ಅಮೇರಿಕದೊಂದಿಗೆ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಹೊಸಂಗಡಿ ಪೇಟೆಯಲ್ಲಿ ಕರ್ಷಕ ಸಂಘದಿಂದ ಪ್ರತಿಭಟನೆ.
ಆಗಸ್ಟ್ 13, 2025
0
ಅಮೇರಿಕದೊಂದಿಗೆ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಹೊಸಂಗಡಿ ಪೇಟೆಯಲ್ಲಿ ಕರ್ಷಕ ಸಂಘದಿಂದ ಪ್ರತಿಭಟನೆ.
ಮಂಜೇಶ್ವರ: ಅಮೇರಿಕದೊಂದಿಗೆ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಅಮೇರಿಕ ಅಧ್ಯಕ್ಷರು ಮತ್ತು ಭಾರತ ಪ್ರಧಾನಿ ವಿರುದ್ಧ ಎಡರಂಗ ಕರ್ಷಕ ಸಂಘಟನೆಗಳು ಹೊಸಂಗಡಿ ಪೇಟೆಯಲ್ಲಿ ಪ್ರತಿಷೇದ ಮೆರವಣಿಗೆ ನಡೆಸಿದರು. ಕರ್ಷಕ ಸಂಘದ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದ ಪ್ರತಿಷೇದವನ್ನು ಕಿಸಾನ್ ಸಭಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ. ಕುಂಚಿಕಣ್ಣನ್ ಉದ್ಘಾಟಿಸಿದರು
ಸಿ. ಪಿ. ಐ ನೇತಾರರಾದ ಜಯರಾಮ ಬಲ್ಲಂಗುಡೆಲ್ ಸ್ವಾಗತಿಸಿ, ನೇತಾರರಾದ ಕೆ. ಕಮಲಾಕ್ಷ, ರಾಮಚಂದ್ರ, ಪ್ರಶಾಂತ್, ಕರುಣಾಕರ ಶೆಟ್ಟಿ, ಹರೀಶ್ ಶೆಟ್ಟಿ, ಲೋರೆನ್ಸ್ ಚಣಿಯ ಕೊಮ್ಮಂಗಳ, ಪ್ರಭಾಕರ ಶೆಟ್ಟಿ ಮಜೀಬೈಲ್ ಮೊದಲಾದವರು ನೇತೃತ್ವ ನೀಡಿದ್ದರು.



