯೆ.
ಸೆಪ್ಟೆಂಬರ್ 30, 2025
0
ಡಿ.ವೈ.ಎಫ್.ಐ ಮುಖಂಡೆ, ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಆತ್ಮಹತ್ಯೆ.
ಕುಂಬಳೆ: ಕುಂಬಳೆಯ ಡಿ.ವೈ.ಎಫ್.ಐ ಮುಖಂಡೆ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆಯಾಗಿರುವ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಕುಂಬಳೆ ಪೇಟೆಯ ತನ್ನ ಕಛೇರಿಯೊಳಗೆ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಂಬಳೆ ಪೇಟೆಯ ಕೊಟ್ಟೂಡಲ್ ಕಾಂಪ್ಲೆಕ್ಸ್ ಕಟ್ಟಡದ ತನ್ನ ಕಚೇರಿಯನ್ನು ಒಳಗಿಂದ ಬಾಗಿಲು ಜಡಿದು ಸಂಜೆ 5.15 ರ ವೇಳೆ ಅವರು ಆತ್ಮಹತ್ಯೆ ನಡೆಸಿರುವ ಬಗ್ಗೆ ವರದಿಯಾಗಿದೆ. ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಅವರು ಕುಂಬಳೆ ಪ್ರದೇಶದಿಂದ ಸಿಪಿಐ.ಎಂ ನ ಸಮರ್ಥ, ನಾಯಕತ್ವದ ನಾಯಕಿಯಾಗಿ ಬೆಳೆದು ಬರುತಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ಅದರಲ್ಲಿ ತಾನು ವೈಯ್ಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡುತ್ತಿದ್ದೇನೆ ಎಂಬುದಾಗಿ ಬರೆಯಲಾಗಿದೆ. ಆತ್ಮಹತ್ಯೆ ಮಾಡುವ ಮೊದಲು ಪಕ್ಷದ ನಾಯಕರೊಬ್ಬರಿಗೆ ಕರೆ ಮಾಡಿ ಆತ್ಮಹತ್ಯೆ ಸುಳಿವು ನೀಡಿದ್ದಳೆಂಬ ಮಾಹಿತಿ ಕೂಡಾ ಇದೆ. ಪಕ್ಷದ ಸಂಘಟನಾ ಕಾರ್ಯಕ್ರಮ, ಸಭೆ ನಿಮಿತ್ತ ಸಂಜೆ 5 ರ ತನಕವೂ ಕಾರ್ಯಕರ್ತರನ್ನು ಸಂಪರ್ಕಿಸಿ ಲವಲವಿಕೆಯಿಂದ ಮಾತಾಡಿದ್ದ ಅವರು ದಿಢೀರನೆ ಆತ್ಮಹತ್ಯೆ ಮಾಡಿರುವುದು ಪಕ್ಷ ಸಂಘಟನಾ ಕಾರ್ಯಕರ್ತರಿಗೆ ಶಾಕ್ ನ್ನುಂಟುಮಾಡಿದೆ. ಇವರ ಸಹೋದರ ಸಕ್ರಿಯ ಸಿಪಿಐ.ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದನು. ಮೃತಳು ಪತಿ ಮತ್ತು ಮಗುವನ್ನು ಅಗಲಿದ್ದಾಳೆ. ವಕೀಲೆ ರಂಜಿತಾಳ ಆತ್ಮಹತ್ಯೆ ಸಿಪಿಐ ಎಂ ಮತ್ತು ಡಿವೈಎಫ್ಐ ಸಹಿತ ಪೋಷಕ ಸಂಘಟನೆಗೆ ಬಲುದೊಡ್ಡಹೊಡೆತವಾಗಿದೆ.
ಮೃತದೇಹ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
