Breaking Posts

6/trending/recent
Type Here to Get Search Results !

8:10:45

ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮೀಂಜ ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ.

ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮೀಂಜ ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ.
ಮಂಜೇಶ್ವರ: ಕಳೆದ ಕೆಲವು ತಿಂಗಳಿನಿಂದ ಕಾರ್ಮಿಕರಿಗೆ ಪಿಂಚಣಿ ಹಾಗೂ ಇತರ ಯಾವುದೇ ಕ್ಷೇಮನಿಧಿ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಅವಗಣಿಸುತ್ತಿರುವ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿ ವತಿಯಿಂದ ಮೀಂಜ ಗ್ರಾಮ ಪಂಚಾಯತ್ ಕಛೇರಿಗೆ ಇಂದು ಬೆಳಗ್ಗೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿ ಅಧ್ಯಕ್ಷರಾದ ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇರಳ ಸರಕಾರ ಬಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಅನವಶ್ಯಕವಾಗಿ ದುಂದು ವೆಚ್ಚ ಮಾಡಿ ಕಾರ್ಮಿಕರನ್ನು ವಂಚಿಸುವುದನ್ನ ತೀವ್ರವಾಗಿ ಖಂಡಿಸಿದರು. ಅಲ್ಲದೆ ನಿತ್ಯೋಪಯೋಗಿ ಸಾಮಾನುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಿಸಿ ಸಾಧಾರಣ ಬಡ ಜನರನ್ನು ಉಪವಾಸಕ್ಕೆ ತಲ್ಲುವ ಸರಕಾರದ ಕ್ರಮವನ್ನು ಖಂಡಿಸಿ ಮಾತನಾಡಿದರು.
ಬಿ.ಎಂ ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಯಶವಂತಿ ಬೆಜ್ಜ, ವಲಯ ಅಧ್ಯಕ್ಷ ರವಿ. ಎಂ ಕೆ. ಕೋಳ್ಯೂರು ಮಾತನಾಡಿದರು. ಪದಾಧಿಕಾರಿಗಳಾದ ಬಾಲಕೃಷ್ಣ ಬಟ್ಟಿಪದವು, ಕೃಷ್ಣ ಬೆಜ್ಜ, ಮನೋಜ್ ಬಟ್ಟಿಪದವು ನೇತೃತ್ವ ವಹಿಸಿ, ಮನವಿ ನೀಡಿದರು. ಗೋಪಿನಾಥ ಮೊರತ್ತನೆ ಸ್ವಾಗತಿಸಿ, ರಾಮಚಂದ್ರ ಬಟ್ಟಿಪದವು ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.