Breaking Posts

6/trending/recent
Type Here to Get Search Results !

8:10:45

ಮೀಯಪದವು ಬಳಿಯ ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ದರೋಡೆ.

ಮಂಜೇಶ್ವರ: ಮೀಯಪದವು ಬಳಿಯ ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಬೆಳಗ್ಗೆ ದರೋಡೆ ನಡೆದಿದೆ. ಪುರಾತನವಾದ ದೇಗುಲವಾಗಿದ್ದು, ಉಡುಪಿ ಪೇಜಾವರ ಮಠದ ಆದಿನತೆಕ್ಕೊಳಪಟ್ಟ ದೇಗುಲವಾಗಿದೆ.
ಕ್ಷೇತ್ರ ಮುಂಭಾಗದ ಬಾಗಿಲು ಮುರಿದು ದರೋಡೆ ನಡೆಡಿದೆ ಎನ್ನಲಾಗಿದೆ. ಕ್ಷೇತ್ರದ ಗರ್ಭಡಿಯಲ್ಲಿರುವ ಶಿವಲಿಂಗದಲ್ಲಿದ್ದ ಮೂರು ಪವನ್ ತೂಕದ ಮುಕ್ಕಣ್ಣು ಹಾಗೂ ಪಕ್ಕದಲ್ಲಿಟ್ಟಿದ್ದ ಬೆಳ್ಳಿ ಆಭರಣಗಳನ್ನು ದೋಚಲಾಗಿದೆ. ದೇವಸ್ಥಾನದ ಎರಡು ಭಂಡಾರವನ್ನೂ ಕೂಡಾ ಲೂಟಿ ಮಾಡಲಾಗಿದೆ.
ಬೆಳಗ್ಗೆ ಪೂಜೆ ಮಾಡಲೆಂದು ಆಗಮಿಸಿದ ಕ್ಷೇತ್ರದ ಅರ್ಚಕರಾದ ಶಿವರಾಜ್ ಭಟ್ ರಿಗೆ ಕಳವು ನಡೆದ ಬಗ್ಗೆ ಅರಿವಾಗಿ ಕೂಡಲೇ ತನ್ನ ತಂದೆಯವರಾದ ಕ್ಷೇತ್ರದ ಪವಿತ್ರಪಾಣಿ ವಾಸುದೇವಭಟ್ ರಿಗೆ ಮಾಹಿತಿ ನೀಡಿದ್ದು, ವಾಸುದೇವಭಟ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕ್ಷೇತ್ರದಲ್ಲಿ ಸಿಸಿ ಕೆಮರಾ ಅಳವಡಿಸದ್ದು, ಕಳ್ಳರಿಗೆ ವರದಾನವಾಗಿದೆ. ದರೋಡೆಕೋರರು ಬಿಟ್ಟು ಹೋಗಿದ್ದಾರೆ ಎಂದು ನಂಬಲಾದ ಕಬ್ಬಿಣದ ರಾಡ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.