ಪ್ರಪ್ರಥಮ ಬಾರಿಗೆ ಉಪ್ಪಳ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಮೊಣಗಂಟಿನ ಮರುಜೋಡಣಾ ಶಸ್ತ್ರಚಿಕಿತ್ಸೆ ಯಶಸ್ವಿ.
ಫೆಬ್ರವರಿ 06, 2025
0
ಪ್ರಪ್ರಥಮ ಬಾರಿಗೆ ಉಪ್ಪಳ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಮೊಣಗಂಟಿನ ಮರುಜೋಡಣಾ ಶಸ್ತ್ರಚಿಕಿತ್ಸೆ ಯಶಸ್ವಿ.
ಉಪ್ಪಳ: ಉಪ್ಪಳ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಕಾಲಿನ ಮೊಣಗಂಟಿನ ಮರು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ| ಶ್ರೀಧರ ಭಟ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಎಲುಬು ತಜ್ಞರ ನೇತೃತ್ವದಲ್ಲಿ ನಡೆಸಿದ ಈ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಮೊಣಗಂಟಿನ ಮರುಜೋಡಣೆ ನಡೆಸಲಾಗಿದೆ. ಮಂಜೇಶ್ವರ ತಾಲ್ಲೂಕಿಗೊಳಪಟ್ಟ ಉಪ್ಪಳದಲ್ಲಿ ಎಲುಬಿಗೆ ಸಂಬಂಧಿಸಿದ ಹಾಗೂ ಮೂಳೆ ಶಸ್ತ್ರಚಿಕಿತ್ಸೆಗೆ ದೇವಿಪ್ರಸಾದ್ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯ ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.


