Breaking Posts

6/trending/recent
Type Here to Get Search Results !

8:10:45

ದೇಶದಾದ್ಯಂತ ಸಂಭ್ರಮದ 79 ನೇ ಸ್ವಾತಂತ್ರೋತ್ಸವ. ಕೆಂಪು ಕೋಟೆಯಲ್ಲಿ ನಿಂತು ಸುದರ್ಶನ ಚಕ್ರ ಮಿಷನ್ ಘೋಷಿಸಿದ ನರೇಂದ್ರ ಮೋದಿ. ಭಾರತದ ಶತ್ರುಗಳಿಗೆ ಎಚ್ಚರಿಕೆ. ಮಂಗಳೂರು, ಮಂಜೇಶ್ವರದ ವಿವಿಧೆಡೆ ಧ್ವಜಾರೋಹಣ.

ದೇಶದಾದ್ಯಂತ ಸಂಭ್ರಮದ 79 ನೇ ಸ್ವಾತಂತ್ರೋತ್ಸವ. ಕೆಂಪು ಕೋಟೆಯಲ್ಲಿ ನಿಂತು ಸುದರ್ಶನ ಚಕ್ರ ಮಿಷನ್ ಘೋಷಿಸಿದ ನರೇಂದ್ರ ಮೋದಿ. ಭಾರತದ ಶತ್ರುಗಳಿಗೆ ಎಚ್ಚರಿಕೆ. ಮಂಗಳೂರು, ಮಂಜೇಶ್ವರದ ವಿವಿಧೆಡೆ ಧ್ವಜಾರೋಹಣ.
ಮಂಜೇಶ್ವರ: ದೇಶದಾದ್ಯಂತ 79 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯ ಜೊತೆ ಮಾತನಾಡಿ ಸುದರ್ಶನ ಚಕ್ರ ಮಿಷನ್ ಬಗ್ಗೆ ಘೋಷಿಸಿ. ಭಾರತದ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮುಂಬರುವ 10 ವರ್ಷಗಳಲ್ಲಿ ದೇಶದ ವಾಯು ರಕ್ಷಣಾ ವ್ಯವಸ್ಥೆಯನ್ನು ಹೇಗೆ ಬಲಪಡಿಸಲಾಗುವುದು ಎಂದು ಹೇಳಿದರು. ಶ್ರೀಕೃಷ್ಣನ ಸುದರ್ಶನದಂತೆ ನಾನು ದೇಶಕ್ಕೆ ಭದ್ರತೆಯನ್ನು ಒದಗಿಸಲು ಬಯಸುತ್ತೇನೆ. ಇದಕ್ಕಾಗಿ ನಾನು ಮಿಷನ್ ಸುದರ್ಶನ್ ಪ್ರಾರಂಭಿಸುವುದಾಗಿ ಘೋಷಿಸಿದರು. ಇದು ನವ ಭಾರತದ ರಕ್ಷಣಾ ವ್ಯವಸ್ಥೆಯಾಗಲಿದೆ. ಇದು ದೇಶವನ್ನು ರಕ್ಷಿಸುವುದಲ್ಲದೆ, ಶತ್ರುಗಳನ್ನು ನಾಶಮಾಡುತ್ತದೆ. ದೇಶವು ಎಷ್ಟೇ ಸಮೃದ್ಧಿಯನ್ನು ಹೊಂದಿದ್ದರೂ, ಭದ್ರತೆ ಇಲ್ಲದಿದ್ದರೆ ಅದು ಯಾವುದೇ ಮೌಲ್ಯವನ್ನು ಹೊಂದಿರುವುದಿಲ್ಲ.ಮುಂಬರುವ 10 ವರ್ಷಗಳಲ್ಲಿ, ಅಂದರೆ 2035 ರ ವೇಳೆಗೆ , ಆಸ್ಪತ್ರೆಗಳು, ರೈಲ್ವೆಗಳು , ಧಾರ್ಮಿಕ ಕೇಂದ್ರಗಳಂತಹ ಕಾರ್ಯತಂತ್ರದ ಮತ್ತು ನಾಗರಿಕ ಪ್ರದೇಶಗಳನ್ನು ಒಳಗೊಂಡಂತೆ ದೇಶದ ಎಲ್ಲಾ ಪ್ರಮುಖ ಸ್ಥಳಗಳಿಗೆ ತಂತ್ರಜ್ಞಾನದ ಹೊಸ ವೇದಿಕೆಗಳ ಮೂಲಕ ಸಂಪೂರ್ಣ ಭದ್ರತಾ ರಕ್ಷಣೆಯನ್ನು ನೀಡಲಾಗುವುದು ಎಂದರು.
ದೇಶದ ಪ್ರತಿಯೊಬ್ಬ ನಾಗರಿಕನು ಸುರಕ್ಷಿತನಾಗಿರಬೇಕು , ಯಾವುದೇ ರೀತಿಯ ತಂತ್ರಜ್ಞಾನ ಬಂದರೂ , ನಮ್ಮ ತಂತ್ರಜ್ಞಾನವು ಅದನ್ನು ಎದುರಿಸಲು ಸಾಧ್ಯವಾಗುತ್ತದೆ.ನಾವು ಶ್ರೀಕೃಷ್ಣನ ಸುದರ್ಶನ ಚಕ್ರದ ಮಾರ್ಗವನ್ನು ಆರಿಸಿಕೊಂಡಿದ್ದೇವೆ . ಮಹಾಭಾರತದ ಯುದ್ಧ ನಡೆಯುತ್ತಿರುವಾಗ , ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸೂರ್ಯನ ಬೆಳಕನ್ನು ತಡೆದು ಹಗಲಿನಲ್ಲಿ ಕತ್ತಲೆ ಮಾಡಿದ್ದನು. ಆದ್ದರಿಂದ ಅರ್ಜುನನು ಜಯದ್ರತನನ್ನು ಕೊಲ್ಲುವ ತನ್ನ ಪ್ರತಿಜ್ಞೆಯನ್ನು ಪೂರೈಸಲು ಸಾಧ್ಯವಾಯಿತು . ಅದಕ್ಕಾಗಿಯೇ ಅವನು ತನ್ನ ಪ್ರತಿಜ್ಞೆಯನ್ನು ಪೂರೈಸಲು ಸಾಧ್ಯವಾಯಿತು, ಇದು ಸುದರ್ಶನ ಚಕ್ರದಿಂದ ಮಾತ್ರ ಸಾಧ್ಯವಾಯಿತು. ಈಗ ದೇಶವು ಮಿಷನ್ ಸುದರ್ಶನ ಚಕ್ರವನ್ನು ಪ್ರಾರಂಭಿಸುತ್ತದೆ. ಸುದರ್ಶನ ಚಕ್ರ ಎಂದರೇ ಇದು ಪ್ರಬಲವಾದ ಶಸ್ತ್ರಾಸ್ತ್ರ ವ್ಯವಸ್ಥೆ (ಭಾರತದಲ್ಲಿ ತಯಾರಿಸಿದ ವಾಯು ರಕ್ಷಣಾ ವ್ಯವಸ್ಥೆ), ಇದು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದಲ್ಲದೆ , ಶತ್ರುಗಳ ಮೇಲೆ ಹಲವು ಪಟ್ಟು ವೇಗವಾಗಿ ಪ್ರತೀಕಾರ ತೀರಿಸುತ್ತದೆ.ಇದು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದಲ್ಲದೆ, ಹಲವು ಪಟ್ಟು ವೇಗವಾಗಿ ಪ್ರತೀಕಾರ ತೀರಿಸುತ್ತದೆ ಎಂದರು.
ಮಂಗಳೂರು: ಭಾರತದ 79ನೇ ಸ್ವಾತಂತ್ರ್ಯ ದಿನವನ್ನು ರೋಹನ್ ಕಾರ್ಪೋರೇಶನ್ ಸಂಸ್ಥೆ ಇಂದು ಪಂಪ್ ವೆಲ್‌ನ ರೋಹನ್ ಸ್ಕ್ವೇರ್ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮವು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಸಂಸ್ಥೆಯ ಸಿಬ್ಬಂದಿಗಳು, ಕಾರ್ಮಿಕರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಸೇನಾ ಅಧಿಕಾರಿ ಸುಬೇದಾರ್ ಅಪ್ಪು ಶೆಟ್ಟಿ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೋಹನ್ ಕಾರ್ಪೊರೇಷನ್ ಸಂಸ್ಥೆಯ ಸ್ಥಾಪಕರಾದ ರೋಹನ್ ಮೊಂತೆರೋರವರು, “ಸ್ವಾತಂತ್ರ್ಯವು ಕೇವಲ ಒಂದು ದಿನದ ಆಚರಣೆಯಲ್ಲ; ಪ್ರತಿದಿನವೂ ಅದನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆ ದೇಶಾಭಿವೃದ್ಧಿಯಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯಕ ” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಸೇನಾ ಅಧಿಕಾರಿ ಸುಬೇದಾರ್ ಅಪ್ಪು ಶೆಟ್ಟಿ ಅವರು ರಾಷ್ಟ್ರಸೇವೆಗೆ ಸಲ್ಲಿಸಿದ ಮಹತ್ತರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಧನ್ಯವಾದ ಸ್ವೀಕರಿಸಿ ಮಾತನಾಡಿನ ಅವರು “ದೇಶ ಸೇವೆ ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಈ ಗೌರವ ನನ್ನ ನಿವೃತ್ತ ಜೀವನದಲ್ಲೂ ದೇಶಸೇವೆಯ ನೆನಪುಗಳನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ. ಓದು, ಉದ್ಯೋಗ, ಹಣ — ಇವು ಜೀವನದ ಒಂದು ಭಾಗ ಮಾತ್ರ. ಇಂದಿನ ಯುವ ಪೀಳಿಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಧ್ಯೇಯವನ್ನೂ ಹೃದಯದಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಡಿಯಾನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಸುಮನಾ ಭಾಗವಹಿಸಿದ್ದರು.
ಮಂಜೇಶ್ವರದ ಹೊಸಬೆಟ್ಟು ಕುಲಾಲ ವೇದಿಕೆ ಆಶ್ರಯದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಮಂಜೇಶ್ವರ ಹೊಸಬೆಟ್ಟು ಕುಲಾಲಸಮಾಜ ಮಂದಿರ ವಠಾರದಲ್ಲಿ ಜರುಗಿತು. ಮಂಜೇಶ್ವರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಯಾಧವ ಬಡಾಜೆ ಧ್ವಜಾರೋಹಣಗೈದರು. ಮಜಿಬೈಲ್ ಕೊ ಒಪರೆಟಿವ್ ಭ್ಯಾಂಕ್ ಕಾರ್ಯದರ್ಶಿ ರಾಮ್ ದಾಸ್ ಶುಭಸಂನಗೈದರು. ಹಿರಿಯರಾದ ಶಿವಾನಂದ ಹೊಸಬೆಟ್ಟು ಹಾಗೂ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಈಶ್ವರ ಮಾಸ್ಟರ್ ಸ್ವಾಗತಿಸಿದರು.
ಮಂಜೇಶ್ವರ: ಉದ್ಯಾವರ ಮಾಡ ತೀಯಾ ಸಮಾಜದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಛಪ್ಪಾಡ, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಛಪ್ಪಾಡ ನೇವರಿಸಿದರು.
ತೀಯಾ ಸಮಾಜದ ಅಧ್ಯಕ್ಷ ನೀಲಯ್ಯ ಮೇಸ್ತ್ರಿ, ಪದ್ಮನಾಭ ಗುರಿಕ್ಕಾರರು, ನಾರಾಯಣ ಗುರಿಕ್ಕಾರರು, ನಾರಾಯಣ ಗುರಿಕ್ಕಾರರು ಹಾಗೂ ಸಮಾಜ ಭಾಂದವರು ಭಾಗವಹಿಸಿದರು.
ಮಂಜೇಶ್ವರ: ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಡೆದ 79 ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಪಾವೂರುಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಮುಟ್ಲ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ, ಸುಧಾಕರ ಶೆಟ್ಟಿ ಪಾವೂರು, ಅಶೋಕ ಪಾವೂರು, ತನಿಸ್ಕ, ದಯಾನಂದ ಪಾವೂರು, ಜಾಫರ್ ಪಾವೂರು, ಶಾಪಿ ಪಾವೂರು, ಪಾರೂಕ್ ಪಾವೂರು, ಖಾದರ್ ಪಾವೂರು, ಪುನೀತ್ ರೈ ಪಾವೂರು, ಭದ್ರು ಕುಂಡಾಪು, ಅಬೂಬಕ್ಕರ್ ಕೊಂಬಗುರಿ ಹಾಗೂ ಊರಿನ ಜನತೆ ಭಾಗವಹಿಸಿದ್ದರು.
ಮಂಗಳೂರು: ನುಸ್ರತುಲ್ ಇಸ್ಲಾಂ ಮದ್ರಸ ಹಾಗೂ ಸಮಸ್ತ ಮುಅಲ್ಲಿಂ ಸೆಂಟರ್ ಬುಡೋಳಿ ನೇತೃತ್ವದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾ‍ಚರಣೆಯನ್ನು ಅತ್ಯಂತ ಸರಳವಾಗಿ, ಸಂಭ್ರಮದಿಂದ ಬುಡೋಳಿ ಮಸೀದಿ ಆವರಣದಲ್ಲಿ ನಡೆಸಲಾಯಿತು. ಬುಡೋಳಿ ಗೌಸಿಯಾ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ತಮೀಮ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಊರ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ವಿದ್ಯಾರ್ಥಿಗಳು ಸಂದೇಶ ಹಾಡನ್ನು ಹಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ, ಪತ್ರಕರ್ತ, ನಿರೂಪಕ ಶಂಶೀರ್ ಬುಡೋಳಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ನಮಗೆಲ್ಲರಿಗೂ ಮಾದರಿ. ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಬೇಕೆಂದರು. ಇನ್ನು ಈ ಕಾರ್ಯಕ್ರಮದಲ್ಲಿ ಹಿರಿಯರಾದ ಅಬೂಬಕ್ಕರ್ ಹಾಜಿ, ಸಿದ್ದೀಕ್, ಇಕ್ಬಾಲ್, ಅಝ್ಗರ್, ಮುಸ್ತಫಾ, ಜಬ್ಬಾರ್ ಹಾಗೂ ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿಹಂಚಿ ಸ್ವಾತಂತ್ರ್ಯ ಶುಭಾಶಯಗಳನ್ನು ವಿನಿಮಯ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.