ಶ್ರೀಮತಿ ಅಶ್ವಿನಿ ಎಂ.ಎಲ್ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷದ ಸ್ಥಾನಕ್ಕೆ ನಾಮ ಪತ್ರಿಕೆ ಸಲ್ಲಿಕೆ. ಘೋಷಣೆ ನಾಳೆ.
ಜನವರಿ 26, 2025
0
ಶ್ರೀಮತಿ ಅಶ್ವಿನಿ ಎಂ.ಎಲ್ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷದ ಸ್ಥಾನಕ್ಕೆ ನಾಮ ಪತ್ರಿಕೆ ಸಲ್ಲಿಕೆ. ಘೋಷಣೆ ನಾಳೆ.
ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷದ ಸ್ಥಾನಕ್ಕಿರುವ ನಾಮ ಪತ್ರಿಕೆ ಸಲ್ಲಿಕೆ ಇಂದು ನಡೆಯಿತು. ಜಿಲ್ಲಾ ಕಾರ್ಯಾಲಯ ಶ್ಯಾಮ ಪ್ರಸಾದ್ ಮುಖರ್ಜಿ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸುರೇಶ್ ಅವರ ಸಮ್ಮುಖದಲ್ಲಿ ನಾಮಪತ್ರಿಕೆ ಸಲ್ಲಿಕೆ ನಡೆದಿದೆ. ಮಹಿಳಾ ಮೋರ್ಛಾ ರಾಷ್ಟ್ರೀಯ ನೇತಾರೆ ಅಶ್ವಿನಿ.ಎಂ.ಎಲ್.ಅವರು ಮಾತ್ರ ನಾಮ ಪತ್ರಿಕೆ ಸಲ್ಲಿಸಿದ್ದಾರೆ. ಇದರಿಂದಾಗಿ ಮುಂದಿನ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ ಅಶ್ವಿನಿ ಎಂ.ಎಲ್. ಆಯ್ಕೆಯಾಗುವರು. ಅಧಿಕೃತ ಘೋಷಣೆ ನಾಳೆ ನಡೆಯಲಿದೆ. ಅದರ ನಂತರ ನೂತನ ಅಧ್ಯಕ್ಷರ ಕಾರ್ಯಾಲಯ ಪ್ರವೇಶ, ಪದಗ್ರಹಣ ನಡೆಯಲಿದೆ. ರಾಜ್ಯದಲ್ಲಿ ಮೂರು ಮಂದಿ ಜಿಲ್ಲಾಧ್ಯಕ್ಷರಾಗಲಿದ್ದು ಕಾಸರಗೋಡು ಅಧ್ಯಕ್ಷ ಹುದ್ದೆ ಯುವ ನೇತಾರೆ ಅಶ್ವಿನಿ ಅವರಿಗೊಲಿದಿದೆ. ಅಶ್ವಿನಿಯವರು 13 ನೇ ಡಿವಿಷನ್ ನ ಕಡಂಬಾರುನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ವಿಜಯಿಯಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ನ ಸದಸ್ಯೆಯಾಗಿ, ತಮ್ಮ ಡಿವಿಷನ್ ನ ವಾರ್ಡುಗಳ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸು ಗಳಿಸಿದ್ದರು. ಬಳಿಕ ಬಿಜೆಪಿ ರಾಷ್ಟ್ರ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ದೇಶದ 12 ರಾಜ್ಯಗಳಲ್ಲಿ ಯಾತ್ರೆ ಮಾಡಿ ಬಿಜೆಪಿ ಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯಪ್ರವೃತ್ತರಾದ ಮಹಿಳೆಯಾಗಿದ್ದಾರೆ. ಕುಂಬಳೆ ಹಾಗೂ ಬದಿಯಡ್ಕ ಮಂಡಲ ಪ್ರಭಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಈ ನಡುವೆ ಕಾಸರಗೋಡು ಜಿಲ್ಲೆಯ ಪ್ರತಿಯೊಂದು ಕಡೆಗಳಲ್ಲಿ ಮಹಿಳಾ ಮೋರ್ಚಾದ ಕಮಿಟಿಯನ್ನು ಕೂಡಾ ರಚಿಸಿ, ಮಹಿಳೆಯರನ್ನು ರಾಜಕೀಯಕ್ಕೆ ತರಲು ಶ್ರಮಿಸಿದ್ದಾರೆ. ಮಂಜೇಶ್ವರ ತಾಲ್ಲೂಕಿನ ಕೊಡ್ಲಮೊಗರಿನ ಪಜ್ವ ನಿವಾಸಿಯಾಗಿರುವ ಅಶ್ವಿನಿಯವರು ಶಶಿಧರ್ ರವರ ಪತ್ನಿಯಾಗಿದ್ದು, ಜಿತಿನ್ ಹಾಗೂ ಮನಸ್ವಿ ಎಂಬ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

