Breaking Posts

6/trending/recent
Type Here to Get Search Results !

8:10:45

ಗುರಿ ಇದ್ದು, ಸಾಧಿಸುವ ಹಠ ಇದ್ದರೆ ಜೀವನದಲ್ಲಿ ಗೆಲುವನ್ನು ಕಾಣಬಹುದು - ನಿರ್ಮಲ್ ಕುಮಾರ್. ಸರಕಾರಿ ಪ್ರೌಢಶಾಲೆ ಕಡಂಬಾರಿನಲ್ಲಿ ಜೀವನ ಕೌಶಲ್ಯದ ಕುರಿತು ತರಗತಿ.

ಗುರಿ ಇದ್ದು, ಸಾಧಿಸುವ ಹಠ ಇದ್ದರೆ ಜೀವನದಲ್ಲಿ ಗೆಲುವನ್ನು ಕಾಣಬಹುದು - ನಿರ್ಮಲ್ ಕುಮಾರ್.
ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಕಡಂಬಾರಿನಲ್ಲಿ ಜೀವನ ಕೌಶಲ್ಯದ ಕುರಿತು ತರಗತಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಫಾರೂಕ್ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕೆ.ಬಿ ಸ್ವಾಗತಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೇರಳ ರಾಜ್ಯ ಶ್ರೇಷ್ಠ ಅಧ್ಯಾಪಕ ಪುರಸ್ಕಾರವನ್ನು ಪಡೆದ ನಿರ್ಮಲ್ ಕುಮಾರ್ ಭಾಗವಹಿಸಿ, ತಮ್ಮ ಅತ್ಯುತ್ತಮವಾದ ತರಗತಿಯನ್ನು ನಡೆಸುತ್ತಾ ನಮ್ಮ ಜೀವನದಲ್ಲಿ ಒಂದು ಗುರಿ ಬೇಕು ಆ ಗುರಿಯನ್ನು ಸಾಧಿಸುವ ಛಲ ನಮ್ಮಲ್ಲಿ ಇರಬೇಕು. ಇದರಿಂದ ನಾವು ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಅದೇ ರೀತಿ ನಮ್ಮ ಜೀವನದ ಯಶಸ್ಸಿನಲ್ಲಿ ನಮ್ಮ ತಂದೆ ತಾಯಿ ಗುರು ಹಿರಿಯರು ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ನಮ್ಮ ತಂದೆ ತಾಯಿಗಳನ್ನು ಎಂದಿಗೂ ನಾವು ಅವರ ಮನಸ್ಸಿಗೆ ಬೇಸರ ಕೊಡಬಾರದು ಅವರ ಮನಸ್ಸಿನ ಬಯಕೆಗಳನ್ನು ನಾವು ಈಡೇರಿಸಬೇಕು ಅವರಿಗೆ ಸದಾ ಗೌರವ ಕೊಡಬೇಕು ಎಂದು ಮಕ್ಕಳಿಗೆ ಹಿತವಚನವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಎಂ.ಸಿ ಚೆಯರ್ ಮ್ಯಾನ್ ಅಬ್ದುಲ್ ಕರೀಂ, ಕೌನ್ಸಿಲರ್ ಶೋಬನ, ಪ್ರಿಯಾ, ರೇಶ್ಮ ಹಿರಿಯ ಅಧ್ಯಾಪಕರಾದ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು. . ಶಾಲಾ ಎಸ್ ಆರ್ ಜಿ ಕನ್ವಿನರ್ ಮಮತಾ ಟೀಚರ್,ರಿಜಾ ಟೀಚರ್, ಸಮಾಜ ವಿಜ್ಞಾನ ಸೆಕ್ರೆಟರಿಯಾದ ರಾಜೇಶ್ ಕೊಡ್ಲಮೊಗರು ಹಾಗೂ ವಿದ್ಯಾರ್ಥಿಗಳಾದ ಅರ್ಪಿತ್, ಬುಶೈರ, ಸಹನ Y, C, ಸಹಮ , ಮಿಸ್ಬಾ ಮೊದಲಾದವರು ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ಮಂಡಿಸಿದರು. ಶ್ರೀಕಾಂತ್ ಉದುಮ ,ಗೀತಾ, ಶ್ರೀಕಲ, ನಿಶಾ, ಭವ್ಯ, ಸುನಿತಾ, ಸಹಕರಿಸಿದರು. ಶಾಲಾ ಸ್ಟಾಪ್ ಸೆಕ್ರೆಟರಿ ಅಬೂಬಕ್ಕರ್ ಧನ್ಯವಾದವಿತ್ತರು. ಗೋಪಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಲಘು ಉಪಹಾರವನ್ನು ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.