Breaking Posts

6/trending/recent
Type Here to Get Search Results !

8:10:45

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ "ಬೃಹತ್ ನಿಧಿ ಸಮರ್ಪಣಾ ಕಾರ್ಯಕ್ರಮ" ಹಾಗೂ "ವಿಜ್ಞಾಪನಾ ಪತ್ರ ಬಿಡುಗಡೆ" ಸಮಾರಂಭವು ಈ ತಿಂಗಳ 5 ರಂದು.

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ "ಬೃಹತ್ ನಿಧಿ ಸಮರ್ಪಣಾ ಕಾರ್ಯಕ್ರಮ" ಹಾಗೂ "ವಿಜ್ಞಾಪನಾ ಪತ್ರ ಬಿಡುಗಡೆ" ಸಮಾರಂಭವು ಈ ತಿಂಗಳ 5 ರಂದು.
ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಸುಮಾರು 8.50 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ಬೃಹತ್ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಈ ತಿಂಗಳ 5 ರಂದು ರವಿವಾರ ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8:30ಕ್ಕೆ 108 ಕಾಯಿಗಳ ಮಹಾ ಗಣಯಾಗ, 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕದಪ್ಪರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಪರಮಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಲಿರುವರು. ಬ್ರಹ್ಮ ಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿ, ಆಧ್ಯಾತ್ಮಿಕ ಚಿಂತಕರಾದ ವಿಜಯ ಗುರೂಜಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೃಷ್ಣ ಕಾರ್ನವರ್, ಕನಿಲ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದುರು ಗೌರವ ಉಪಸ್ಥಿತರಿರುವರು. ಈ ವೇಳೆ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಿರುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಕೃಷ್ಣ ಎನ್ ಉಚ್ಚಿಲ್ ನಿಧಿ ಸಂಚಯನ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮಲ್ಪೆಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ರೋಹಿದಾಸ್ ಎಸ್ ಬಂಗೇರ, ಸುರೇಂದ್ರನ್, ಜನಾರ್ದನ್, ಅಡ್ಕ ಶ್ರೀ ಭಗವತಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೋಪಾಲ್ ಬಂದ್ಯೋಡ್, ಧಾರ್ಮಿಕ ಮುಂದಾಳುಗಳಾದ ಗಣೇಶ್ ಬಜಾಲ್, ಬಾಬು ಟಿ. ಬಂಗೇರ, ಸುಂದರ ಟಿ. ಬಂಗೇರ, ಜಯ ಸಿ. ಸಾಲ್ಯಾನ್, ರಮೇಶ್ ಬಂಗೇರ ಬೆಂಗಳೂರು, ಸುರೇಶ್ ಸಾಲ್ಯಾನ್, ರಾಮಪ್ಪ ಕುಂಬಳೆ, ಪುರುಷೋತ್ತಮ ಪಾವೂರು, ಶ್ರೀಮತಿ ಸಾವಿತ್ರಿ ಚಂದ್ರಶೇಖರ್ ಮುಂಬೈ, ಶ್ರೀಮತಿ ಸಹನಾ ಸುಜಿತ್, ಶ್ರೀಮತಿ ಮೋತಿ ಕಿರಣ್ ಉಪೇಂದ್ರ, ವಾಮನ ಇಡ್ಯ, ಗಣೇಶ್ ಕುಂಟಲಪಾಡಿ, ಚಂದ್ರಹಾಸ ಉಳ್ಳಾಲ್, ಜಯರಾಮ ಬಲ್ಲಂಗುಡೇಲು, ಸುಕುಮಾರ ಯು. ಉಪ್ಪಳ, ಸದಾಶಿವ ಉಳ್ಳಾಲ, ಗಣೇಶ್ ಪಾರಕಟ್ಟೆ, ಕೃಷ್ಣ ಕತ್ತಾರ್, ಶಂಕರ್ ರೈ ಮಾಸ್ಟರ್, ಸುಕುಮಾರ ಎನ್, ಜಯಂತ ಶೆಟ್ಟಿ ಕನಿಲ ಗುತ್ತು, ಶಿವಪ್ರಸಾದ್ ಕಟ್ಟೆ ಬಜಾರ್, ವಿಶ್ವನಾಥ ಪೊಯ್ಯಕಂಡ, ಗಣೇಶ್ .ಯು, ಕಿಶೋರ್ ಶೆಟ್ಟಿ ಬಂದ್ಯೊಡ್ ಮುದುಕುಂಜಗುತ್ತು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರುವರು. ಕನಿಲ ಶ್ರೀ ಭಗವತಿ ಕ್ಷೇತ್ರದ ಆಂಗ್ಲ ಮಾಧ್ಯಮ ಶಾಲ ಮಕ್ಕಳಿಂದ ಪ್ರಾರ್ಥನೆ, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಬೇ ಕಾರ್ಯದರ್ಶಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಸ್ವಾಗತಿಸಲಿರುವರು, ಧಾರ್ಮಿಕ ಮುಂದಾಳು ದಿನಕರ್ ಬಿ.ಎಂ ಹೊಸಂಗಡಿ ಕಾರ್ಯಕ್ರಮ ನಿರೂಪಿಸಲಿರುವರು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಲಕ್ಷ್ಮಣ್ ಟಿ ಸಾಲಿಯನ್ ಧನ್ಯವಾದ ನೀಡಲಿರುವರು. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಸುಮಾರು ಎಂಟು ಕೋಟಿಗೂ ಅಧಿಕ ನಿಧಿಯ ಅವಶ್ಯಕತೆ ಇದ್ದು ಭಕ್ತಾದಿಗಳು ತುಂಬು ಹೃದಯದಿಂದ ಸಹಕರಿಸಬೇಕಾಗಿ ಜೀರ್ಣೋದ್ದಾರ ಸಮಿತಿ ವಿನಂತಿಸಿಕೊಂಡಿದೆ. ಅದೇ ರೀತಿ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.