Breaking Posts

6/trending/recent
Type Here to Get Search Results !

8:10:45

ದಿನ್ ದಯಾಳ್ ರ ಜೀವನ ಕಾರ್ಯಕರ್ತರಿಗೆ ಪ್ರೇರಣೆ.- ಬಿಜೆಪಿ.

ದಿನ್ ದಯಾಳ್ ರ ಜೀವನ ಕಾರ್ಯಕರ್ತರಿಗೆ ಪ್ರೇರಣೆ.- ಬಿಜೆಪಿ.
ಮಂಜೇಶ್ವರ: ಪಂಡಿತ್ ದಿನ್ ದಯಾಳ್ ರವರ ಜೀವನ ಶೈಲಿ ಇಂದಿನ ರಾಜಕೀಯ ನೇತಾರರರಿಗೆ ಪ್ರೇರಣ ಶಕ್ತಿಯಾಗಿದೆ. ಅಂದು ಅವರು ಕಂಡ ಕನಸು ಇಂದು ದೇಶದ ಪ್ರಧಾನಿ ನರೇಂದ್ರಮೋದಿಯವರು ನನಸು ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಹೇಳಿದರು. ದಿನ್ ದಯಾಳ್ ಸಂಸ್ಮರಣ ದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವರ್ಕಾಡಿಯಲ್ಲಿ ಹಮ್ಮಿಕೊಂಡ ಪುಷ್ಪಾರ್ಚನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕ್ರಮಗಳ ವಿವರಣೆ ನೀಡಿದರು. ನಂತರ ನಡೆದ ಬಿಜೆಪಿ ಮಂಡಲ ಮೀಟಿಂಗ್ ನಲ್ಲಿ ಪಂಚಾಯತ್, ಹಾಗೂ ಬ್ಲಾಕ್, ಜಿಲ್ಲಾ ಮಟ್ಟದ ಕೇರಳೋತ್ಸವದಲ್ಲಿ ತುಳುನಾಡಿನ ಸಂಸ್ಕೃತಿಕ ಕಲೆ ಕುಣಿತ ಭಜನೆಯನ್ನು ಸ್ಪರ್ಧಾ ಕಾರ್ಯಕ್ರಮವಾಗಿ ಸೇರ್ಪಡೆ ಮಾಡಿ ಅವಕಾಶ ನೀಡಬೇಕೆಂದು ಆಗ್ರಹಿಸಲಾಯಿತು. ಪೊಲೀಸ್ ರಿಗೆ ಹಲ್ಲೆ ನಡೆಸು ಜೈಲವಾಸ ಅನುಭವಿಸಿ ಹೊರ ಬಂದ ಮುಸ್ಲಿಂ ಲೀಗ್ ನೇತಾರ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ಸಿಬಂದಿಗಳಿಗೆ ಹಲ್ಲೆ ಮಾಡಿರುವುದು ಖಂಡನೀಯ. ಮುಸ್ಲಿಂ ಲೀಗ್ ರಾಜಕೀಯ ನೈತಿಕತೆ ಇದ್ದರೆ ಇಂತಹ ಗುಂಡಾಗಳನ್ನು ವಜಾ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಾಗೂ ಗುಂಡಾಗಳನ್ನು ಸಮರ್ಥಿಸುವ ಮಂಜೇಶ್ವರ ಶಾಸಕರ ಪ್ರವೃತ್ತಿ ನಾಡಿಗೆ ಅವಮಾನ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರರದ ಮಣಿಕಂಠ ರೈ, ಅಶ್ವಿನಿ ಪಜ್ವ, ಕೆ. ವಿ ಭಟ್, ನಾರಾಯಣ ತುಂಗ, ಶಂಕರ ನಾರಾಯಣ ಮುಂದಿಲ, ರಕ್ಷನ್ ಅಡೆಕಳಕಟ್ಟೆ, ಲೋಕೇಶ್ ನೋಂಡ, ರವಿ ವರ್ಕಾಡಿ, ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು ಚಂದ್ರಹಾಸ ಕಡಂಬಾರ್ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.