Breaking Posts

6/trending/recent
Type Here to Get Search Results !

8:10:45

"ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಬೇಕೆಂದು" ಆಗ್ರಹಿಸಿ ಅಂಬಿತ್ತಡಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಗೆ ಪ್ರತಿಭಟನಾ ಜಾಥಾ/ಧರಣಿ.

"ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಬೇಕೆಂದು" ಆಗ್ರಹಿಸಿ ಅಂಬಿತ್ತಡಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಗೆ ಪ್ರತಿಭಟನಾ ಜಾಥಾ/ಧರಣಿ.
ಮಂಜೇಶ್ವರ: ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಬೇಕೆಂದು ಆಗ್ರಹಿಸಿ ಅಂಬಿತ್ತಡಿ ಕ್ರಿಯಾ ಸಮಿತಿ ವತಿಯಿಂದ ಮಂಜೇಶ್ವರ ಗ್ರಾಮ ಪಂಚಾಯತ್ ಗೆ ಪ್ರತಿಭಟನಾ ಜಾಥಾ ಹಾಗೂ ಧರಣಿ ನಡೆಯಿತು.
ಮಂಜೇಶ್ವರ ಚರ್ಚ್ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಜಾಥಾದಲ್ಲಿ ಅಂಗನವಾಡಿ ಮಕ್ಕಳ ಪೋಷಕರು, ಊರವರು ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಬಳಿಕ
ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿ.ಪಿ.ಐ ಹಿರಿಯ ನೇತಾರ ಬಿ.ವಿ ರಾಜನ್ ಉದ್ಘಾಟಿಸಿದರು. ಬಶೀರ್ ಎಸ್.ಎಂ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಅಶ್ರಫ್ ಕುಂಜತ್ತೂರು, ಅಶ್ರಫ್ ಬಡಾಜೆ ಮೊದಲಾದವರು ಮಾತನಾಡಿದರು. ರಮೇಶ್, ಶಹನಾಜ್, ಜಬ್ಬಾರ್ ಬಹರೈನ್, ಅಶ್ರಫ್ ಚಕ್ಕುರು, ರಜಾಕ್ ಚಕ್ಕರು, ಕುಂಞ ಪೆಟ್ರೋಲ್, ರಜಾಕ್ ಕೆ ಎ, ಮಜೀದ್ ಮೊದಲಾದವರು ನೇತೃತ್ವ ನೀಡಿದರು. ಅಂಗನವಾಡಿ ವಿಷಯದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿರುವ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷಗಳ ನೇತಾರರ ಹಾಗೂ ಕಾರ್ಯಕರ್ತರ ವಿರುದ್ಧ ಪ್ರತಿಭಟನೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿಯ ಹೆಸರಿನಲ್ಲಿ ರಾಜಕೀಯ ಕೆಸರೆರಚಾಟವನ್ನು ಮುಂದುವರಿಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳ ನೇತಾರರು ಊರವರು ಸ್ವಂತವಾಗಿ ಖರೀದಿಸಿರುವ ಸ್ಥಳದಲ್ಲಿ ಅಂಗನವಾಡಿಯನ್ನು ನಿರ್ಮಿಸದೇ ಬಾಡಿಗೆ ಕೊಠಡಿಯಲ್ಲಿ ಚಿಣ್ಣರನ್ನು ಕೂರಿಸಿ ಆಗಾಗ ಬೆಕ್ಕು ತನ್ನ ಮರಿಯನ್ನು ಅಲ್ಲಲ್ಲಿ ಕೊಂಡು ಹೋಗುವ ರೀತಿಯಲ್ಲಿ ಚಿಣ್ಣರನ್ನು ಬೇರೆ ಬೇರೆ ಬಾಡಿಗೆ ಕೊಠಡಿಗಳಿಗಳಿಗೆ ಕೊಂಡೊಯ್ಯುತ್ತಿರುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರು ತಮ್ಮ ಅಸಮಧಾನವನ್ನು ವ್ಯಕ್ತ ಪಡಿಸಿದ್ದಾರೆ. ಅದೇ ರೀತಿ ಸೋಮವಾರದಂದು ಬಾಡಿಗೆ ಮನೆಯೊಂದರಲ್ಲಿ ಆರಂಭಗೊಂಡ ಅಂಗನವಾಡಿ ಎದುರು ಮಕ್ಕಳು ನಮಗೆ ಸ್ವಂತವಾಗಿ ಅಂಗನವಾಡಿ ಬೇಕೇ ಬೇಕು ನಮ್ಮ ಭವಿಷ್ಯವನ್ನು ರಕ್ಷಿಸಿ ನಮ್ಮ ಹೋರಾಟದೊಂದಿಗೆ ಸಹಕರಿಸಿ ಮೊದಲಾದ ಮನಕರಗಿಸುವಂತಹ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ದೃಶ್ಯ ಕಂಡು ಬಂದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.