ಏತಡ್ಕ ಸಾಂತ್ವನ ಸ್ಪರ್ಶ ವಾಟ್ಸಪ್ ಗ್ರೂಪ್ ವತಿಯಿಂದ ಕುದಿಂಗಿಲ ಪುರುಷೋತ್ತಮ ರವರ ಚಿಕಿತ್ಸೆಗಾಗಿ ಧನ ಸಹಾಯ ವಿತರಣೆ.
ನವೆಂಬರ್ 16, 2023
0
ಏತಡ್ಕ ಸಾಂತ್ವನ ಸ್ಪರ್ಶ ವಾಟ್ಸಪ್ ಗ್ರೂಪ್ ವತಿಯಿಂದ ಕುದಿಂಗಿಲ ಪುರುಷೋತ್ತಮ ರವರ ಚಿಕಿತ್ಸೆಗಾಗಿ ಧನ ಸಹಾಯ ವಿತರಣೆ.
ಬದಿಯಡ್ಕ: ಸಾಂತ್ವನ ಸ್ಪರ್ಶ ವಾಟ್ಸಪ್ ಗ್ರೂಪ್ ಏತಡ್ಕ ಇದರ ನೇತೃತ್ವದಲ್ಲಿ ಪುರುಷೋತ್ತಮ ಕುದಿಂಗಿಲ ಇವರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಪುರುಷೋತ್ತಮರವರಿಗೆ ಕರ್ಷಕ ಮೋರ್ಚಾ ಮಂಡಲ ನೇತಾರರಾದ ವಿಷ್ಣುಭಟ್ ಪಡಿಕ್ಕಲ್ಲುರವರು ಏತಡ್ಕ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಕೃಷ್ಣ ಶರ್ಮಾ.ಜಿ, ಬಿಜೆಪಿ ಮಂಡಲ ಸದಸ್ಯರಾದ Y.K ಗಣಪತಿ ಭಟ್, ಶಶಿಧರ ಪಡಿಕ್ಕಲ್ಲು, ಕೃಷ್ಣ ನಾಯ್ಕ, ಮಧುಪ್ರಕಾಶ್, ಉದಯ.Y.B ಮೊದಲಾದವರು ಉಪಸ್ಥಿತರಿದ್ದರು.

