Breaking Posts

6/trending/recent
Type Here to Get Search Results !

8:10:45

ಕರೋನಾ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ (ಅಂತಾರಾಜ್ಯ ಸಾರಿಗೆ) ಮಂಜೇಶ್ವರ - ಪುತ್ತೂರು ಕೆ.ಬಿ.ಟಿ ಬಸ್ ಸಂಚಾರ ನಾಳೆಯಿಂದ ಆರಂಭ.

ಕರೋನಾ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ (ಅಂತಾರಾಜ್ಯ ಸಾರಿಗೆ) ಮಂಜೇಶ್ವರ - ಪುತ್ತೂರು ಕೆ.ಬಿ.ಟಿ ಬಸ್ ಸಂಚಾರ ನಾಳೆಯಿಂದ ಆರಂಭ.
ಮಂಜೇಶ್ವರ: ಕರೋನಾ ಹಿನ್ನಲೆಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಜೇಶ್ವರ ದಿಂದ ಪುತ್ತೂರಿಗೆ ತೆರಳುವ ಅಂತಾರಾಜ್ಯ ಖಾಸಗಿ ಬಸ್ "ಕೆ. ಬಿ. ಟಿ" ನಾಳೆಯಿಂದ ಎಂದಿನಂತೆ ಸಂಚಾರ ಆರಂಭವಾಗಲಿದೆ ಎಂದು ಪ್ರಸ್ತುತ ಕೆ.ಬಿ.ಟಿ ಬಸ್ ಬಸ್ ಮಾಲಕರಾಗಿರುವ ಐತಪ್ಪ ಶೆಟ್ಟಿ ದೇವಂದಪಡ್ಪು ನಮ್ಮ ಮಂಜೇಶ್ವರ ನ್ಯೂಸ್ ಗೆ ತಿಳಿಸಿದ್ದಾರೆ. ಕಳೆದ ಮೂರು ವರೆ ವರ್ಷಗಳಿಂದ ಕೆ. ಬಿ. ಟಿ ಬಸ್ ಸಂಚಾರವಿಲ್ಲದೇ, ಇದೇ ಬಸ್ ನ್ನು ಆಶ್ರಯಿಸಿಕೊಂಡಿದ್ದ ಕನ್ಯಾನ, ವಿಟ್ಲ, ಪುತ್ತೂರು ಶಾಲಾ/ಕಾಲೇಜಿನ ಮಕ್ಕಳು ಸೇರಿದಂತೆ ನಿತ್ಯ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಬಸ್ ಪುನರ್ ಪ್ರಾರಂಭವಾಗುವ ಮೂಲಕ ಮಂಜೇಶ್ವರದ ಜನತೆ ಹಾಗೂ ಪುತ್ತೂರಿನ ಜನತೆ ಸಂತಸದಲ್ಲಿದ್ದಾರೆ.
ಮಂಜೇಶ್ವರ ಹಾಗೂ ವರ್ಕಾಡಿ, ಆನೆಕಲ್ಲು, ಕನ್ಯಾನ, ವಿಟ್ಲ, ಪುತ್ತೂರು ಭಾಗದ ಗ್ರಾಮೀಣ ಪ್ರದೇಶ ಜನರು ತಮ್ಮ ಉದ್ಯೋಗ, ವಿಧ್ಯಾಭ್ಯಾಸ, ಆಸ್ಪತ್ರೆ ಮುಂತಾದ ಕೆಲಸ ಕಾರ್ಯಗಳಿಗಾಗಿ ಬೆಳಗ್ಗೆ ಹಾಗೂ ಸಂಜೆಯ ವೇಳೆ ಅತೀ ಹೆಚ್ಚಾಗಿ ಕೆ.ಬಿ.ಟಿ ಬಸ್ಸನ್ನೆ ಅವಲಂಬಿಸಿ ಕೊಂಡಿದ್ದರು. ಈ ಬಸ್ ಸಂಚಾರ ಸ್ಥಗಿತಗೊಂಡ ಬಳಿಕ ಬೆಳಗ್ಗೆ ಹಾಗೂ ಸಂಜೆ ವೇಳೆ, ಅತ್ತಿಂದಿತ್ತ ತೆರಳಲು ಬದಲಿ ಬಸ್ ಗಳಲ್ಲಿ ತೆರಳಬೇಕಾದ ಪರಿಸ್ಥಿತಿ ಉಂಟಾಯಿತು. ಇದೀಗ ಬಸ್ ಸಂಚಾರ ಪ್ರಾರಂಭವಾಗುವ ಮೂಲಕ ಇದೆ ಬಸ್ ನ್ನು ಆಶ್ರಯಿಸುವ ಗ್ರಾಮೀಣ ಪ್ರದೇಶಗಳ ಜನತೆಯಲ್ಲಿ ಸಂತಸ ತಂದಿದೆ. ಮಂಜೇಶ್ವರದಿಂದ ಬೆಳಗ್ಗೆ 6.40 ಕ್ಕೆ ಹೊಸಂಗಡಿ 6.50 ಹೊರಟು, ಪುತ್ತೂರಿಗೆ 9 ಗಂಟೆಗೆ ತಲುಪಲಿದೆ. ಪುತ್ತೂರಿನಿಂದ ಬೆಳಗ್ಗೆ 10.30 ಹಾಗೂ ಸಂಜೆ 5.40, ಹೊರಡಲಿದೆ. ಮಂಜೇಶ್ವರದಿಂದ ಮಧ್ಯಾಹ್ನ 2.40 ಕೆ ಹೊರಡಲಿದೆ. ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.