ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ.
ಅಕ್ಟೋಬರ್ 02, 2023
0
ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ.
ವರ್ಕಾಡಿ: ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಆಚರಿಸಲಾಯ್ತು.
ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಫ್ರಾನ್ಸಿಸ್ ಡಿ' ಸೋಜರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸೋಮಪ್ಪ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಸಭೆಯಲ್ಲಿ ನೇತಾರರಾದ ಮೊಹಮ್ಮದ್ ಮಜಾಲ್, ಬಿ.ಕೆ. ಮುಹಮ್ಮುದ್, ರಝಾಕ್ ಹಾಜಿ, ಮುಹಮ್ಮದ್ ಕೊನಿಲ, ಮೂಸಾ. ಟಿ, ಅಬ್ದುಲ್ ರಹಿಮಾನ್ ಕೋಳ್ಯೂರು ಮುಂತಾದವರು ಉಪಸ್ಥಿತರಿದ್ದರು.
