Breaking Posts

6/trending/recent
Type Here to Get Search Results !

8:10:45

ವಿಕಲಾಂಗರ, ವಿಶೇಷ ಚೇತನರ, ಮಾನಸಿಕ ರೋಗಿಗಳ, ವಯೋವೃದ್ಧರ ಬಾಳಿನ ಆಶಾಕಿರಣ ಶ್ರೀ ಸಾಯಿನಿಕೇತನ ಸೇವಾಶ್ರಮ ದೈಗೋಳಿ.

ವಿಕಲಾಂಗರ, ವಿಶೇಷ ಚೇತನರ, ಮಾನಸಿಕ ರೋಗಿಗಳ, ವಯೋವೃದ್ಧರ ಬಾಳಿನ ಆಶಾಕಿರಣ ಶ್ರೀ ಸಾಯಿನಿಕೇತನ ಸೇವಾಶ್ರಮ ದೈಗೋಳಿ.
ಮಂಜೇಶ್ವರ: ನಮಗೆ ಭಗವಂತ ಎಲ್ಲ ಕೊಟ್ಟಿದ್ದಾನೆ. ಆದರೆ ವಿಕಲಾಂಗರು, ವಿಶೇಷ ಚೇತನರು, ಮಾನಸಿಕ ರೋಗಿಗಳು. ಇವರನ್ನೆಲ್ಲಾ ಕಂಡರೆ ಯಾವ ಸಹೃದಯನಿಗೂ ಮನಸ್ಸು ಕರಗದಿರಲಾರದು. ಅಂತಹವರನ್ನು ಪೋಷಿಸುವವರ ಕಷ್ಟ ಎಷ್ಟು ಅಂತ ಊಹಿಸಲೂ ಕಷ್ಟ. ನೋಡಿದರಷ್ಟೇ ಅರ್ಥವಾಗುವುದು. ಅಂತಹ ಒಂದು ಸೇವಾಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಸದ್ದು ಗದ್ದಲವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಮಂಜೇಶ್ವರ ತಾಲೂಕಿನ ದೈಗೋಳಿ ಎಂಬ ಹಳ್ಳಿಯಲ್ಲಿ ಕಳೆದ 16 ವರ್ಷಗಳಿಂದ "ಶ್ರೀ ಸಾಯಿ ಸೇವಾ ಪ್ರತಿಷ್ಠಾನ" ಎಂಬ ಸೇವಾ ಸಂಸ್ಥೆಯು ಅರ್ಹ ಬಡ ಜನರ, ವಸತಿ ಹೀನರ, ಮಾನಸಿಕ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆ ನಡೆಸಿ, ಗುಣಮುಖರಾದ ಮೇಲೆ‌ ಮನೆ‌ಮಂದಿಯೊಂದಿಗೆ ಸೇರಿಸುವ ಕಾರ್ಯ ಮಾಡುತ್ತಾ ಇದೆ. ಇದುವರೆಗೆ 153 ಜನರನ್ನು ಗುಣಮುಖರಾಗಿಸಿ ಮನೆಗೆ ಕಳುಹಿಸಲಾಗಿದೆ.
ಇದೀಗ 114 ಜನ ಇಲ್ಲಿದ್ದಾರೆ. ಬೀದಿಗೆ ಬಿದ್ದ ವಸತಿಹೀನ, ಮಾನಸಿಕ ರೋಗಿಗಳನ್ನು ಕರತಂದು ಶುಶ್ರೂಷೆ ಮಾಡಿ ಉತ್ತಮ ಆಹಾರ, ಬಟ್ಟೆಬರೆ ನೀಡಿ ವೈದ್ಯಕೀಯ ಚಿಕಿತ್ಸೆ, ವ್ಯಾಯಾಮ, ಯೋಗ, ಧ್ಯಾನ, ಆಟೋಟ, ಚಟುವಟಿಕೆಗಳು, ಮನರಂಜನೆ ಹಾಗೂ ಮಾನಸಿಕ ಆಪ್ತಸಮಾಲೋಚನೆಗಳ ಸಹಾಯದಿಂದ ರೋಗಿ ಆರೋಗ್ಯವಂತನಾಗಲು ಸಹಕರಿಸಲಾಗುತ್ತದೆ. ತಜ್ಞ ವೈದ್ಯರ ಸಲಹೆಯಂತೆ ಸಂಸ್ಥೆಯ ಕಾರ್ಯಕರ್ತರು ಕಾರ್ಯವೆಸಗುತ್ತಾರೆ.
ವೈದ್ಯ ದಂಪತಿಗಳಾದ ಡಾ ಉದಯಕುಮಾರ ನೂಜಿ ಹಾಗೂ ಡಾ. ಶಾರದಾ ಅವರುಗಳು ಈ ಸೇವಾ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಇನ್ನಷ್ಟು ಜನರಿಗೆ ಈ ಸಂಸ್ಥೆಯ ಅಗತ್ಯ ತೀವ್ರವಾಗಿರುವ ಕಾರಣ ಮಹಿಳೆಯರಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣಕಾರ್ಯ ಪ್ರಾರಂಭವಾಗಿದೆ.
200 ಕ್ಕೂ ಹೆಚ್ಚು ಜನರಿಗೆ ಸೌಕರ್ಯಕಲ್ಪಿಸುವ ಈ ಕಟ್ಟಡದ ಒಟ್ಟು ಅಂದಾಜು ಮೊತ್ತ 16 ಕೋಟಿ ರೂಪಾಯಿಗಳು. ಕೇವಲ ದಾನಿಗಳ ಸಹಕಾರದಿಂದಲೇ ನಡೆಯುತ್ತಿರುವ ಈ ಮಹಾನ್ ಕಾರ್ಯದಲ್ಲಿ ನಾವೆಲ್ಲರೂ ನಮ್ಮಿಂದಾದ ಸಹಕಾರ ನೀಡೋಣ. ಸಮಾಜದ ದೀನರ ಸಹಾಯದಲ್ಲಿ ಪಾಲ್ಗೊಳ್ಳುವ ಮೂಲಕ ಪುಣ್ಯಭಾಜನರಾಗೋಣ.
ನಮ್ಮ ಜೀವನದ ವಿಶೇಷ ದಿನಗಳಲ್ಲಿ (ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಹಿರಿಯರ ನೆನಪಿನ ದಿನ), ಹಬ್ಬ ಹರಿದಿನಗಳಲ್ಲಿ ಇಲ್ಲಿ ಅನ್ನದಾನ ಮಾಡಬಹುದು.
ಇಲ್ಲಿನ ಗೋಶಾಲೆಯಲ್ಲಿ 34 ಹಸು ಮತ್ತು ಕರುಗಳಿದ್ದು ಗೋಸೇವೆಯನ್ನೂ ಮಾಡಬಹುದು. ಗೋವಿಗೆ ಆಹಾರ, ಹಿಂಡಿ ಇತ್ಯಾದಿ ನೀಡಬಹುದು. ಈ ಮಹತ್ತರ ಸೇವಾ ಕಾರ್ಯಕ್ಕೆ ಧನ ಸಹಾಯ ನೀಡುವ ಹೃದಯವಂತ ದಾನಿಗಳು, ಸಂಘ ಸಂಸ್ಥೆಗಳುCANARA BANK SRI SAI SEVA PRATHISTANAM A/c No: 120002158865 IFSC: CNRB0014228 Vorkadi branch ಇಲ್ಲಿಗೆ ನೀಡಿದ ಧನಸಹಾಯಕ್ಕೆ ಆದಾಯಕರ ವಿನಾಯಿತಿಯೂ ಇರುವುದು.(U/S 80G of IT Act 1961) www.srisainikethana.org https://maps.app.goo.gl/rmWAXFVyEVhLsCJ46 ಹೆಚ್ಚಿನ ಮಾಹಿತಿಗಾಗಿ ಸೇವಾಶ್ರಮದ ವೆಬ್ಸೈಟ್ ಖಾತೆಯಲ್ಲಿ ಮಾಹಿತಿ ಲಭ್ಯವಿದೆ. ದಾನಿಗಳು ಆಶ್ರಮ ವೀಕ್ಷಣೆಗಾಗಿ 9645126739, 9449966209 ಗೆ ನೇರ ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.