Breaking Posts

6/trending/recent
Type Here to Get Search Results !

8:10:45

ಕಾಸರಗೋಡಿನ ಜ್ಯೋತಿಷ್ ಧರ್ಮ ಸಂರಕ್ಷಕ, ಯುವ ಸಂಘಟಕ - ನ್ಯಾಯವಾದಿ ನವೀನ್ ರಾಜ್.

ಕಾಸರಗೋಡಿನ ಜ್ಯೋತಿಷ್ ಧರ್ಮ ಸಂರಕ್ಷಕ, ಯುವ ಸಂಘಟಕ - ನ್ಯಾಯವಾದಿ ನವೀನ್ ರಾಜ್.
ಮಂಜೇಶ್ವರ: ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಸಟೆದು ನಿಂತ ಯುವ ಸಂಘಟಿಕರಾಗಿದ್ದವರು ಜ್ಯೋತಿಷ್ ಕಾಸರಗೋಡು. ಅನಾವಶ್ಯಕವಾಗಿ ಯಾರನ್ನು ನೋಯಿಸದೆ ತನ್ನ ಧರ್ಮಕ್ಕೆ ಧಕ್ಕೆಯಾದಾಗ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲೆಲ್ಲಾ ಅನ್ಯಾಯ ಕಂಡು ಬಂದರೆ ಅದನ್ನು ಸಹಿಸದೇ, ಕೂಡಲೇ ಅದಕ್ಕೊಂದು ಅಂತಿಮ ನಿರ್ಣಯ ಕೈಗೊಳ್ಳುವ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿ, ಹಿಂದೂ ಸಮಾಜದ ಬಿಸಿ ರಕ್ತದ ಯುವಕರಿಗೆ ಕಣ್ಮಣಿಯಾಗಿದ್ದ ಅವರು "ಜೋಬಾಯಿ" ಎಂದೇ ಖ್ಯಾತರಾಗಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ಕೂಡಾ ಮುಂಚೂಣಿಯಲ್ಲಿದ್ದ ಜ್ಯೋತಿಷ್ ಕಾಸರಗೋಡು ಮರೆಯಲಾರದ ಯುವ ವ್ಯಕ್ತಿತ್ವ ಎಂಬುದಾಗಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ನುಡಿದರು.
ಪ್ರಖರ ಹಿಂದುತ್ವವಾದಿ ಜ್ಯೋತಿಷ್ ಕಾಸರಗೋಡ್ ರವರ ಮೂರನೇ ಸಂಸ್ಮರಣಾ ದಿನವನ್ನು ವಿಶ್ವ ಹಿಂದೂ ಪರಿಷತ್ತು ಜಿಲ್ಲಾ ಕಾರ್ಯಾಲಯ ಹೊಸಂಗಡಿ ಪ್ರೇರಣದಲ್ಲಿ ಜ್ಯೋತಿಷ್ ಅಭಿಮಾನಿ ಬಳಗ ಮಂಜೇಶ್ವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೇತಾರರಾದ ಪದ್ಮನಾಭ ಕಡಪ್ಪರ, ಶೈಲೇಶ್ ಅಂಜರೆ ಮಾತನಾಡಿದರು. ಮುಖಂಡರಾದ ಭರತ್ ಕನಿಲ, ನಿಖಿಲ್ ಮಾಡ, ರಾಜೇಶ್ ತೂಮಿನಾಡು. ಯಶ್ ಪಾಲ್ ಮಂಜೇಶ್ವರ್, ಯಶ್ ರಾಜ್ ಮಂಜೇಶ್ವರ್, ರವಿ ಚಾದಿಪಡ್ಪು, ಲೋಹಿತ್ ಮಜಿಬೈಲ್ ಕಟ್ಟೆ, ಪಿ.ಟಿ ಪ್ರಕಾಶ್ ಸೇರಿದಂತೆ ಅಭಿಮಾನಿ ವರ್ಗದ ಕಾರ್ಯಕರ್ತರು. ಪುಷ್ಪಾರ್ಚನೆಗೈದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.