Breaking Posts

6/trending/recent
Type Here to Get Search Results !

8:10:45

ಯುವ ನಾಯಕತ್ವ ಬೆಳವಣಿಗೆಯ ಸಂಕೇತ - ನ್ಯಾ. ಶ್ರೀಕಾಂತ್.

ಯುವ ನಾಯಕತ್ವ ಬೆಳವಣಿಗೆಯ ಸಂಕೇತ - ನ್ಯಾ. ಶ್ರೀಕಾಂತ್.
ಮಂಜೇಶ್ವರ: ಯುವ ನಾಯಕತ್ವ ಸಂಘಟನೆಯ ಬೆಳವಣಿಗೆಯ ಸಂಕೇತ, ಆದರ್ಶ ಬಿ.ಎಂ ರಂತಹ ವಿದ್ಯಾವಂತ, ವಾಗ್ಮಿ, ಸಂಘಟನ ಚತುರರಾರು ಪಕ್ಷದ ಅಸ್ತಿ ಅವರನ್ನು ಗುರುತಿಸಿ ಪಕ್ಷ ಮಂಜೇಶ್ವರದಂತಹ ಕೇರಳದಲ್ಲೇ ಬಲಿಷ್ಠ ಮಂಡಲದ ಅಧ್ಯಕ್ಷ ಸ್ಥಾನ ನೀಡುರುವುದು ಪಕ್ಷ ಸಂಘಟನೆಗೆ ಪೂರಕ ವಾಗಲಿದೆ, ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್ ಹೇಳಿದರು.
ಅವರು ಹೊಸಂಗಡಿ ಪ್ರೇರಣಾದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಎಂ.ಎಲ್, ಮಾಜಿ ಅಧ್ಯಕ್ಷ ಕುಂಟಾರು ರವೀಶ್ ತಂತ್ರಿ, ನೇತಾರರಾದ ವಿಜಯ್ ಕುಮಾರ್ ರೈ, ಎ.ಕೆ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
ನೇತಾರ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು, ದೂಮಪ್ಪ ಶೆಟ್ಟಿ, ಕೆ. ವಿ ಭಟ್, ಹರಿಶ್ಚಂದ್ರ ಎಂ, ಲೋಕೇಶ್ ನೋಂಡ, ಸದಾಶಿವ ಚೇರಲ್, ಯಾದವ ಬಡಾಜೆ, ಪ್ರವೀಣ್ ಚಂದ್ರ ಬಲ್ಲಾಳ್, ಮಂಜುನಾಥ್ ಶೆಟ್ಟಿ, ಚಂದ್ರವತಿ ಶೆಟ್ಟಿ, ಜಯಲಕ್ಷಿ ಭಟ್, ತುಳಸಿ ಕುಮಾರಿ ನೇತೃತ್ವ ನೀಡಿದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ವಂದಿಸಿದರು, ರವಿ ಮುಡಿಮಾರ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.