ದೀಪವಾಳಿ ದಿನದಂದು ಬಡ ಕುಟುಂಬಗಳಿಗೆ ಬೆಳಕಾದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ.
ನವೆಂಬರ್ 13, 2023
0
ದೀಪವಾಳಿ ದಿನದಂದು ಬಡ ಕುಟುಂಬಗಳಿಗೆ ಬೆಳಕಾದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ.
ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಇದರ 77 ನೇ ಯೋಜನೆಯ ವಾಗ್ದಾನವನು ಇಂದು ಫಲಾನುಭವಿಗಳ ಮನೆಯಲ್ಲಿ ನೀಡಲಾಯಿತು. ಮಾಂಗಲ್ಪಾಡಿ ಪಂಚಾಯತ್ ಒಳ್ಳಪಟ್ಟ ಉಪ್ಪಳ ಮುಸೋಡಿ ನಿವಾಸಿ ಸವಿತಾ ಇವರಿಗೆ ಕಿಡ್ನಿ ವೈಫಲ್ಯ ಹಾಗೂ ಆರೋಗ್ಯ ಸಮಸ್ಯೆ ಇದ್ದು, ಮದುವೆಯಾಗಿ ಗಂಡನು ಬಿಟ್ಟು, ಇದೀಗ ದುರುವಸ್ಥೆಯಲ್ಲಿರುವ ತಾಯಿ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ವಿಪರ್ಯಾಸ ಎಂದರೆ ಇವರಿಗೆ ಯಾವುದೇ ಸರ್ಕಾರದ ಸವಲತ್ತುಗಳು ಇಷ್ಟರವರೆಗೆ ಲಭಿಸಿಲ್ಲ, ಇವರ ಮನೆ ಕಡೆ ಯಾವುದೇ ಪಂಚಾಯತ್ ಸದಸ್ಯರಾಗಲಿ, ರಾಜಕಾರಣಿಗಳಗಲಿ ಇಷ್ಟರ ವರೆಗೆ ಕಡೆ ತಲೆ ಹಾಕಿ ಕೂಡ ನೋಡಿಲ್ಲ. ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಇವರಿಗೆ 77 ನೇ ಯೋಜನೆಯ ಮೊತ್ತವನ್ನು ನ್ಯಾಯವಾದಿ ನವೀನ್ ರಾಜ್ ರ ಮುಖಾಂತರ ಹಸ್ತಾಂತರ ಮಾಡಿದರು. ಹಾಗೂ ನಂದ ಹೊಸಂಗಡಿ ಅವರು ನೀಡಿದ 30 ಕೆ.ಜಿ ಅಕ್ಕಿಯನ್ನು ನೀಡಲಾಯಿತು. ಅದೇ ರೀತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟ್ರೋಕ್‌ನಿಂದ ಚಿಕಿತ್ಸೆ ಪಡೆಯುತ್ತಿರುವ ಮಧೂರಿನ ಸುಕುಮಾರ್ ಎಂಬರನ್ನು ಬೇಟಿಮಾಡಿ ಸಹಾಯ ಹಸ್ತವನ್ನು ನೀಡಲಾಯಿತು. ಈ ರೀತಿ ಈ ಸಂಸ್ಥೆ ದೀಪವಾಳಿ ದಿನದಂದು ಬಡ ಕುಟುಂಬಕ್ಕೆ ಬೆಳಕಾಯಿತು. ಈ ವೇಳೆ ಆಶಾ ಲೋಕೇಶ್ ಮಾಡ, ಮಮತಾ ಕೊಡ್ಲಮೊಗರು, ಕಿಶೋರ್ ಭಗವತಿ, ಅಂಕಿತ್ ಪಾವೂರ್, ಸುಕೇಶ್ ಬೆಜ್ಜ, ಶಿವ ಕರಿಬೈಲ್, ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.

