ಎಲ್. ಐ.ಸಿ ವತಿಯಿಂದ ಶಿಕ್ಷಕರ ದಿನಾಚರಣೆ. ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ, ಆರಿಕ್ಕಾಡಿ ಶಾಲೆಯ ಅಧ್ಯಾಪಕರಾದ ಕೃಷ್ಣ ಕುಮಾರ್ ರಿಗೆ ಗೌರವಾರ್ಪಣೆ.
ಸೆಪ್ಟೆಂಬರ್ 05, 2023
0
ಎಲ್. ಐ.ಸಿ ವತಿಯಿಂದ ಶಿಕ್ಷಕರ ದಿನಾಚರಣೆ. ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ, ಆರಿಕ್ಕಾಡಿ ಶಾಲೆಯ ಅಧ್ಯಾಪಕರಾದ ಕೃಷ್ಣ ಕುಮಾರ್ ರಿಗೆ ಗೌರವಾರ್ಪಣೆ.
ಕುಂಬಳೆ: ಎಲ್.ಐ.ಸಿ ಸಂಸ್ಥೆಯು 67 ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಇಂದು ಶಿಕ್ಷಕರ ದಿನಾಚರಣೆಯ ಭಾಗವಾಗಿ ಎಲ್. ಐ. ಸಿ ಕಾಸರಗೋಡು ಶಾಖೆಯ ವತಿಯಿಂದ ಆರಿಕ್ಕಾಡಿ ಜಿ.ಪಿ.ಎಲ್. ಪಿ. ಎಸ್ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಉತ್ತಮ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿ ವಿಜೇತ ಅಧ್ಯಾಪಕರಾದ ಕೃಷ್ಣ ಕುಮಾರರವರಿಗೆ ಎಲ್. ಐ. ಸಿ ಕಾಸರಗೋಡು ಶಾಖೆಯ ಸೀನಿಯರ್ ಬ್ರಾಂಚ್ ಮ್ಯಾನೇಜರ್ ರಾಗಿರುವ ವೇಣುಗೋಪಾಲ್ ರವರು ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಗ್ರಾಮ ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಶಾಲೆಯ ರಕ್ಷಕ, ಶಿಕ್ಷಕ ಸಮಿತಿಯ ಅಧ್ಯಕ್ಷರಾಗಿರುವ ಎ.ಆರ್ ರೆಹಮಾನ್ ಆರಿಕ್ಕಾಡಿ ವಹಿಸಿದರು. ಕಾರ್ಯಕ್ರಮದಲ್ಲಿ ಎಲ್. ಐ. ಸಿ ಕಾಸರಗೋಡು ಶಾಖೆಯ ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಶಶಿಧರನ್, ಎಲ್. ಐ. ಸಿ ಮಂಜೇಶ್ವರ ಶಾಖೆಯ ಮ್ಯಾನೇಜರ್ ಮನಿಷಾ, ಎಲ್. ಐ. ಸಿ ಪ್ರತಿನಿಧಿಗಳಾದ ಕೆ. ಸುಧಾಕರ ಕಾಮತ್, ಎಸ್.ಎಸ್. ಶರ್ಮ, ಶಿವಾನಂದ ರಾವ್, ವಿಜಯಲಕ್ಷ್ಮಿ, ವಸಂತಿ, ಜಯಂತಿ, ಶಾಲೆಯ ಅಧ್ಯಾಪಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಶಾಲೆಯ ಹೆಡ್ ಮಾಸ್ಟರ್ ರಾಗಿರುವ ಲೀಲಾ. ಪಿ ಸ್ವಾಗತಿಸಿ, ಶಾಲೆಯ ಅಧ್ಯಾಪಕಿ ವಿನಯ ವಂದಿಸಿದರು.
