Breaking Posts

6/trending/recent
Type Here to Get Search Results !

8:10:45

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸೆಂಬರ್ 16 ರಿಂದ 19 ರ ತನಕ "ಕೋಟಿ ಪಂಚಾಕ್ಷರಿ ಜಪ ಯಜ್ಞ ಹಾಗೂ ಶ್ರೀಚಕ್ರ ಪೂಜೆ."

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸೆಂಬರ್ 16 ರಿಂದ 19 ರ ತನಕ "ಕೋಟಿ ಪಂಚಾಕ್ಷರಿ ಜಪ ಯಜ್ಞ ಹಾಗೂ ಶ್ರೀಚಕ್ರ ಪೂಜೆ."
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 2024 ಡಿಸೆಂಬರ್ 16 ರಿಂದ 19 ರವರೆಗೆ 10,000 ಭಕ್ತಾದಿಗಳು ಸಾವಿರ ಬಾರಿ ಕೋಟಿ ಪಂಚಾಕ್ಷರಿ ಜಪ ಪಠಿಸುವ ಯಜ್ಞದೊಂದಿಗೆ ಶ್ರೀಚಕ್ರ ಪೂಜೆಯು ಶ್ರೀ ಕ್ಷೇತ್ರದ ತಂತ್ರಿ ವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜರಗಲಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ ಸಭೆ ಸೇರಿ ಸಮಿತಿ ರೂಪಿಕರಿಸಲಾಯಿತು. ಕಾರ್ಯಕ್ರಮವನ್ನ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿ ಯವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಟ್ರಸ್ಟಿ ಬೋರ್ಡ್ ಚೇರ್ಮ್ಯಾನ್ ನ್ಯಾ. ಗೋವಿಂದ ನಾಯರ್ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು, ಕ್ಷೇತ್ರದ ಟ್ರಸ್ಟಿ ಬೋಡ್ ಸದಸ್ಯರಾದ ಕೆ ರಾಮಪ್ರಸಾದ, ಶ್ರೀಮತಿ ಉಷಾ ಎಸ್, ಉಮೇಶ್ ಅಣಂಗೂರು, ಮನೋಜ್ ಎ.ಸಿ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ರಾಜೇಶ, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷ: ಡಾ. ಅನಂತ ಕಾಮತ್, ಮಾಜಿ ಕಾರ್ಯದರ್ಶಿ ನ್ಯಾ. ಮುರಳಿಧರನ್, ಸಿ.ವಿ ಪೊದುವಾಲ್ ಮೊದಲಾದವರು ಉಪಸ್ಥಿತರಿದ್ದು, ಮಾತನಾಡಿದರು. ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೇವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನವಿತ್ತರು. ಕೋಟಿ ಪಂಚಾಕ್ಷರಿ ಜಪಯಜ್ಞ ಸಮಿತಿಯ ಮುಖ್ಯ ರಕ್ಷಾಧಿಕಾರಿಯಾಗಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಮಠಾಧೀಶರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಯಜ್ಞ ಸಮಿತಿಯ ಅಧ್ಯಕ್ಷರಾಗಿ ಡಾ. ಅನಂತ ಕಾಮತ್, ಕಾರ್ಯಾಧ್ಯಕ್ಷರಾಗಿ ಕೆ. ರಾಮಪ್ರಸಾದ್ ಹಾಗೂ ಕೆ. ಎನ್ ವೆಂಕಟರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಕೆ ಹರೀಶ್ ಪೂಜಾರಿ, ಖಜಾಂಜಿ ಶ್ರೀ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ರವರನ್ನು ಆಯ್ಕೆ ಗೊಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.