ಮುಖ್ಯ ಮಂತ್ರಿಯ ನವ ಕೇರಳ ಕಾರ್ಯಕ್ರಮಕ್ಕೆ ಜನ ಸೇರಿಸಲು ಕುಟುಂಬಶ್ರೀ ಯನ್ನು ಬೇದರಿಸುವ ಸಿ.ಪಿ.ಎಂ ತಂತ್ರ ರಾಜಕೀಯ ದಿವಾಳಿಯ ಸಂಕೇತ - ಬಿಜೆಪಿ.
ನವೆಂಬರ್ 07, 2023
0
ಮುಖ್ಯ ಮಂತ್ರಿಯ ನವ ಕೇರಳ ಕಾರ್ಯಕ್ರಮಕ್ಕೆ ಜನ ಸೇರಿಸಲು ಕುಟುಂಬಶ್ರೀ ಯನ್ನು ಬೇದರಿಸುವ ಸಿ.ಪಿ.ಎಂ ತಂತ್ರ ರಾಜಕೀಯ ದಿವಾಳಿಯ ಸಂಕೇತ - ಬಿಜೆಪಿ.
ಮಂಜೇಶ್ವರ: ರಾಜಕೀಯವಾಗಿ ದಿವಾಳಿ ಎದ್ದಿರುವ ಕೇರಳದಲ್ಲಿ ಮುಖ್ಯಮಂತ್ರಿಗೂ ಬೆಲೆ ಇಲ್ಲದಾಗಿದೆ.ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ರಸ್ತೆ ಬದಿಯಲ್ಲಿ ಮಾಡುವ ಕಾರ್ಯಕ್ರಮಕ್ಕೆ ಜನ ಸೇರಲ್ಲ ಎಂಬ ಇಲಾಖೆಯ ವರದಿಯ ಹಿನ್ನಲೆಯಲ್ಲಿ
ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಜನ ಸೇರಿಸಲು ಕುಟುಂಬಶ್ರೀ ಯನ್ನು ಬೆದರಿಸುತ್ತಿರುವ ತಂತ್ರ ಸಿ.ಪಿ.ಎಂ ಪಕ್ಷದ ರಾಜಕೀಯ ದಿವಾಳಿಯ ಸಂಕೇತ ಎಂದು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಆರೋಪಿಸಿದೆ.
ಅಟಲ್ ಬಿಹಾರಿ ವಾಜಪಾಯಿ ಯವರ ಸಂಕಲ್ಪ ಕುಟುಂಬ ಶ್ರೀ.
ಆದರೆ ಇಂದು ಕೇರಳದಲ್ಲಿ ಕುಟುಂಬ ಶ್ರೀಯನ್ನು ಬೆದರಿಸಿ ಪಿನರಾಯಿ ಕಾರ್ಯಕ್ರಮಕ್ಕೆ ಜನ ಸೇರಿಸಲು ಒತ್ತಡ ಹೇರುತ್ತಿರುವುದು ಅಧಿಕಾರದ ದುರುಪಯೋಗ ಎಂದು ಬಿಜೆಪಿ ತಿಳಿಸಿದೆ. ಬಿಜೆಪಿ ನವ ಕೇರಳ ಕಾರ್ಯಕ್ರಮ ಬಹಿಷ್ಕಾರ ಮಾಡಲಿದೆ. ಒತ್ತಡ ಹೇರಿ ಕುಟುಂಬ ಶ್ರೀ ಕಾರ್ಯಕರ್ತೆಯರನ್ನ, ಉದ್ಯೋಗ ಖಾತರಿ ನೌಕರರನ್ನ, ಹರಿತ ಕರ್ಮ ಸೇನೆ ಸೇವಕರನ್ನ ಬೆದರಿಸಿ ಕಾರ್ಯಕ್ರಮಕ್ಕೆ ಹಾಜರು ಮಾಡುವಂತೆ ಸರಕಾರ ಅಧಿಕಾರ ದುರುಪಯೋಗ ಆದೇಶ ಒಪ್ಪಲು ಸಾಧ್ಯವಿಲ್ಲ. ಕುಟುಂಬ ಶ್ರೀ ಕಾರ್ಯಕರ್ತರು ಪೀನಾರಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಬಿಜೆಪಿ ವಿನಂತಿಸಿದೆ. ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಸಭೆ ಹೊಸಂಗಡಿ ಪ್ರೇರಣಾದಲ್ಲಿ ಇಂದು ಬೆಳಗ್ಗೆ ಜರಗಿತು. ಸುಧಾಮ ಗೊಸಾಡ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷ
ಆದರ್ಶ್ ಬಿ.ಎಂ, ಮುಖಂಡರಾದ ಯಾದವ ಬಡಾಜೆ, ಹರಿಶ್ಚಂದ್ರ ಎಂ, ಮಣಿಕಂಠ ರೈ, ರಾಜೇಶ್ ಮಜಾಲು, ಲಕ್ಷ್ಮಣ ಬಿ.ಎಮ್, ವಿನಯ ಭಾಸ್ಕರ್, ಸುರೇಶ ಶೆಟ್ಟಿ, ಸುಪ್ರಿಯಾ ಶೆಣೈ, A.K ಕೈಯ್ಯಾರ್, ತುಳಸಿ ಕುಮಾರಿ, ರಕ್ಷಣ ಅಡಕಳಕಟ್ಟೆ, ಭಾಸ್ಕರ್ ಪೊಯ್ಯೇ ಉಪಸ್ಥಿತರಿದ್ದರು ಚಂದ್ರಹಾಸ ಸ್ವಾಗತಿಸಿ, ಯತೀರಾಜ್ ವಂದಿಸಿದರು. ನವಂಬರ್ 10 ರಂದು ಕಣ್ವತೀರ್ಥದಿಂದ ಆರಂಭವಾಗುವ ರವಿಶ ತಂತ್ರಿ ನೇತೃತ್ವದ "ತೀರ ದೇಶ ವಾಹನ ಜಾಥಾ" ಯಶಸ್ವಿಗೆ ತೀರ್ಮಾನಿಸಲಾಯಿತು.


