ಕುದ್ರೋಳಿ ದಸರಾದ ಶೋಭಾಯಾತ್ರೆಯಲ್ಲಿ ತುಳುನಾಡಿನ ದೈವ ದೇವರ ಅವಹೇಳನ ಮಾಡುವ ಸ್ಥಬ್ದ ಚಿತ್ರ ನಿಷೇಧ.
ಅಕ್ಟೋಬರ್ 09, 2023
0
ಕುದ್ರೋಳಿ ದಸರಾದ ಶೋಭಾಯಾತ್ರೆಯಲ್ಲಿ ತುಳುನಾಡಿನ ದೈವ ದೇವರ ಅವಹೇಳನ ಮಾಡುವ ಸ್ಥಬ್ದ ಚಿತ್ರ ನಿಷೇಧ.
ಮಂಗಳೂರು: ಈ ಬಾರಿಯ ಕುದ್ರೋಳಿ ದಸರಾ ಮೆರವಣಿಗೆಯಲ್ಲಿ ತುಳುನಾಡಿನ ದೈವ ದೇವರಗಳನ್ನು ಅವಹೇಳನ ಮಾಡುವ ಸ್ತಬ್ಧ ಚಿತ್ರಗಳಿಗೆ ಅವಕಾಶ ಇಲ್ಲ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು. ಮಂಗಳೂರು ದಸರಾ ಮಹೋತ್ಸವ ಸಿದ್ಧತೆ ಹಾಗೂ ಸಂಘ - ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆಗಾಗಿ ಕುದ್ರೋಳಿಯಲ್ಲಿ ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳ ವಿಶೇಷ ಸಭೆಯಲ್ಲಿ ಮಾತನಾಡಿದರು. ಸಾಮರಸ್ಯದ ದಸರಾದಲ್ಲಿ ಪಾಲ್ಗೊಳ್ಳಲು ಹೊಸ ಸಂಘ ಸಂಸ್ಥೆಗಳು ಆಸಕ್ತಿ ವಹಿಸಿವೆ. ದಸರಾ ಮೆರವಣಿಗೆ ಅಕ್ಟೋಬರ್ 24 ರಂದು ಸಂಜೆ 4 ಕ್ಕೆ ಆರಂಭವಾಗಲಿದೆ. ಮೆರವಣಿಗೆಯ ಟ್ಯಾಬ್ಲೊಗಳಲ್ಲಿ ಯಾವುದೇ ಜಾತಿ, ಮತ, ಸಮುದಾಯ, ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ನಾಸಿಕ್ ಬ್ಯಾಂಡ್ ತಂಡಗಳು ಈ ಬಾರಿ ಪೊಲೀಸ್ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಬೇಕು ಎಂದು ಸೂಚನೆ ಬಂದಿದ್ದು, ಇದನ್ನು ಎಲ್ಲರೂ ಪಾಲಿಸಬೇಕು, ಕನ್ನಡ ಸಂಸ್ಕೃತಿ ಇಲಾಖೆಯ ಕಲಾತಂಡಗಳಿಗೂ ಸೂಕ್ತ ವ್ಯವಸ್ಥೆ ಮಾಡಿಕೊಡುವ ಜವಾಬ್ದಾರಿಯಿದ್ದು, ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
