IND vs SA: ಭಾರತವನ್ನು ಚಾಂಪಿಯನ್ ಮಾಡಿದ ಸೂರ್ಯ ಹಿಡಿದ ಅದೊಂದು ಕ್ಯಾಚ್..! ಚಾಂಪಿಯನ್ ಭಾರತಕ್ಕೆ 22.76 ಕೋಟಿ..!
ಜೂನ್ 30, 2024
0
IND vs SA: ಭಾರತವನ್ನು ಚಾಂಪಿಯನ್ ಮಾಡಿದ ಸೂರ್ಯ ಹಿಡಿದ ಅದೊಂದು ಕ್ಯಾಚ್..! ಚಾಂಪಿಯನ್ ಭಾರತಕ್ಕೆ 22.76 ಕೋಟಿ..!
ಕೊನೆಗೂ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಪ್ರಶಸ್ತಿ ಬೆನ್ನು ಹತ್ತಿದ್ದ ಟೀಂ ಇಂಡಿಯಾ ಕೊನೆಗೂ ಟ್ರೋಫಿ ಮೇಲೆ ತನ್ನ ಹೆಸರನ್ನು ನಮೂದಿಸಿದೆ. ಈ ಮೂಲಕ ಟೀಂ ಇಂಡಿಯಾ 11 ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವಿಗೆ 177 ರನ್ಗಳ ಸವಾಲನ್ನು ನೀಡಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೊನೆಯ 5 ಓವರ್ಗಳವರೆಗೂ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಇದಲ್ಲದೆ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಬಿಗ್ ಶಾಟ್ ಅನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಸೂರ್ಯಕುಮಾರ್ ಯಾದವ್ ಪಂದ್ಯ ಭಾರತದ ಬತ್ತಳಿಕೆಗೆ ಬೀಳುವಂತೆ ಮಾಡಿದರು.
ಅದ್ಭುತ ಕ್ಯಾಚ್ ಹಿಡಿದ ಸೂರ್ಯ
ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ಭಗ್ನವಾಗುತ್ತಿತ್ತು. ಮೊದಲ ಎಸೆತದಲ್ಲಿಯೇ ಹಾರ್ದಿಕ್ ಪಾಂಡ್ಯ ವೈಡ್ ಫುಲ್ ಟಾಸ್ ಬೌಲ್ಡ್ ಮಾಡಿದರು. ಅದನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಮಿಲ್ಲರ್ ಬ್ಯಾಟಿಗೆ ತಾಕಿದ ಚೆಂಡು ಗಗನದೆತ್ತರಕ್ಕೆ ಹಾರಿತು. ಹಾಗಾಗಿ ಇದು ಸಿಕ್ಸರ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸೂರ್ಯ ಬೌಂಡರಿ ಒಳಗೆ ಆ ಚೆಂಡನ್ನು ಕ್ಯಾಚ್ ಮಾಡಿದ ಸೂರ್ಯ, ತಾನು ಬೌಂಡರಿ ದಾಟುವ ಮುನ್ನವೇ ಚೆಂಡನ್ನು ಒಳಗೆ ಎಸೆದು ಮತ್ತೆ ಕ್ಯಾಚ್ ಪಡೆದರು. ಈ ಕ್ಯಾಚ್‌ನಿಂದಾಗಿ ಇಡೀ ಪಂದ್ಯ ಭಾರತದ ಪರ ವಾಲಿತು.
ಭಾರತಕ್ಕೆ 7 ರನ್ ಜಯ
ಡೇವಿಡ್ ಮಿಲ್ಲರ್ ಔಟಾದ ನಂತರ ದಕ್ಷಿಣ ಆಫ್ರಿಕಾ ತಂಡದ ಸೋಲು ಖಚಿತವಾಯಿತು. ಈ ವಿಕೆಟ್ ಬಳಿಕ ಆಫ್ರಿಕಾ ತಂಡದ ಯಾವುದೇ ಬ್ಯಾಟ್ಸ್ಮನ್ 5 ಎಸೆತಗಳಲ್ಲಿ 16 ರನ್ ಗಳಿಸಲು ಸಾಧ್ಯವಾಗಲಿಲ್ಲ.ಹೀಗಾಗಿ ಕೊನೆಗೂ ದಕ್ಷಿಣ ಆಫ್ರಿಕಾ ತಮ್ಮ ಚೋಕರ್ಸ್ ಹಣೆಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತು. ಕೊನೆಯಲ್ಲಿ ರಬಾಡ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಮತ್ತೆ ಪಂದ್ಯವನ್ನು ರೋಚಕಗೊಳಿಸಿದರು. ಆದರೂ ತಮ್ಮ ಕರಾರುವಕ್ಕಾದ ದಾಳಿಯನ್ನು ಮುಂದುವರೆಸಿದ ಪಾಂಡ್ಯ ಪಂದ್ಯವನ್ನು 7 ರನ್‌ಗಳಿಂದ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು.
ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ. ಇದಲ್ಲದೇ ಭಾರತ ತಂಡ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ ಅಂದಾಜು 26 ಲಕ್ಷ ರೂ. ಪಡೆದಿದೆ. ಇವೆಲ್ಲವನ್ನೂ ಸೇರಿಸಿದರೆ ಭಾರತ ತಂಡ ಈ ಟೂರ್ನಿಯಿಂದ 22.76 ಕೋಟಿ ರೂ. ಗಳಿಸಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಮತ್ತು ಫೈನಲ್‌ನಲ್ಲೂ ಇದೇ ಟ್ರೆಂಡ್ ಮುಂದುವರಿಸಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 17 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗ್ರೂಪ್ ಸ್ಟೇಜ್ ಮತ್ತು ಸೂಪರ್-8ನಲ್ಲಿ ಎದುರಿಸಿದ ಪ್ರತಿ ಎದುರಾಳಿಯನ್ನು ಸೋಲಿಸಿತು. ಇದಾದ ಬಳಿಕ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಸೆಮಿಫೈನಲ್‌ನಲ್ಲೂ ಭಾರತ ತಲೆಬಾಗುವಂತೆ ಮಾಡಿತ್ತು. ಇದೀಗ ಅತಿ ದೊಡ್ಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದುಕೊಂಡಿದೆ.
ಟೀಂ ಇಂಡಿಯಾ 17 ವರ್ಷಗಳ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ.
ಇದಲ್ಲದೇ ಭಾರತ ತಂಡ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ ಅಂದಾಜು 26 ಲಕ್ಷ ರೂ. ಪಡೆದಿದೆ. ಇವೆಲ್ಲವನ್ನೂ ಸೇರಿಸಿದರೆ ಭಾರತ ತಂಡ ಈ ಟೂರ್ನಿಯಿಂದ 22.76 ಕೋಟಿ ರೂ. ಗಳಿಸಿದೆ.
ಚೊಚ್ಚಲ ಬಾರಿಗೆ ಫೈನಲ್ ತಲುಪಿ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ತಂಡ 1.28 ಮಿಲಿಯನ್ ಡಾಲರ್ (ಸುಮಾರು 10.67 ಕೋಟಿ ರೂಪಾಯಿ) ಪಡೆದಿದ್ದು, ಇದು ಚಾಂಪಿಯನ್ ತಂಡದ ಅರ್ಧದಷ್ಟು ಬಹುಮಾನದ ಮೊತ್ತವಾಗಿದೆ. ಇದಲ್ಲದೇ 8 ಪಂದ್ಯ ಗೆದ್ದಿದ್ದಕ್ಕೆ ಪ್ರತ್ಯೇಕವಾಗಿ ಸುಮಾರು 2.07 ಕೋಟಿ ರೂ. ಸಂಪಾದಿಸಿದ್ದು, ಈ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಒಟ್ಟು 12.7 ಕೋಟಿ ರೂ. ಬಹುಮಾನ ಪಡೆದಿದೆ.
ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡಗಳಿಗೆ ಐಸಿಸಿ 6.56 ಕೋಟಿ ರೂಗಳನ್ನು ಬಹುಮಾನವನ್ನು ಇರಿಸಿತ್ತು. ಅದರಂತೆ ಸೆಮಿಫೈನಲ್‌ನಲ್ಲಿ ಸೋತ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ 6.56 ಕೋಟಿ ರೂ. ಬಹುಮಾನವಲ್ಲದೆ, ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕ 26 ಲಕ್ಷ ರೂ. ಬಹುಮಾನ ಪಡೆದಿವೆ.
ಸೂಪರ್-8 ಸುತ್ತಿನಿಂದ ಹೊರಬಿದ್ದ ಪ್ರತಿ ತಂಡಕ್ಕೆ ಸುಮಾರು 3.18 ಕೋಟಿ ರೂ. ಬಹುಮಾನ ನೀಡಲಾಗಿದೆ. ಈ ಬಹುಮಾನ ಪಡೆದ ತಂಡಗಳಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಮೆರಿಕ ಸೇರಿವೆ. ಇದಲ್ಲದೆ ಈ ತಂಡಗಳು ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ 26 ಲಕ್ಷ ರೂ. ಬಹುಮಾನ ಪಡೆದಿವೆ.
ಗ್ರೂಪ್ ಹಂತದಿಂದ ಹೊರಗುಳಿದಿದ್ದ ತಂಡಕ್ಕೆ ಬರಿಗೈಯಲ್ಲಿ ಹೋಗಲು ಐಸಿಸಿ ಅವಕಾಶ ನೀಡಿಲ್ಲ. ಅಂದರೆ ಐಸಿಸಿ 9 ರಿಂದ 12 ನೇ ಸ್ಥಾನ ಪಡೆದ ತಂಡಗಳಿಗೆ ಪ್ರತಿ ಪಂದ್ಯದ ಗೆಲುವಿಗೆ 26 ಲಕ್ಷ ರೂಪಾಯಿಗಳ ಜೊತೆಗೆ ಸುಮಾರು 2.06 ಕೋಟಿ ರೂ. ಬಹುಮಾನ ನೀಡಿದೆ. ಹಾಗೆಯೇ 13 ರಿಂದ 20 ನೇ ಸ್ಥಾನ ಪಡೆದ ತಂಡಗಳಿಗೆ 26 ಲಕ್ಷ ರೂ. ಜೊತೆಗೆ ಸುಮಾರು 1.87 ಕೋಟಿ ರೂ. ನೀಡಲಾಗಿದೆ.



