Breaking Posts

6/trending/recent
Type Here to Get Search Results !

8:10:45

ಅತಿ ವೇಗದಿಂದ ಬಂದ ಇನೋವಾ ಕಾರು ರಸ್ತೆದಾಡುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ. ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ನಡೆದ ಘಟನೆ.

ಅತಿ ವೇಗದಿಂದ ಬಂದ ಇನೋವಾ ಕಾರು ರಸ್ತೆದಾಡುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ. ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ನಡೆದ ಘಟನೆ.
ಮಂಜೇಶ್ವರ: ಅತಿ ವೇಗದಿಂದ ಬಂದ ಇನೋವಾ ಕಾರು ರಸ್ತೆದಾಡುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಘಟನೆ ಇಂದು ಮಸ್ಸಂಜೆ 6:30 ಗಂಟೆಗೆ ಉದ್ಯಾವರ ಮಾಡದಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಉದ್ಯಾವರ ಮಾಡ ಕ್ಷೇತ್ರ ಬಳಿಯ ನಿವಾಸಿ ರಘುನಾಥ ಆಳ್ವರ ಪುತ್ರ ಮಂಗಳೂರು ನಿಟ್ಟೆ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಮಂತ್ (17) ನನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಂತ್ ನ ತಲೆಗೆ ಗಾಯವಾದುದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಲೇಜು ಮುಗಿಸಿ, ಮನೆಗೆ ಹಿಂತಿರುಗುವ ವೇಳೆ ಉದ್ಯಾವರ ಮಾಡದಲ್ಲಿ ಬಸ್ಸಿಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಟುತ್ತಿರುವಾಗ ಕಾರು ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.