ಕಾಸರಗೋಡು ಜಿಲ್ಲಾ ಕುಲಾಲ ಸಂಘದ ವತಿಯಿಂದ "ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಮೂರನೇ ಕುಲಾಲ ಸಹಾಯ ಹಸ್ತ ಫಲಾನುಭವಿಗೆ ವಿತರಣೆ.
ಫೆಬ್ರವರಿ 13, 2025
0
ಕಾಸರಗೋಡು ಜಿಲ್ಲಾ ಕುಲಾಲ ಸಂಘದ ವತಿಯಿಂದ "ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಮೂರನೇ ಕುಲಾಲ ಸಹಾಯ ಹಸ್ತ ಫಲಾನುಭವಿಗೆ ವಿತರಣೆ.
ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಮಂಜೇಶ್ವರ, ತೂಮಿನಾಡು
ಇದರ ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ, ದಾನಿಗಳ ಸಹಕಾರದಿಂದ "ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಯೋಜನೆಯಲ್ಲಿ ಕುಲಾಲ ಆಸರೆ ಮೂರನೇ ಕುಲಾಲ ಸಹಾಯ ಹಸ್ತ ಯೋಜನೆ ರೂ.15,000/- ( ಹದಿನೈದು ಸಾವಿರ ರೂಪಾಯಿ) ಮೊತ್ತವನ್ನು
ಕಾಸರಗೋಡು ಜಿಲ್ಲೆಯ ವರ್ಕಾಡಿ ಪಂಚಾಯತ್ ನ ಕುಲಾಲ ಸಂಘ ವರ್ಕಾಡಿ ಶಾಖೆಗೋಳಪಟ್ಟ ನಲ್ಲೆಂಗಿಪದವು ನಿವಾಸಿ ದಿವಂಗತ
ಬಾಲಕೃಷ್ಣ ಎಂಬವರ ಪತ್ನಿ ಶ್ರೀಮತಿ ವಾರಿಜರವರ ಗಂಟಲಿನ ಅರ್ಬುದಾ ಕಾಯಿಲೆಯ ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಜಿಲ್ಲಾ ಕುಲಾಲ ಸಮುದಾಯದ ಭವನ ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಣ್ವತೀರ್ಥ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀರ್ ರಂಜನ್ ಕೆ ದೈಗೋಳಿ, ಸುಧೀರ್ ಕೊಡಂಗೆ ಉಪಸ್ಥಿತರಿದ್ದರು. ಯೋಜನೆಗೆ ಸಹಕರಿಸಿದ ಬಂಧುಗಳಿಗೆ, ದಾನಿಗಳಿಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘವು ವಂದನೆಗಳನ್ನು ಅರ್ಪಿಸುತ್ತದೆ.
