Breaking Posts

6/trending/recent
Type Here to Get Search Results !

8:10:45

ಸ್ಕೇಟಿಂಗ್: ಅನಘಾ ಮತ್ತು ಆರ್ನಾ ಸಾಧನೆ

ಸ್ಕೇಟಿಂಗ್: ಅನಘಾ ಮತ್ತು ಆರ್ನಾ ಸಾಧನೆ.
ಮಂಗಳೂರು: ದಕ್ಷಿಣ ಕನ್ನಡ ರೋಲರ್ ಸ್ಪೋಟ್ಸ್ ಅಸೋಸಿಯೇಶನ್ ಮಂಗಳೂರು ನೇತೃತ್ವದಲ್ಲಿ ನ. 9 ರಿಂದ 12 ರ ವರೆಗೆ ಮಂಗಳೂರಿನಲ್ಲಿ ನಡೆದ 11 ರಿಂದ 14 ವಯೋಮಿತಿಯ 39 ನೇ ಕರ್ನಾಟಕ ಸ್ಟೇಟ್ ಸೆಲೆಕ್ಷನ್ ಟ್ರೇಲ್ಸ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನಘಾ ರಾಜೇಶ್ ಅವರು 3,000 ಮೀ ರೋಡ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ 2 ಬೆಳ್ಳಿ, 5000 ಮೀ. ರಿಂಕ್ ಎಲಿಮಿನೇಶನ್ ರೇಸ್‌ನಲ್ಲಿ 1 ಕಂಚು ಪದಕ ಗೆದ್ದಿದ್ದಾರೆ. ಅನಘಾ ಅವರು ಮಂಗಳೂರು ಬಿಜೈಯ ಲೋರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ. ಇದೇ ಸ್ಪರ್ಧೆಯಲ್ಲಿ 7 ರಿಂದ 9 ವರ್ಷ ವಯೋಮಿತಿಯ ವಿಭಾಗದಲ್ಲಿ ಆರ್ನಾ ರಾಜೇಶ್ 1,000 ಮೀ. ರಿಂಕ್ ರೇಸ್‌ನಲ್ಲಿ 1 ಬೆಳ್ಳಿ ಪದಕ ಗೆದ್ದಿದ್ದಾರೆ. ಈಕೆ ಬಿಜೈಯ ಲೋರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿನಿ. ಇವರಿಬ್ಬರೂ ಕುಡ್ಲ ರೋಲರ್ ಸ್ಕೇಟಿಂಗ್ ಕ್ಲಬ್‌ನಿಂದ ತರಬೇತಿ ಪಡೆದಿದ್ದು, ಡಾ. ರಾಜೇಶ್ ಹುಕ್ಕೇರಿ ಮತ್ತು ಡಾ. ಅನಿತಾ ರಾಜೇಶ್ ದಂಪತಿಯ ಪುತ್ರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.