ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ ವಿಜೇತರಿಗೆ ಸಹಕಾರ ಭಾರತಿ ಅಭಿನಂದನೆ.
ನವೆಂಬರ್ 10, 2023
0
ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ. ವಿಜೇತರಿಗೆ ಸಹಕಾರ ಭಾರತಿ ಅಭಿನಂದನೆ.
ಮಂಜೇಶ್ವರ: ನವೆಂಬರ್ ನಾಲ್ಕರಂದು ನಡೆದ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಸಮಿತಿಯ ಚುನಾವಣೆಯಲ್ಲಿ ವಿಜಯಗಳಿಸಿದ ಸಹಕಾರ ಭಾರತಿಯ ಅಭ್ಯರ್ಥಿ ಶ್ರೀಧರ ಹೊಳ್ಳ ಅವರು ಬ್ಯಾಂಕ್ ನಿರ್ದೇಶಕ ಸಮಿತಿಯ ಅಧ್ಯಕ್ಷರಾಗಿ
ಚುನಾಯಿತರಾದರು. ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಗೆದ್ದ ಗಣಪತಿ ಭಟ್ ಕುಂಡೇರಿ , ಶ್ರೀಮತಿ ಶಾಲಿನಿ ಕುಮಾರಿ ಹಾಗೂ ಶ್ರೀಮತಿ ಆಶಾದೇವಿ ಅವರನ್ನು ಅಭಿನಂದಿಸಲಾಯಿತು.
ಸಂಘಪರಿವಾರದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿದ ಕಾರ್ಯಕರ್ತರನ್ನು ಅಭಿನಂದಿಸುವ ಕಾರ್ಯಕ್ರಮ ಪೈವಳಿಕೆ ಪಂಚಾಯತ್ ಸಮೀಪದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣೇಶ ಪಾರೆಕಟ್ಟೆ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ರಾಜ್ಯಸಮಿತಿ ಸದಸ್ಯರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಬಿಜೆಪಿ ನೇತಾರರಾದ ಹರಿಶ್ಚಂದ್ರ ಮಂಜೇಶ್ವರ, ಮುರಳೀಧರ ಯಾದವ್, ಸಹಕಾರ ಭಾರತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿದೂರು ಶಂಕರನಾರಾಯಣ ಭಟ್, ತಾಲೂಕು ಅಧ್ಯಕ್ಷ ಅಶೋಕ್ ಬಾಡೂರು, ಕುಂಡೇರಿ ಗಣಪತಿ ಭಟ್, ಕ್ಯಾಂಪ್ಕೋ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಬಾನೊಟ್ಟು, ಮತ್ತಿತರರು ಉಪಸ್ಥಿತರಿದ್ದರು. ಸರ್ಕಲ್ ಕೋ ಆಪರೇಟಿವ್ ಯೂನಿಯನ್ ಸದಸ್ಯರಾದ ವಿಘ್ನೇಶ್ವರ ಕೆದುಕೋಡಿ ಸ್ವಾಗತಿಸಿ, ಬಿಜೆಪಿ ನೇತಾರ ಲೋಕೇಶ ನೋಂಡ ವಂದಿಸಿದರು.



