ಇಂದು ವಿವಾಹಿತನಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಾದ ಭಾವೀ ವರ ಅಜಿತ್ ಬೆಜ್ಜ ಸಾವಿನ ಅಸಲಿ ಕಥೆ. ಫೋನ್ ಕಾಲ್ ರೆಕಾರ್ಡಿಂಗ್ ನಿಂದ ತಡವಾಗಿ ಹೊರಬಂದ ಸತ್ಯ.
ಫೆಬ್ರವರಿ 02, 2025
0
ಇಂದು ವಿವಾಹಿತನಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಾದ ಭಾವೀ ವರ ಅಜಿತ್ ಬೆಜ್ಜ ಸಾವಿನ ಅಸಲಿ ಕಥೆ. ಫೋನ್ ಕಾಲ್ ರೆಕಾರ್ಡಿಂಗ್ ನಿಂದ ತಡವಾಗಿ ಹೊರಬಂದ ಸತ್ಯ.
ಮಂಜೇಶ್ವರ: ಮೊನ್ನೆ (31-01-2025 ಶುಕ್ರವಾರ) ರಾತ್ರಿ ಸಂಭ್ರಮದ ಮದರಂಗಿ ಶಾಸ್ತ್ರ ಮುಗಿಸುವ ಸಮಯ, ಇಂದು (02-02-25) ಗುರು ಹಿರಿಯರ ಆಶೀರ್ವಾದದ ಮುಖೇನ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಕನಸು ಹೊತ್ತ ಭಾವೀ ವರ ತನ್ನ ಪ್ರೇಯಸಿಯ ಇನ್ನೊಂದು ಪ್ರೇಮ ಪ್ರಕರಣ ತಿಳಿದು ಈ ವಿಚಾರದಲ್ಲಿ ಅವಳ ಜೊತೆ ಮಾತುಕತೆ ನಡೆಯುವ ವೇಳೆ ಅವಳಾಡಿದ ಚುಚ್ಚು ಮಾತುಗಳು, ಇವನ ಹೃದಯವನ್ನು ನುಚ್ಚು ನೂರು ಮಾಡಿ, ಒತ್ತಡಕ್ಕೊಳಗಾಗಿ ಏನು ಮಾಡಬೇಕು ಎಂದು ತಿಳಿಯದೇ ಕೊನೆಗೆ ನೇಣಿಗೆ ಶರಣಾದ ಪ್ರಕರಣದ ಒಂದೊಂದೇ ರಹಸ್ಯಗಳು ಇದೀಗ ಬೆಳಕಿಗೆ ಬರುತ್ತಿದೆ. ಇಂದು ವಿವಾಹಿತರಾಗಿ ಹಸೆಮಣೆ ಏರಬೇಕಾದ ಜೋಡಿಗಳು ಇದೀಗ ಶಾಶ್ವತವಾಗಿ ದೂರವಾಗಿ ಬಿಟ್ಟಿದ್ದಾರೆ. ನೂರಾರು ಕನಸು ಹೊತ್ತ ಭಾವೀ ವರ ಸಾವಿಗೆ ಶರಣಾಗಿದ್ದಾನೆ. ವಿವಾಹ ಮನೆ ಇದೀಗ ಸ್ಮಶಾನ ನೌನ ಆವರಿಸಿದೆ. ಅಜಿತ್ ನ ಮನೆ ಮಂದಿ ಈಗಲೂ ಸಾವಿನ ನೋವಿನಿಂದ ಮುಕ್ತಿ ಹೊಂದದೆ ನೆನೆದು ನೆನೆದು ಕಣ್ಣೀರು ಇಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅಜಿತ್ ಪ್ರೀತಿಸಿದ ಹುಡುಗಿನೇ ಕಾರಣ ಎಂದು ಮನೆಯವರು ಹಾಗೂ ಅಜಿತ್ ನ ಬಲ್ಲವರು ಹೇಳುವ ಮಾತಾಗಿದೆ. ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಬೆಜ್ಜ ಐ. ಯಚ್. ಡಿ. ಪಿ ಕಾಲನಿ ನಿವಾಸಿ, ಕೂಲಿ ಕಾರ್ಮಿಕ ತನಿಯಪ್ಪ ಬೆಜ್ಜರ - ದಿ. ಸುಶೀಲ ದಂಪತಿ ಪುತ್ರನಾದ ಅಜಿತ್ ಕುಮಾರ್ (32) ನಿಗೆ ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ ಯುವತಿ ಜೊತೆ ಮೀಯಪದವು ಖಾಸಗಿ ಶಾಲೆಯ ಕಾಲೇಜಿನಲ್ಲಿ ಪ್ಲಸ್ ಟು ಕಲಿಯುತ್ತಿರುವ ವೇಳೆಯೇ ಪ್ರೀತಿಯುಂಟಾಗಿತ್ತು. 11 ವರ್ಷದ ಗಾಢವಾದ ಪ್ರೀತಿ ಎಂದು ಅಜಿತ್ ನ ಸಹೋದರ ಜೀತ್ ಬೆಜ್ಜರವರು ಹೇಳುತ್ತಿದ್ದಾರೆ. ಪ್ಲಸ್ ಟು ಕಲಿತ ಅಜಿತ್ ಉನ್ನತ ವಿದ್ಯಾಭ್ಯಾಸ ಮಾಡುವ ಆಸೆ ಇದ್ದರೂ ಆರ್ಥಿಕ ವಿಷಯದಲ್ಲಿ ಕಷ್ಟವಾದುದರಿಂದ ಮುಂದುವರಿಸಲು ಅಸಾಧ್ಯವಾಯಿತು. ಬಳಿಕ ವಾಮಂಜೂರು ಚೆಕ್ ಪೋಸ್ಟ್ ನಲ್ಲಿ ಗ್ಯಾರೇಜ್ ನಲ್ಲಿ ಒಂದು ವರ್ಷ ಬೈಕ್ ಮೆಕ್ಯಾನಿಕ್ ಹುದ್ದೆಯಲ್ಲಿದ್ದ, ಈ ವೇಳೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಳಿಕ ಆ ಕೆಲಸ ಬಿಟ್ಟು ಪೈಂಟಿಗ್ ಕೆಲಸ ಮಾಡುತ್ತಿದ್ದ. ಈ ವೇಳೆ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಖಾಯಂ ಉದ್ಯೋಗ ಲಭಿಸಿದ ಕಾರಣ ಅಲ್ಲಿಗೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದ. ಈ ನಡುವೆ ಅಜಿತ್ ನ ಪ್ರೇಯಸಿಗೆ ಮಂಗಳೂರು ಸಿಟಿ ಸೆಂಟರ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಉದ್ಯೋಗ ಲಭಿಸಿತ್ತು. ಹಲವು ವರ್ಷಗಳಿಂದ ಇರುವ ಇವರಿಬ್ಬರ ಗಾಢವಾದ ಪ್ರೀತಿ ಪ್ರೇಮದ ವಿಚಾರ ಮನೆವರಿಗೆ ತಿಳಿದ ಕಾರಣ ಎರಡು ಮನೆಯವರು ವಿವಾಹ ನಿಶ್ಚಿತಾರ್ಥ ಮಾಡಲು ದಿನ ನಿಗದಿ ಪಡಿಸಿದರು. ಅದರಂತೆ 2024 ಮೇ 13 ರಂದು ಹುಡುಗಿಯ ಸ್ವ - ಗೃಹದಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಿತು. ಮುಂದಿನ ವರ್ಷ (ಅಂದರೆ ಇಂದು) 2025 ಫೆಬ್ರವರಿ 2 ರಂದು ವಿವಾಹ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಪರಾಹ್ನ ಮಂಜೇಶ್ವರ ಕಲಾ ಸ್ಪರ್ಶಂ ಸಭಾಂಗಣದಲ್ಲಿ ಔತಣ ಕೂಟ ನಡೆಯಲಿಕ್ಕಿತ್ತು. ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಮದುವೆ ದಿನ ಸಮೀಪಿಸುತ್ತಿದ್ದಂತೆ ಕಳೆದ ಡಿಸೆಂಬರ್ 27,28,29 ರಂದು ಅಜಿತ್ ತನ್ನ ಸಹೋದರ ಚೆನ್ನೈಯಲ್ಲಿರುವ ಹೇಮಂತ್ ರವರ ಮನೆಗೆ ಮನೆ ಮಂದಿ ಜೊತೆ ತೆರಳಿ ಚೆನ್ನೈಯಲ್ಲಿರುವ ಕಾಂಚೀಪುರಂನ ಹೆಸರಾಂತ
ಪ್ರಕಾಶ್ ಸಿಲ್ಕ್ಸ್ & ಸಾರೀಸ್ ಬಟ್ಟೆ ಮಳಿಗೆಯಿಂದ ಬಂಧುಗಳಿಗೆ ನೀಡಲು ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಬರೆಗಳನ್ನು ಖರೀದಿಸಿದ್ದನು. ಅಲ್ಲದೆ ಭಾವೀ ಪತ್ನಿಗೆ ಅವಳಿಗೆ ಒಪ್ಪಿದ 26,000 ಮೌಲ್ಯದ ಧಾರೆ ಸೀರೆಯನ್ನು ಕೂಡಾ ಖರೀದಿಸಿದ್ದನು. ಅಲ್ಲದೆ ಮನೆಗೆ ಪೈಂಟಿಂಗ್ ಹಾಗೂ ಮನೆ ರೂಮಿಗೆ ಸೀಲಿಂಗ್ ಮುಂತಾದ ಎಲ್ಲಾ ತರದ ಕೆಲಸ ಕಾರ್ಯಗಳನ್ನ ಮಾಡಿ ಮನೆಯನ್ನು ಮದುವೆ ಸಂಭ್ರಮಕ್ಕೆ ಸಜ್ಜಾಗಿಸಿದ್ದನು. ಕುಟುಂಬ ವರ್ಗಕ್ಕೆ, ಸ್ನೇಹಿತರಿಗೆ, ಬಂಧು ಬಳಗಕ್ಕೆ ಸೇರಿ ಒಟ್ಟು 1000 ಮಂದಿಗೆ ಆಮಂತ್ರಣ ಪತ್ರಿಕೆ ವಿತರಿಸಿದ್ದನು. ಅಲ್ಲದೆ ಸಹಪಾಠಿಗಳಿಗೆ ವಾಟ್ಸಾಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿ, ವಾಟ್ಸಾಪ್ ಸಂದೇಶದಲ್ಲಿ ಆಹ್ವಾನಿಸಿದ್ದನು. ಇದೆಲ್ಲಾ ನಡೆದು ಮೊನ್ನೆ 24 ರಂದು ಬೆಳಗ್ಗೆ ಮನೆಯಲ್ಲಿ ತಂದೆ ತನಿಯಪ್ಪರವರು ಮದುವೆಯ ಕಾಗದ ಕೊಡಲು ತೆರಳಿದರೆ, ಮನೆ ಮಂದಿ ಸಾಮಗ್ರಿ ತರಲು ಹೊಸಂಗಡಿ ಪೇಟೆಗೆ ತೆರಳಿದರು. ಈ ವೇಳೆ ಮನೆಯಲ್ಲಿ ದೊಡ್ಡಮ್ಮ ಚಿಕ್ಕಪ್ಪ ಅಜಿತ್ ಇದ್ದರು. ಈ ವೇಳೆ ಯುವತಿಯ ಜೊತೆ ಕೆಲಸ ಮಾಡುವ ಸ್ನೇಹಿತೆ ಅಜಿತ್ ನ ಹುಡುಗಿಯ ಕುರಿತಾದ ಇತ್ತೀಚೆಗಿನ ಪ್ರೇಮಪ್ರಕರಣದ ವಿಷಯವನ್ನು ಅಜಿತ್ ಗೆ ತಿಳಿಸಿದ್ದಳು. ಈ ಮೊದಲೇ ತನ್ನ ಹುಡುಗಿಯ ನಡವಳಿಕೆಯಿಂದ ಸಂಶಯಗೊಂಡ ಅಜಿತ್ ಆಕೆಯಲ್ಲಿ ವಿಚಾರಿಸಿದಾಗ, ಆಕೆ ಕುಂಬಳೆ ಬಳಿಯ ಬಾಂಬ್ರಾಣ ನಿವಾಸಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡು ಊರಿಗೆ ಬಂದ ಹುಡುಗನ ಜೊತೆ ಮದುವೆ ಆಮಂತ್ರಣ ಹಂಚಲು ಸುತ್ತಾಡುವುದು, ಅವನ ಜೊತೆ ತೆರಳುವಾಗ ಕಾರಿನಲ್ಲಿ ಕಿಸ್ ಕೊಟ್ಟ ವಿಷಯಗಳು, ರಾತ್ರಿ ವೇಳೆ ಪುತ್ತೂರಿನಲ್ಲಿ ತಂಗಿದ್ದ, ಮತ್ತಿತ್ತರ ವಿಚಾರಗಳು ಅಜಿತ್ ಗೆ ಮನವರಿಕೆ ಆಗಿತ್ತು. ಮದುವೆಗೆ ದಿನ ಹತ್ತಿರ ಬರುತ್ತಿದ್ದಂತೆ ಭಾವೀ ಪತ್ನಿಯ ದುರ್ನಡತೆಯಿಂದ ರೋಸಿ ಹೋದ ಅಜಿತ್ ಗೆ ಮಾನಸಿಕ ಒತ್ತಡ ಉಂಟಾಗಿ, ಕೊನೆಗೆ ಅವನು ಏನು ಮಾಡೋಕೆ ತಿಳಿಯದೇ, ಅವಳಲ್ಲಿ ತಿಳಿಸಿಯೇ ಮನೆ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೇಲಿನ ಎಲ್ಲಾ ಘಟನೆಗಳ ವಿಷಯಗಳು ಫೋನ್ ಕಾಲ್ ನಲ್ಲಿ ರೆಕಾರ್ಡಿಂಗ್ ನಲ್ಲಿದ್ದು, ವಿಷಯ ತಿಳಿದು ಮನೆಯವರ ಆಕ್ರಂದನ ಅಂದು ಮುಗಿಲು ಮುಟ್ಟಿತ್ತು. ಶವ ಮಹಜರು ಬಳಿಕ ಅಜಿತ್ ನ ಮೃತದೇಹವನ್ನು ನೋಡಲು ಸೇರಿದ ಜನ ಸಾಗರವೇ ನಿಜವಾದ ವಿಷಯ ತಿಳಿದು ಕಣ್ಣೀರು ಆಕಿದ್ದಾರೆ. ಈಗ ಅಜಿತ್ ನ ತಂದೆ ತನಿಯಪ್ಪ ಬೆಜ್ಜ ಹಾಗೂ ಅಜಿತ್ ನ ಸಹೋದರ - ಸಹೋದರಿಯರಾದ ಹೇಮಂತ್ ಬೆಜ್ಜ, ಜಿತ್ ಬೆಜ್ಜ, ವೀಣಾ ಮತ್ತು ವಿದ್ಯಾರವರು ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ಸೋದರನ ಭಾವೀ ವಧು ವಿರುದ್ಧ ದೂರನ್ನು ನೀಡಿದ್ದಾರೆ. ಮುಂದೆ ಮಂಜೇಶ್ವರ ಪೊಲೀಸರು ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಷ್ಟೇ.ದಿವಂಗತ ಅಜಿತ್ ಬೆಜ್ಜರವರ ಅತ್ಮ ಸದ್ಗತಿಗಾಗಿ ಉತ್ತರ ಕ್ರಿಯೆಯು ಫೆಬ್ರವರಿ 6 ರಂದು ಗುರುವಾರ ಮಧ್ಯಾಹ್ನ 12.30 ಕ್ಕೆ ಮಂಜೇಶ್ವರ ಕಲಾ ಸ್ಪರ್ಶಂ ಸಭಾಂಗಣದಲ್ಲಿ ನಡೆಸಲು ಮನೆ ಮಂದಿ ತೀರ್ಮಾನಿಸಿದ್ದಾರೆ. ಆಮಂತ್ರಣ ಮುದ್ರಿಸಿ ಹಂಚುವುದು ಗುರು ಹಿರಿಯರ ಅಭಿಪ್ರಾಯದಂತೆ ಸೂಕ್ತವಲ್ಲದ ಕಾರಣ ಎಲ್ಲರಿಗೂ ಇದೇ ಆಮಂತ್ರಣವೆಂದು ತಿಳಿದು ಎಲ್ಲರೂ ಪ್ರೀತಿಯಿಂದ ಆಗಮಿಸಿ, ಅಜಿತ್ ನ ಆತ್ಮಕ್ಕೆ ಚಿರಶಾಂತಿ ಕೊರಬೇಕಾಗಿ ಅಜಿತ್ ನ ತಂದೆ ತನಿಯಪ್ಪ ಹಾಗೂ ಸಹೋದರ ಸಹೋದರಿಯರು ವಿನಂತಿಸಿದ್ದಾರೆ.










