Breaking Posts

6/trending/recent
Type Here to Get Search Results !

8:10:45

ಧಾರ್ಮಿಕ ಮುಂದಾಳು ಮಾಕೂರು ಮೋಹನ ಆಚಾರ್ಯ (85) ನಿಧನ.

ಧಾರ್ಮಿಕ ಮುಂದಾಳು ಮಾಕೂರು ಮೋಹನ ಆಚಾರ್ಯ (85) ನಿಧನ.
ಉಪ್ಪಳ: ಹಿರಿಯ ಧಾರ್ಮಿಕ ಮುಂದಾಳು, ಮೂಲತಃ ಬಂಬ್ರಾಣ ಬಳಿಯ ಮಾಕೂರು ನಿವಾಸಿ, ಇದೀಗ ಕಳೆದ 2 ವರ್ಷಗಳಿಂದ ಉಪ್ಪಳ ಬಳಿಯ ಅಂಬಾರುವಿನಲ್ಲಿ ವಾಸಿಸುತ್ತಿರುವ ಮೋಹನ ಆಚಾರ್ಯ (85) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ 4.00 ಗಂಟೆಗೆ ಸ್ವಗೃಹದಲ್ಲಿ ವಿಶ್ವಕರ್ಮ ಸಾಯುಜ್ಯ ಹೊಂದಿದರು. ಮೃತರು ಈ ಮೊದಲು ಬಂಬ್ರಾಣ ಪರಿಸರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದರು. ದಿ. ಸುಬ್ರಾಯ ಆಚಾರ್ಯ - ದಿ. ಕಾವೇರಿ ದಂಪತಿಯ ಪುತ್ರರಾಗಿರುವ ಮೋಹನ ಆಚಾರ್ಯರು ಪತ್ನಿ: ಶ್ರೀಮತಿ ಸಾವಿತ್ರಿ ಎಂ. ಆಚಾರ್ಯ, ಸಹೋದರ ಗಣೇಶ್ ಆಚಾರ್ಯ ಪುತ್ತೂರು, ಸಹೋದರಿ: ಕಮಲ ಆಚಾರ್ಯ ಬನ್ನೂರು ಪುತ್ತೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಮಕ್ಕಳಿಲ್ಲ. ಮೃತರು ಆನೆಗುಂದಿ ಪ್ರತಿಷ್ಠಾನದ ವಿಶ್ವಸ್ಥರಾಗಿ, ಮಧೂರು ಶ್ರೀ ಕಾಳಿಕಾಂಬಾ ಮಠದ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷ, ಕೋಶಾಧಿಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಮಠದ ಅಧ್ಯಕ್ಷರಾಗಿ, ಬ್ರಹ್ಮಕಲಶ ಸಮಿತಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆನೆಗುಂದಿ ಗುರು ಪೀಠದ ನಿಷ್ಠಾವಂತ ಶಿಷ್ಯರಾಗಿದ್ದ ಇವರು ಶಿಕಾರಿಪುರದ ಗುರುಗಳ ಪೂರ್ವಾಶ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಶ್ರೀ ಗುರುಗಳ ಪೂರ್ವಾಶ್ರಮದ ಶಿಕ್ಷಣ ಯೋಜನೆಗೆ ಸಮಾಜ ಬಂಧುಗಳಿಂದ ಆರ್ಥಿಕ ನೆರವನ್ನು ಸಂಗ್ರಹಿಸಿ ತಲುಪಿಸುವ ಗುರುಶಿಕ್ಷಣ ಸೇವೆಯನ್ನು ಮಾಡುತ್ತಿದ್ದರು. ಕುಲ ಗುರು ಪೀಠದ ಪುನರುತ್ಥಾನದ ಪ್ರತಿ ಹೆಜ್ಜೆಯಲ್ಲೂ ಮುಂಚೂಣಿಯಲ್ಲಿದ್ದು, ನಿಸ್ವಾರ್ಥವಾಗಿ ಮಾದರೀ ಸೇವೆ ಸಲ್ಲಿಸಿದ್ದರು. ಅನಾರೋಗ್ಯ ಮತ್ತು ವಾರ್ಧಕ್ಯದ ಇಳಿ ವಯಸ್ಸಿನಲ್ಲಿಯೂ ಕುಲ ಗುರು ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎನ್ನುವ ಹಂಬಲ ಅವರಲ್ಲಿ ನಿರಂತರವಾಗಿತ್ತು. ಕುಲಗುರು ಪೀಠದ ಪುನರುತ್ಥಾನಕ್ಕೆ ಇವರ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ಗೌರವ ಪೂರ್ವಕವಾಗಿ ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಿಂದ "ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ" ಯನ್ನು ಪ್ರಧಾನ ಮಾಡಲಾಗಿತ್ತು. ಅಗಲಿದ ಆತ್ಮಕ್ಕೆ ನಿತ್ಯ ಚಿರಶಾಂತಿಯನ್ನು ಹಾಗೂ ಅವರ ಪತ್ನಿ ಬಂಧುಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಲ ಗುರುಪರಂಪರೆ ಹಾಗೂ ಭಗವಂತ ಕರುಣಿಸಲೆಂದು ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ (ರಿ.),ಸಹ ಟ್ರಸ್ಟ್ ಗಳಾದ ಅಸೆಟ್,ಗೋ ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಮತ್ತು ಸಮಿತಿಗಳಾದ ಆನೆಗುಂದಿ ಗುರು ಸೇವಾ ಪರಿಷತ್, ಸರಸ್ವತೀ ಮಾತೃ ಮಂಡಳಿಯ ಪದಾಧಿ ಕಾರುಗಳು ಹಾಗೂ ಸದಸ್ಯರು ತಮ್ಮ ಸಂತಾಪದ ಸಂದೇಶದಲ್ಲಿ ತಿಳಿಸಿದ್ದಾರೆ. ಇಂದು ಅಪರಾಹ್ನ ವೇಳೆ ಅಂತ್ಯ ಸಂಸ್ಕಾರವು ಚೇರುಗೊಳಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.