Breaking Posts

6/trending/recent
Type Here to Get Search Results !

8:10:45

ಎಸ್.ಎಸ್. ಎಲ್.ಸಿ ಅವಕಾಶ ವಂಚಿತರಿಗೆ ಸಹಾಯಕವಾಗಿ ಕೇರಳ ಸಾಕ್ಷರತಾ ಮಿಷನ್ ನ ಹತ್ತನೇ ಸಮತ್ವ ಪರೀಕ್ಷೆ ಆರಂಭ.

ಎಸ್.ಎಸ್. ಎಲ್.ಸಿ ಅವಕಾಶ ವಂಚಿತರಿಗೆ ಸಹಾಯಕವಾಗಿ ಸಾಕ್ಷರತಾ ಮಿಷನ್ ನ ಹತ್ತನೇ ಸಮತ್ವ ಪರೀಕ್ಷೆ ಆರಂಭ.
ಪೈವಳಿಕೆ: ಎಸ್.ಎಸ್. ಎಲ್.ಸಿ ಹತ್ತನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ವಂಚಿತರಾದ ಕಲಿಕೆದಾರರಿಗಾಗಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅನುಷ್ಠಾನಕ್ಕೆ ತಂದಿರುವ ಹತ್ತನೇ ಸಮತ್ವ ತರಗತಿಯ ಪರೀಕ್ಷೆಗಳು ಇದೀಗ ಕೇರಳ ರಾಜ್ಯದಾದ್ಯಂತ ಆರಂಭಗೊಂಡಿದೆ.
ಏಳನೇ ತರಗತಿ ಕಳೆದು ಎಸ್ಸಸೆಲ್ಸಿ ಪರೀಕ್ಷೆ ಬರೆಯಲಾಗದವರಿಗೆ ಜಿಲ್ಲಾ ಸಾಕ್ಷರತಾ ಮಿಷನಿನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲೂ 2022 - 23 ನೇ ವರ್ಷದ ಹತ್ತನೇ ಸಮತ್ವ ಪರೀಕ್ಷೆ ಕನ್ನಡ ಹಾಗೂ ಮಲೆಯಾಳ ಭಾಷೆಯಲ್ಲಿ ನಡೆಸಲಾಗುತ್ತಿದೆ. ವಿವಿಧ ಪಂಚಾಯತಿನ ಕಲಿಕೆದಾರರನ್ನು ಬ್ಲೋಕ್ ಮಟ್ಟದಲ್ಲಿ ವಿಭಜಿಸಿಕೊಂಡು ಆಯಾಯ ಮಾಧ್ಯಮಕ್ಕೆ ಪ್ರಾಧಾನ್ಯತೆ ಕಲ್ಪಿಸಿ ಪರೀಕ್ಷೆ ನಡೆಸಲಾಗುತ್ತಿದ್ದು, ಮಂಜೇಶ್ವರ ಬ್ಲೋಕಿಗೊಳಪಟ್ಟ ಕನ್ನಡ ಮಾಧ್ಯಮ ಕಲಿಕೆದಾರರ ಪರೀಕ್ಷೆ ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ದಿಂದ ಆರಂಭಗೊಂಡಿದೆ. ಸುಮಾರು 123 ಮಂದಿ ಕಲಿಕೆದಾರರು ಇಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಎಣ್ಮಕಜೆ, ಪುತ್ತಿಗೆ ಪಂಚಾಯತಿನ ಕಲಿಕೆದಾರರು ಎಸ್.ಎನ್.ಎಚ್ ಪೆರ್ಲ ಹಾಗೂ ಪೈವಳಿಕೆ ಯ ಜಿಎಚ್ ಎಸ್ ಪೈವಳಿಕೆ ನಗರ ಮತ್ತು ಎಸ್.ಎ.ಟಿ. ಮಂಜೇಶ್ವರದ ಕಲಿಕಾ ಕೇಂದ್ರಗಳಲ್ಲಿ ಅಭ್ಯಾಸಿಸಿದ ಕಲಿಕೆದಾರರು ಈ ಬಾರಿ ಪೈವಳಿಕೆ ನಗರ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದು 17 ವರ್ಷ ಪ್ರಾಯದಿಂದ ಮೇಲ್ಪಟ್ಟು 58 ವರ್ಷ ಪ್ರಾಯದ ವರೆಗಿನವರು ಇದರಲ್ಲಿ ಒಳಗೊಂಡಿದ್ದಾರೆ.
ಪೈವಳಿಕೆ ನಗರ ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಮಾಸ್ತರ್ ಚೀಪ್ ಸೂಪರ್ ವೈಸರ್ ಹಾಗೂ ವತ್ಸಲ ಜೆ.ಎಸ್. ಸಹಾಯಕ ಸೂಪರ್ ವೈಸರ್ ಆಗಿ ಪರೀಕ್ಷೆ ನಿಭಾಯಿಸುತ್ತಿದ್ದಾರೆ. ಎಣ್ಮಕಜೆ ಪಂಚಾಯತಿನ ಸೆಂಟರ್ ಕೋರ್ಡಿನೇಟರ್ ಆನಂದ ಕುಕ್ಕಿಲ, ಪೈವಳಿಕೆ ಪಂಚಾಯತಿನ ವಿಶ್ವನಾಥ್, ಮಂಜೇಶ್ವರ ಪಂಚಾಯತಿನ ಕೋರ್ಡಿನೇಟರ್ ಶೋಭಾ, ಪೈವಳಿಕೆ ನಗರ ಶಾಲಾ ಪಿಟಿಎ ಅಧ್ಯಕ್ಷ ರಮೇಶ್ ಪರೀಕ್ಷೆಯ ನಿರ್ವಹಣೆಗೆ ಸಹಕರಿಸಿದರು. ಸೆ. 20ಕ್ಕೆ ಹತ್ತನೇ ಸಮತ್ವ ಪರೀಕ್ಷೆ ಮುಕ್ತಾಯಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.