Breaking Posts

6/trending/recent
Type Here to Get Search Results !

8:10:45

ಬಡಾಜೆ ಶಾಲಾ ಶತಮಾನೋತ್ಸವ ಸಮಿತಿ ಸಭೆ. ಅಕ್ಟೋಬರ್ 8 ರಂದು ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ.

ಬಡಾಜೆ ಶಾಲಾ ಶತಮಾನೋತ್ಸವ ಸಮಿತಿ ಸಭೆ
ಮಂಜೇಶ್ವರ: ಬಡಾಜೆ ಶಾಲೆಯ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಸಭೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಯಾದವ ಬಡಾಜೆ ಉದ್ಘಾಟಿಸಿದರು. ನಿವೃತ್ತ ಅಧ್ಯಾಪಕರಾದ ಸತ್ಯನಾರಾಯಣ ಭಟ್ ಮಂಜೇಶ್ವರ, ರಾಜೇಶ್ ಮಾಸ್ಟರ್ ಮಂಜೇಶ್ವರ ಶುಭ ಹಾರೈಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಸಂಚಾಲಕರಾದ ಕಬೀರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಯಾಕೂಬ್, ಖಲೀಲ್, ಮೂಸ, ಶ್ರೀಧರ, ಶಶಿಕಲಾ, ಸುಮಯ್ಯ, ಸೌಮ್ಯ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಅಕ್ಟೊಬರ್ 8 ರಂದು ಬಡಾಜೆ ಶಾಲಾ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಜರಗಿಸುವುದೆಂದು, ಹೆಸರು ನೋಂದಾಯಿಸುವವರು ಅಕ್ಟೊಬರ್ 1ರ ಮೊದಲು ತಮ್ಮ ತಂಡದ ಹೆಸರು ಕೊಡಬೇಕಾಗಿ ತೀರ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ಪದ್ಮಾವತಿ ಸ್ವಾಗತಿಸಿ, ಇನ್ಶಿನ ಟೀಚರ್ ವಂದಿಸಿದರು. ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.