ಸ್ಕೂಟರ್ ನಿಂದ ರಸ್ತೆಗೆಸೆಯಲ್ಪಟ್ಟ ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡು ಮೃತ್ಯು. ತೊಕ್ಕೊಟ್ಟುನಲ್ಲಿ ನಡೆದ ಘಟನೆ.
ಸೆಪ್ಟೆಂಬರ್ 25, 2023
0
ಸ್ಕೂಟರ್ ನಿಂದ ರಸ್ತೆಗೆಸೆಯಲ್ಪಟ್ಟ ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡು ಮೃತ್ಯು. ತೊಕ್ಕೊಟ್ಟುನಲ್ಲಿ ನಡೆದ ಘಟನೆ.
ತೊಕ್ಕೊಟ್ಟು: ಸ್ಕೂಟರಿಂದ ರಸ್ತೆಗೆಸೆಯಲ್ಪಟ್ಟ ಸಹಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ.66 ತೊಕ್ಕೊಟ್ಟು ಬಳಿಯ ಕಲ್ಲಾಪು ನಾಗನ ಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿ ಸುಮ ನಾರಾಯಣ ಗಟ್ಟಿ(51) ಮೃತಪಟ್ಟ ಮಹಿಳೆ.
ಸುಮ ಅವರು ನಿನ್ನೆ ಮದ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟಂಬದ ತರವಾಡು ಅರಮನೆಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಾಯಂಕಾಲ ತಮ್ಮನ ಜತೆ ಸ್ಕೂಟರಲ್ಲಿ ಜಪ್ಪಿನ ಮೊಗರುವಿಗೆ ತೆರಳಿ ಅಸೌಖ್ಯದಿಂದ ಬಳಲುತ್ತಿದ್ದ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುವಾಗ ರಾತ್ರಿ ವೇಳೆ ರಾ.ಹೆ.66 ರ ಕಲ್ಲಾಪು ನಾಗನ ಕಟ್ಟೆಯ ಬಳಿ ಸುಮ ಸ್ಕೂಟರಿಂದ ಕೆಳಗೆ ಎಸೆಯಲ್ಪಟ್ಟು ಮೃತ ಪಟ್ಟಿದ್ದಾರೆ.ಸುಮ ಅವರ ಸೀರೆಯ ಸೆರಗು ಸ್ಕೂಟರ್ನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಸುಮ ಗಟ್ಟಿ ಅವರು ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು ಹಲವಾರು ಸಂಘ, ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರು ಪತಿ, ಎರಡು ಹೆಣ್ಣು, ಒಂದು ಗಂಡು ಮಗನನ್ನ ಅಗಲಿದ್ದಾರೆ.

