ತುಳುನಾಡಿನ ಹಿರಿಯ ಕಮ್ಯುನಿಸ್ಟ್ ನಾಯಕ ಕಾಂ. ಬಿ.ವಿ ರಾಜನ್ ರವರ ಪ್ರಥಮ ಚರಮ ವಾರ್ಷಿಕ, ಅನುಸ್ಮರಣಾ ಸಮ್ಮೇಳನ.
ಫೆಬ್ರವರಿ 13, 2025
0
ತುಳುನಾಡಿನ ಹಿರಿಯ ಕಮ್ಯುನಿಸ್ಟ್ ನಾಯಕ ಕಾಂ. ಬಿ.ವಿ ರಾಜನ್ ರವರ ಪ್ರಥಮ ಚರಮ ವಾರ್ಷಿಕ, ಅನುಸ್ಮರಣಾ ಸಮ್ಮೇಳನ.
ಮಂಜೇಶ್ವರ: ತುಳುನಾಡಿನ ಕಮ್ಯುನಿಸ್ಟ್ ನಾಯಕ ಕಾಂ. ಬಿ.ವಿ ರಾಜನ್ ರವರ ಪ್ರಥಮ ಚರಮ ವಾರ್ಷಿಕ ಮತ್ತು ಅನುಸ್ಮರಣಾ ಸಮ್ಮೇಳನ ಇಂದು ಬೆಳಗ್ಗೆ ಅವರ ನಿವಾಸ ಬಳಿಯ ಸ್ಮೃತಿ ಮಂಟಪದಲ್ಲಿ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸದಸ್ಯ ಮೋನು ಕುಚ್ಚಿಕಾಡ್ ಧ್ವಜಾರೋಹಣಗೈದರು. ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೌನ್ಸಿಲ್ ಸದಸ್ಯರಾದ ಗೋವಿಂದನ್ ಪಳ್ಳಿಕಾಪ್ಪಿಲ್, ಜಿಲ್ಲಾ ಕೌನ್ಸಿಲ್ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ಎಸ್ ರಾಮಚಂದ್ರ ಬಡಾಜೆ, ಕಿಶನ್ ಕುಮಾರ್ ಹೆಗ್ಡೆ, ಹರೀಶ್ ಕೆ.ಆರ್, ಮುಸ್ತಫಾ ಕಡಂಬಾರ್, ಶಾಂತರಾಮ್ ಶೆಟ್ಟಿ, ದಯಾಕರ ಮಾಡ, ದೀಪಕ್ ಬಡಾಜೆ, ಪ್ರದೀಶ್ ಬಡಾಜೆ, ಚಿತ್ರಾವತಿ ಅಂಜರೆ, ಜಯಶ್ರೀ, ಅದ್ರಾಮ, ನಾರಾಯಣ ಬಡಾಜೆ, ನಾರಾಯಣ ಕಾಜೂರ್, ಡಿ. ರಾಜ, ಕಿರಣ್ ಮಾಡ, ನವೀನ್ ಬಡಾಜೆ, ನಿರಂಜನ್ ಕಣ್ವತೀರ್ಥ, ಮೂಸ ಇಚ್ಚಿಲಂಗೋಡ್, ರಮೇಶ್ ಉದ್ಯಾವರ, ಮುಸ್ತಫಾ ಬಂಗ್ರ ಮಂಜೇಶ್ವರ, ಉದಯಕುಮಾರ್ ಶೆಟ್ಟಿ ಕರಿಬೈಲ್, ಶನೀಶ್ ಮಂಜೇಶ್ವರ, ಮಾಮೂದ್, ಸೂರಜ್ ಕಣ್ವತೀರ್ಥ, ರಾಮಚಂದ್ರ ಕಣ್ವತೀರ್ಥ, ಶರತ್ ಬೆಜ್ಜ, ತನಿಯಪ್ಪ ಬೆಜ್ಜ ಹಾಗೂ ರಾಜನ್ ರವರ ಪತ್ನಿ ನಾರಾಯಣಿ ರಾಜನ್, ಪುತ್ರಿ ರಮ್ಯಾ ರಾಜನ್, ಅಳಿಯ ಯಧು ಕೃಷ್ಣ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು. ಬಳಿಕ ನಡೆದ ಅನುಸ್ಮರಣಾ ಸಮ್ಮೇಳನವನ್ನು ಸಿಪಿಐ ಮಾಜಿ ದೇಶೀಯ ಸಮಿತಿ ಸದಸ್ಯರಾದ ಕಾಂ. ಪನ್ಯನ್ ರವೀಂದ್ರನ್ ಉದ್ಘಾಟಿಸಿದರು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ಗೋವಿಂದನ್ ಪಳ್ಳಿಕಾಪ್ಪಿಲ್, ಟಿ. ಕೃಷ್ಣನ್, ಎಸ್.ರಾಮಚಂದ್ರ ಬಡಾಜೆ, ಅಜಿತ್ ಎಂ.ಸಿ ಲಾಲ್ಬಾಗ್, ಸುಂದರಿ ಆರ್. ಶೆಟ್ಟಿ, ಲೋರನ್ಸ್ ಡಿ. ಸೋಜ, ಮೊದಲಾದವರು ಮಾತನಾಡಿದರು. ಪಕ್ಷದ ನೇತಾರರು, ಕಾರ್ಯಕರ್ತರು, ಬಿ.ವಿ ರಾಜನ್ ಕುಟುಂಬಿಕರು, ಬಿ.ವಿ ರಾಜನ್ ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ವಂದಿಸಿದರು.






