ಹೊಸಂಗಡಿ ಪೆಲಪ್ಪಾಡಿ ನಿವಾಸಿ ಶ್ರೀಮತಿ ವಾಗ್ದೇವಿ (65) ನಿಧನ.
ಫೆಬ್ರವರಿ 16, 2025
0
ಹೊಸಂಗಡಿ ಪೆಲಪ್ಪಾಡಿ ನಿವಾಸಿ ಶ್ರೀಮತಿ ವಾಗ್ದೇವಿ (65) ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ಪೆಲಪ್ಪಾಡಿ ನಿವಾಸಿ ದಿವಾಕರ ಪೆಲಪ್ಪಾಡಿಯವರ ಧರ್ಮಪತ್ನಿ ಶ್ರೀಮತಿ ವಾಗ್ದೇವಿ (65) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ರಾತ್ರಿ ನಿಧನರಾದರು. ಮೃತರು ಪತಿ, ಮಕ್ಕಳಾದ: ಸಂದೀಪ್, ಪ್ರದೀಪ್, ಸಾಯಿ ಕಿರಣ್, ಅನೂಪ್ ರಾಜ್, ಸೊಸೆಯಂದಿರಾದ: ಸುಜಾತ, ಅಕ್ಷಯ, ಮಧುರ, ಜ್ಯೋತಿ, ಸಹೋದರ: ವೆಂಕಟೇಶ್ ಪೆಲಪ್ಪಾಡಿ, ಸಹೋದರಿ: ಉಮಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಳಗ್ಗೆ 11 ಗಂಟೆಗೆ ರಾಮತ್ತಮಜಾಲು ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಚಕ್ರವರ್ತಿ (ರಿ.) ಹೊಸಂಗಡಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
