Breaking Posts

6/trending/recent
Type Here to Get Search Results !

8:10:45

ಜನಪದ ಹಾಡುಗಾರ್ತಿ ಸರೋಜಿನಿ ಚಂಬ್ರಕಾನ (64) ನಿಧನ.

ಜನಪದ ಹಾಡುಗಾರ್ತಿ ಸರೋಜಿನಿ ಚಂಬ್ರಕಾನ ನಿಧನ.
ಪೆರ್ಲ: ಚಂಬ್ರಕಾನ ನಿವಾಸಿ ದಿ.ನಾರಾಯಣ ಎಂಬವರ ಪತ್ನಿ ಸರೋಜಿನಿ (64) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ 9 ಗಂಟೆಗೆ ನಿಧನರಾದರು. ಅಕ್ಕು ಹಾಗೂ ದಿ /ಚನಿಯ ಕುಂಡಕೋಳಿ ಇವರ ದ್ವಿತೀಯ ಪುತ್ರಿಯಾದ ಸರೋಜಿನಿ ಗದ್ದೆ ಕೃಷಿ ಕಾಯಕ ನಿರ್ವಹಿಸುತ್ತಿದ್ದು ಉತ್ತಮ‌ ಓಬೇಲೆ ಜನಪದ ಪಾರ್ದನಗಳನ್ನು ಹಾಡುತ್ತಿದ್ದರು. ಈ ಹಿಂದೆ ನಡೆದ ಎಣ್ಮಕಜೆ ಗ್ತಾಮ ಪಂಚಾಯತು ಸಾಕ್ಷರರ ಕಲೋತ್ಸವಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಮೃತರು ಮಕ್ಕಳಾದ ರವಿಶಂಕರ್, ಭವಾನಿ ಶಂಕರ, ಹರೀಶ, ಪೈವಳಿಕೆ ನಗರ ಶಾಲಾ ಅಧ್ಯಾಪಕ ಸಂಜೀವ ಸಿ.ಎಚ್., ಸವಿತಾ,ಸಹೋದರ ಸಹೋದರಿಯರಾದ ಕಮಲ ಅಕ್ಕ, ಗುಲಾಬಿ, ಲೀಲಾವತಿ ಕೊರಗಪ್ಪ, ಆನಂದ, ಯಾದವ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.