Breaking Posts

6/trending/recent
Type Here to Get Search Results !

8:10:45

ಕರ್ನಾಟಕಕ್ಕಿಂತ 50% ಕಡಿಮೆ ದರದಲ್ಲಿ ಕುಂಜತ್ತೂರಿನಲ್ಲಿ ಪಟಾಕಿ ಮಾರಾಟ ಕೇಂದ್ರ.

ಕರ್ನಾಟಕಕ್ಕಿಂತ 50% ಕಡಿಮೆ ದರದಲ್ಲಿ ಕುಂಜತ್ತೂರಿನಲ್ಲಿ ಪಟಾಕಿ ಮಾರಾಟ ಕೇಂದ್ರ.
ಮಂಜೇಶ್ವರ: ಬೆರಗು ಬೆಳಕಿನ ದೀಪಾವಳಿ ಹಬ್ಬ ಮತ್ತೆ ಬಂದಿದೆ. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಸಂತಸದ ಹೊನಲಿನಲ್ಲಿ ತೇಲಲು ಚಿಣ್ಣರು, ಯುವಕರು ಸನ್ನದ್ಧರಾಗಿದ್ದು, ಮಂಜೇಶ್ವರದಲ್ಲಿ ಪಟಾಕಿಗಳ ಮಾರಾಟ ಪ್ರಾರಂಭವಾಗಿದೆ. ಕಾಸರಗೋಡು ನಿವಾಸಿ ಮಹಮ್ಮದ್ ಕುಂಞಿ ರವರು ಕಳೆದ 31 ವರ್ಷಗಳಿಂದ ಕಣ್ಣೂರು, ಕಣ್ಯಂಗಾಡ್, ಕಾಸರಗೋಡು, ಕುಂಬಳೆಯ ಅನಂತಪುರ, ಉಪ್ಪಳ, ಮುಂತಾದ ಕಡೆಗಳಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದು,

ಕಳೆದ ವರ್ಷದಂತೆ ಈ ಬಾರಿ ಕೂಡಾ ಮಂಜೇಶ್ವರದ ಹೃದಯ ಭಾಗ ಕುಂಜತ್ತೂರಿನಲ್ಲಿ "ಕುಂಜತ್ತೂರು ಪಟಾಕಿ" ಎಂಬ ಸಂಸ್ಥೆಯನ್ನು ತೆರೆದು ಕಾರ್ಯಾಚರಿಸುತ್ತಿದ್ದು, ಈ ಬಾರಿ ಮಂಜೇಶ್ವರದ ಜನತೆ ದೀಪಾವಳಿಯನ್ನು ಆಚರಿಸಲು ಹೊಸ ಹೊಸ ನಮೂನೆಯ ಆಕಾಶ ಬುಟ್ಟಿಗಳು ಸೇರಿದಂತೆ ಇನ್ನಿತರ ಅನೇಕ ಪಟಾಕಿಗಳ ಸರಮಾಲೆಯ ಕೊಡುಗೆಗಳನ್ನು ನೀಡಲು ಸಿದ್ದರಾಗಿದ್ದಾರೆ. ಇವರಿಗೆ ಪಟಾಕಿ ಮಾರಾಟದ ಜೊತೆ ಪಟಾಕಿಯನ್ನು ತಯಾರಿಸುವ ಘಟಕ ಕೇಂದ್ರವನ್ನು ಕುಂಬಳೆ ಬಳಿಯ ಅನಂತಪುರದಲ್ಲಿ "ರೆಡ್ ಫೋರ್ಟ್" ಎಂಬ ಹೆಸರಿನಲ್ಲಿ ಹಲವು ವರ್ಷಗಳ ಹಿಂದೆ ಸ್ಥಾಪಿಸಿ, ಇಲ್ಲಿಯೇ ಪಟಾಕಿಗಳನ್ನು ತಯಾರಿಸಿ, ವಿವಿಧೆಡೆಗಳಿಗೆ ಹೋಲ್ ಸೇಲ್ ದರದಲ್ಲಿ ಮಾರಾಟವನ್ನು ಕೂಡಾ ಮಾಡುತ್ತಾ ಬಂದಿದ್ದಾರೆ.
ಇವರಲ್ಲಿ ಈಗ ರಾಕೆಟ್, ಆಟಂಬಾಂಬ್‌, ಕಲರ್ ಚೈಂಜಿಂಗ್, ಡಿಸ್ಕೋ ಫ್ಲಾಶ್, ಟೈಗರ್ ಪಟಾಕಿ, ಸುರಳಿ ಬಾಂಬ್, ಚಟ್‌ಪಟ್, ಸುರುಸುರು ಬತ್ತಿ, ಕಲರ್ ಬಾಂಬ್, ಕಲರ್ ಸ್ಕೋಕ್ ಮತ್ತು ಫ್ಲಾವರ್ ಪಾಟ್ ಸೇರಿದಂತೆ ತರಹೇವಾರಿ ಪಟಾಕಿಗಳು ಮಾರಾಟಕ್ಕೆ ಲಭ್ಯ ಇವೆ. ಕರ್ನಾಟಕದಲ್ಲಿ ಪಟಾಕಿಗಳ ಬೆಲೆ ಏರಿಕೆಯಾಗಿದ್ದು, ಅಲ್ಲಿಂದ ಪಡೆಯುವ ಶಿವಕಾಶಿ ಪಟಾಕಿಯನ್ನು ಇಲ್ಲಿಂದ ಕೇವಲ 50% ಕಡಿಮೆ ದರದಲ್ಲಿ ಪಡೆಯಬಹುದಾಗಿದೆ. ಇಲ್ಲಿ ಪಟಾಕಿಗಳಿಗೆ ₹60 ರಿಂದ ಪ್ರಾರಂಭವಾಗಿ ₹ 400 ವರೆಗೆ ದರ ಇದೆ. ಪಟಾಕಿಗಳ ಜತೆಯಲ್ಲೇ ಚಿಕ್ಕಮಕ್ಕಳು ಬಳಸುವ ಪ್ಲಾಸ್ಟಿಕ್ ಪಿಸ್ತೂಲ್, ಗನ್‌ಗಳ ಮಾರಾಟವೂ ಜೋರಾಗಿದೆ. ₹50 ರಿಂದ ₹200 ವರೆಗಿನ ಪಿಸ್ತೂಲ್ ಮತ್ತು ಗನ್‌ಗಳು ಮಾರಾಟಕ್ಕೆ ಇವೆ. ಅಲ್ಲದೇ 20 ರೂಪಾಯಿಂದ ಪ್ರಾರಂಭವಾಗಿ ಸಾವಿರಾರು ರುಪಾಯಿ ವರೆಗೆ ಹೋಲ್ ಸೆಲ್ ದರದಲ್ಲಿ ಪಟಾಕಿಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿದ್ದಾರೆ. ಮಕ್ಕಳನ್ನು ಸೆಳೆಯಲೆಂದು ಪಿಸ್ತೂಲ್ ಖರೀದಿಗೆ ಒಂದು ಬಾಕ್ಸ್ ಪಟಾಕಿಗಳ ಡಬ್ಬಿ (ಕೇಪ್)ಯನ್ನು ಉಚಿತವಾಗಿ ನೀಡುತ್ತಿದ್ದಾರೆ. ದೀಪಾವಳಿ ಹಬ್ಬ ನಾಳೆ ಬೆಳಗ್ಗಿನ ಎಣ್ಣೆ ಸ್ನಾನಕ್ಕಾಗಿ ಇಂದು ಸಂಜೆ ನೀರು ತುಂಬಿಸುವ ಮೂಲಕ ಪ್ರಾರಂಭಗೊಳ್ಳಲಿದ್ದು, ಮಕ್ಕಳು ಪಾಲಕರೊಂದಿಗೆ ಉತ್ಸಾಹದಿಂದ ಬಂದು ಪಟಾಕಿ ಖರೀದಿಸುತ್ತಿದ್ದಾರೆ.
'ಪಟಾಕಿ ಮಾರಾಟ ಈಗಷ್ಟೇ ಆರಂಭವಾಗಿದೆ. 3 - 4 ದಿನಗಳ ಬಳಿಕ ವ್ಯಾಪಾರ ಹೇಗಾಗಲಿದೆ ಎಂಬುದು ಗೊತ್ತಾಗಲಿದೆ. ಜಿಎಸ್‌ಟಿ, ಬೆಲೆ ಏರಿಕೆ ಮತ್ತು ಶಿವಕಾಶಿಯಲ್ಲಿ ಪಟಾಕಿ ತಯಾರಿಕೆಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿರುವುದರಿಂದ ಪಟಾಕಿ ಬೆಲೆ ಕೊಂಚ ಹೆಚ್ಚಳವಾಗಿದೆ. ನಾವು ಇದೇ ವ್ಯಾಪಾರವನ್ನು ನೆಚ್ಚಿಕೊಂಡಿರುವುದರಿಂದ ಬಂಡವಾಳ ಹೂಡಿದ್ದೇವೆ' ಎಂದು ಮುಹಮ್ಮದ್ ಕುಂಞಿ ರವರು "ನಮ್ಮ ಮಂಜೇಶ್ವರ ನ್ಯೂಸ್" ಗೆ ತಿಳಿಸಿದ್ದಾರೆ. 'ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಘನತ್ಯಾಜ್ಯ ಮಾಲಿನ್ಯದ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತ ಪ್ರತಿ ವರ್ಷ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ. ಪರಿಸರ ಸ್ನೇಹಿ ದೀಪಾವಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿ ಈ ಹಿಂದಿನಂತೆ ವ್ಯಾಪಾರವನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೆ, ಈ ಬಾರಿ ಪಟಾಕಿ ಹಾರಿಸಲು ಸಮಯ ನಿಗದಿಪಡಿಸಿರುವುದರಿಂದ ವ್ಯಾಪಾರಕ್ಕೆ ಇನ್ನಷ್ಟು ಹಿನ್ನಡೆಯಾಗಬಹುದು' ಎಂದು ಅವರು ಆತಂಕ ಕೂಡಾ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.