Breaking Posts

6/trending/recent
Type Here to Get Search Results !

8:10:45

ಮಂಜೇಶ್ವರದಲ್ಲಿ ನವ ಕೇರಳ ಕರ್ಮ ಪದ್ಧತಿ ಅಂಗವಾಗಿ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ

ಮಂಜೇಶ್ವರದಲ್ಲಿ ನವ ಕೇರಳ ಕರ್ಮ ಪದ್ಧತಿ ಅಂಗವಾಗಿ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ.
ಮಂಜೇಶ್ವರ: ನವ ಕೇರಳ ಕರ್ಮ ಪದ್ಧತಿಯ ಜಲ ಬಜೆಟ್ - ನೀರೂರವ್ ಸಂಯೋಜಿತ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ ಮಂಜೇಶ್ವರ ಬ್ಲೋಕ್ ಪಂಚಾಯತ್ ಹಾಲ್ ನಲ್ಲಿ ನಡೆಯಿತು. ಜಲ ಸಂರಕ್ಷಣೆ ವಲಯದಲ್ಲಿ ವಿವಿಧ ಇಲಾಖೆಗಳ ಚಟುವಟಿಕೆಗಳು ಹಾಗೂ ಏಕೋಪನ ಸಾಧ್ಯತೆಗಳನ್ನು ಪರಿಶೀಲಿಸಿ ಬರಗಾಲವನ್ನು ಎದುರಿಸಲು ಸಿದ್ಧತೆಗಳ ತಯಾರಿಯಾಗಿದೆ. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ ಉದ್ಘಾಟಿಸಿದರು. BPLTC ಕನ್ವೀನರ್ ಅರ್ಜುನನ್ ಇ.ಕೆ ಅಧ್ಯಕ್ಷತೆ ವಹಿಸಿದ್ದರು.
DLTC ಕನ್ವೀನರ್ ಸಂಜೀವ್ ಪಿ.ಟಿ, DDPO ಕಲಾಮುದ್ದೀನ್ ಎಂಬಿವರು ಜಲ ಸಂರಕ್ಷಣೆ ಚಟುವಟಿಕೆಗಳ ಏಕೋಪಾನ ಸಾಧ್ಯತೆಗಳ ಕುರಿತು ತರಗತಿ ನೀಡಿದರು. ಪಂಚಾಯತ್ ಅಧ್ಯಕ್ಷೆಯಾರಾದ ಭಾರತಿ.ಎಸ್, ಸುಂದರಿ ಆರ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಯೂಸುಫ್ ಹೇರೂರು, ಪುಷ್ಪಲಕ್ಷ್ಮಿ ಎಂಬಿವರು ಶುಭಾಶಂನೆಗೈದರು. ನವ ಕೇರಳ ಕರ್ಮ ಪದ್ಧತಿ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ಜಲ ಬಜೆಟ್ ಕುರಿತು ವಿವರಿಸಿದರು. JBDO ನಾರಾಯಣ ನಾಯ್ಕ್ ಸ್ವಾಗತಿಸಿ. ಉದ್ಯೋಗ ಖಾತ್ರಿ ಬ್ಲಾಕ್ AE ಸೈನುದ್ದೀನ್ ಧನ್ಯವಾದ ಸಲ್ಲಿಸಿದರು. ನವಂಬರ್ 01 ಜಲಾಶಯ ಶೂಚಿಕರಣ ಜನಕಿಯ ಬೆಂಬಲದೊಂದಿಗೆ ನಡೆಸಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.