ನವರಾತ್ರಿಯ ಸಡಗರದಲ್ಲಿ ಆವಳ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕುರಿತ "ಆವಳದ ಐಸಿರಿ" ಭಕ್ತಿಗೀತೆ ಬಿಡುಗಡೆ.
ಅಕ್ಟೋಬರ್ 16, 2023
0
ನವರಾತ್ರಿಯ ಸಡಗರದಲ್ಲಿ ಆವಳ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕುರಿತ "ಆವಳದ ಐಸಿರಿ" ಭಕ್ತಿಗೀತೆ ಬಿಡುಗಡೆ.
ಬಾಯಾರು: ಹಲವು ವಿಧದ ಕಾರಣಿಕ ಭಕ್ತಿ ವಿಶೇಷದ ಮೂಲಕ ಪ್ರಸಿದ್ಧವಾದ "ಆವಳದ ತಾಯಿ ಶ್ರೀ ದುರ್ಗಾಪರಮೇಶ್ವರೀ" ಅಮ್ಮನವರ ಕುರಿತು, ನವರಾತ್ರಿಯ ಶ್ರೀ ದೇವಿಯ ವಿಶೇಷ ಅಲಂಕಾರ, ಭಕ್ತಿಯನ್ನು ಜನಮಾನಸದಲ್ಲಿ ನೆಲೆಸುವ ದೃಷ್ಟಿಯಲ್ಲಿ
UT ಕ್ರಿಯೇಷನ್ "ಆವಳದ ಐಸಿರಿ" ಎನ್ನುವ ಕನ್ನಡ ಭಕ್ತಿಗೀತೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆವಳದ ಮಠದ ದಿವ್ಯ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು. ಶ್ರೀಮತಿ ವಿಜೇತ ಎನ್.ಕೆ ಕುಲಾಲ್ ಬೇಕೂರು ನಿರ್ಮಾಣದಲ್ಲಿ ಎನ್ ಕೆ ಕುಲಾಲ್ ಬೇಕೂರು ಸಾಹಿತ್ಯ ಮತ್ತು ಗಾಯನದ ಜೊತೆ ಶ್ರೀಮತಿ ಲಿಖಿತಾ ಭಟ್ ಗಾಯಕಿಯಾಗಿ ಇರುವ ಆವಳದ ಐಸಿರಿ ಭಕ್ತಿಗೀತೆಯನ್ನು ಕಾರ್ತಿಕ್ ಲಾಲ್ಬಾಗ್ ನಿರ್ದೇಶಿಸಿದ್ದರು. ಬಿಡುಗಡೆ ಸಮಾರಂಭದಲ್ಲಿ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರ್ ನ ಮ್ಯಾನೇಜರ್ ಎಚ್.ಮಹಾಲಿಂಗ ಭಟ್, ಸುದೆಂಬಳ ಶ್ರೀನಿವಾಸ ಭಟ್, ಸಜಂಕಿಲ ಗೋವಿಂದ ಭಟ್, ಶ್ರೀ ಲಕ್ಷ್ಮೀ ನಾರಾಯಣ ಭಟ್ ಆವಳ ಮಠ, ಸೂರ್ಯನಾರಾಯಣ ಭಟ್ ಆವಳ, ವಿಷ್ಣು ಪ್ರಸಾದ್ ಭಟ್ ಆವಳ, ಇಂಚರಾ ಮೆಲೋಡೀಸ್ ಮಂಜೇಶ್ವರದ ಕೇಶವ ಕನಿಲ, ಗಾಯಕ ದಿನೇಶ್ ಮಿತ್ತನಡ್ಕ, ಆವಳದ ಪುರೋಹಿತರ ಸಮ್ಮುಖದಲ್ಲಿ ಆವಳದ ಐಸಿರಿ ಬಿಡುಗೊಡೆಗೊಂಡಿತು. ಪ್ರಶಾಂತಿ ವಿದ್ಯಾಲಯದ ಕೃಷ್ಣ ನಾಯಕ್, ಪ್ರಶಾಂತಿ ಪ್ರಾಂಶುಪಾಲರಾದ ವಾಮನನ್, ಸದಾಶಿವ ಭಟ್, ಶ್ರೀ ಹರಿ ಭಟ್, ನಾರಾಯಣ ಭಟ್, ಕೃಷ್ಣ ಪ್ರಸಾದ್, ಸೇಸಪ್ಪ ಕುಲಾಲ್, ಗಾಯಕಿ ಶ್ರೀಮತಿ ಲಿಖಿತಾ ಭಟ್, ನಿರ್ಮಾಪಕಿ ಶ್ರೀಮತಿ ವಿಜೇತ ಎನ್.ಕೆ ಕುಲಾಲ್, ಗಾಯಕ ಎನ್ .ಕೆ ಕುಲಾಲ್ ಬೇಕೂರು, ನಿರ್ದೇಶಕ ಕಾರ್ತಿಕ್ ಲಾಲ್ ಬಾಗ್, ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನವರಾತ್ರಿಯ ಸಂದರ್ಭದಲ್ಲಿ ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು ಇದರ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯ ಜನಮನ್ನಣೆ ಪಡೆಯಿತು. ಯು. ಟಿ. ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡ ಈ ಭಕ್ತಿಗೀತೆ https://www.youtube.com/channel/UCWgHzQqqFNdHt6F-923HWyQ ಈಗಾಗಲೇ ಭಕ್ತರ ಮನಗೆದ್ದಿದ್ದು ನೀವು ನೋಡಿ ಹರಸಿ ಹಾರೈಸಿ ಎಂಬುದೇ ಆಶಯ. ಸಮಾರಂಭವನ್ನು ಪ್ರಶಾಂತಿಯ ಶ್ರೀಮತಿ ಜ್ಯೋತಿಲಕ್ಷ್ಮಿ ನಿರೂಪಿಸಿ, ವಂದನಾರ್ಪಣೆ ಗೈದರು .


