Breaking Posts

6/trending/recent
Type Here to Get Search Results !

8:10:45

ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಪೆರ್ಲ ಶೇಣಿ ಶಾಲಾ ಬಳಿ ನಿವಾಸಿ ಲವೀನಾ ಪ್ರಸಾದ್ (34) ನಿಧನ.

ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಪೆರ್ಲ ಶೇಣಿ ಶಾಲಾ ಬಳಿ ನಿವಾಸಿ ಲವೀನಾ ಪ್ರಸಾದ್ (34) ನಿಧನ.
ಪೆರ್ಲ : ಅಸೌಖ್ಯ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾಣದೆ ಮೃತಪಟ್ಟಿದ್ದಾರೆ. ಮಣಿಯಂಪಾರೆಯ ಶೇಣಿ ಶಾಲಾ ಬಳಿ ನಿವಾಸಿ ಮಾರ್ಸೆಲ್ ಡಿ.ಸೋಜರ ಪುತ್ರ ಲವೀನಾ ಪ್ರಸಾದ್ (38) ಮೃತಪಟ್ಟ ವ್ಯಕ್ತಿ. ಕಳೆದ ಕೆಲವು ಸಮಯಗಳಿಂದ ಕರುಳು ಸಂಬಂಧಿ ಅಸೌಖ್ಯದಿಂದ ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸಾದ್ ಆದಿತ್ಯವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಗುಜರಾತಿನಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲವೀನ ಪ್ರಸಾದ್ ಕಳೆದ ಒಂದು ತಿಂಗಳ ಹಿಂದೆ ಅಸೌಖ್ಯ ಕಾರಣ ಊರಿಗೆ ಮರಳಿ ಚಿಕಿತ್ಸೆ ಪಡೆಯುತ್ತಿದ್ದರು.
ಅವಿವಾಹಿತರಾಗಿದ್ದ ಇವರ ತಾಯಿ ವರ್ಷಗಳ ಹಿಂದೆ ಅಸೌಖ್ಯ ಬಾಧಿಸಿ ತೀರಿಕೊಂಡಿದ್ದರು. ಮೃತರು ತಂದೆ ಸಹೋದರ ಸುಜಿತ್ ಕುಮಾರ್, ಸಹೋದರಿಯರಾದ ಜ್ಯೋತಿ (ಇಟಲಿಯಲ್ಲಿ ಭಗಿನಿ), ಉಷಾ ಕುಮಾರಿ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ. ಸೋಮವಾರ (ಇಂದು) ಮಧ್ಯಾಹ್ನ 3 ಗಂಟೆಯ ಬಳಿಕ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನಲ್ಲಿ ಸಂಸ್ಕಾರ ಕಾರ್ಯ ನಡೆಯಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.