ತಲಪಾಡಿ ನಾರ್ಲದಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ.
ಸೆಪ್ಟೆಂಬರ್ 05, 2023
0
ತಲಪಾಡಿ ನಾರ್ಲದಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ.
ಮಂಜೇಶ್ವರ: ಕೇರಳ - ಕರ್ನಾಟಕ ಗಡಿ ಭಾಗವಾದ ತಲಪಾಡಿ ನಾರ್ಲ ನಿವಾಸಿ ನಸೀಮಾ ಎಂಬವರ ಪುತ್ರ ಫೈಸಲ್ (24) ಎಂಬಾತ ಇಂದು ಬೆಳಗ್ಗೆ 10 ಗಂಟೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಲಿ ಕೆಲಸ ಮಾಡುತ್ತಿರುವ ಫೈಸಲ್ ತಾಯಿ ನಸೀಮಾ ಜೊತೆ ವಾಸಿಸುತ್ತಿದ್ದು, ಇಂದು ಬೆಳಗ್ಗೆ ಮನೆಗೆ ದೀನಸಿ ಸಾಮಗ್ರಿ ತರಲೆಂದು ತಾಯಿ ನಸೀಮಾ ಅಂಗಡಿಗೆ ತೆರಳಿದ ವೇಳೆ ಫೈಸಲ್ ತಾಯಿಯ ಸೀರೆಯಿಂದ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಗಡಿಯಿಂದ ಮರಳಿ ಬಂದ ನಸೀಮಾ ಘಟನೆ ಕಂಡು ಪರಿಸರದವರಿಗೆ ಮಾಹಿತಿ ನೀಡಿದ್ದು, ಕೂಡಲೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೈಯಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತ ಫೈಸಲ್ ತಾಯಿ, ಹಾಗೂ ಏಕ ಸಹೋದರ ನೌಫಲ್ ಮತ್ತು ಸಹೋದರಿ ಆಯಿಷಾಳನ್ನು ಅಗಲಿದ್ದಾನೆ. ಫೈಸಲ್ ನ ಸಹೋದರ ನೌಫಲ್ ಮುಡಿಪುವಿನಲ್ಲಿ ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
